ಚಂದ್ರ 1    

ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ; ಭೂಮಿಗೆ ನೆರೆ ಆಕಾಶಕಾಯ; ಇತರ ಲೋಕಗಳಿಗೆ ಪ್ರಯಾಣ ಮಾಡುವ ಪ್ರಯತ್ನಗಳಲ್ಲಿ ಮನುಷ್ಯ ಕಾಲೂರಿದ ಪ್ರಥಮ ಆಕಾಶಕಾಯ ಉಪಗ್ರಹ (ಸ್ಯಾಟೆಲೈಟ್) ಮತ್ತು ಚಂದ್ರ ಪದಗಳನ್ನು ಸಮಾನಾರ್ಥದಲ್ಲಿ ಬಳಸುವುದು ಕೂಡ ಉಂಟು. ಉದಾಹರಣೆಗೆ, ಗುರುವಿಗೆ 50ಕ್ಕೂ ಹೆಚ್ಚು ಚಂದ್ರಗಳಿವೆ.
  ಪ್ರಸಕ್ತ ಲೇಖನವನ್ನು ಈ ಕೆಳಗಿನ ಮುಖ್ಯ ಶೀರ್ಷಿಕೆಗಳ ಅಡಿಯಲ್ಲಿ ಅಳವಡಿಸಿದೆ:
 I ಚಂದ್ರನ ಉಗಮ 
 II ಭೌತ ಸ್ವರೂಪ 
1. ದ್ರವ್ಯರಾಶಿ 
2. ಗಾತ್ರ
3. ಸಾಂದ್ರತೆ
4. ಗುರುತ್ವ ಬಲ
5. ವಿಮೋಚನ ವೇಗ 
6. ವಾಯುಮಂಡಲ ಮತ್ತು ಜಲರಾಶಿ
7. ನೈಸರ್ಗಿಕ ಬಲಗಳು
8. ಪ್ರಾಕೃತಿಕ ಸ್ಥಿತಿ
9. ಸಮುದ್ರಗಳು
10. ಕೂಪಗಳು
11. ಪರ್ವತಗಳು
12. ಮ್ಯಾsಸ್ಕಾನುಗಳು
13. ಚಂದ್ರಸ್ಮಾರಕಗಳು
14. ಚಂದ್ರ ತಲದಲ್ಲಿನ ರಾಸಾಯನಿಕಗಳು
15. ಚಂದ್ರನ ಅದೃಶ್ಯ ಭಾಗ
III ಚಲನೆಗಳು
1 ಆವರ್ತನೆ, ಪರಿಭ್ರಮಣೆ
2 ದೋಲನಗಳು
3 ಕಕ್ಷೆ
4 ಆಕಾಶದಲ್ಲಿ ಚಂದ್ರನ ಚಲನೆ
5. ಶರಚ್ಚಂದ್ರ
IV ಕಲೆಗಳು
V ತಿಂಗಳ ಬೆಳಕು
VI ಕೆಲವು ಉಪಯುಕ್ತ ಮಾಹಿತಿಗಳು
VII ಭಾರತೀಯ ಖಗೋಳ ವಿಜ್ಞಾನದಲ್ಲಿ ಚಂದ್ರ
VIII ಮಾನವ, ಚಂದ್ರನ ಮೇಲೆ
I ಚಂದ್ರನ ಉಗಮ : ಐದು ಮುಖ್ಯ ಊಹೆಗಳು (ಹೈಪಾಥಿಸಸ್) ಇವೆ: 
		ಮೊದಲನೆಯದು ಅನುರಣನ (ರೆಸೊನೆನ್ಸ್) ಊಹೆ: ಇದನ್ನು ಮಂಡಿಸಿದಾತ ಜಾರ್ಜ್ ಹೊವಾರ್ಡ್ ಡಾರ್ವಿನ್ (1845-1912). ಇದರ ಸಾರವಿಷ್ಟು, ಚಂದ್ರ-ಭೂಮಿ ನಡುವೆ ಪರಸ್ಪರ ಗುರುತ್ವಾಕರ್ಷಣಬಲ ವರ್ತಿಸುತ್ತಿರುವುದು ಸರಿಯಷ್ಟೆ. ಭೂಮಿಯ ಮೇಲೆ ಚಂದ್ರನ ಆಕರ್ಷಣೆಯ ಪರಿಣಾಮವನ್ನು ಸಮುದ್ರದ ಭರತ ಇಳಿತಗಳಲ್ಲಿ ಚೆನ್ನಾಗಿ ಗುರುತಿಸಬಹುದು. 

ಚಿತ್ರ-1

24 ಗಂಟೆಗಳ ದಿವಸವೊಂದಕ್ಕೆ ಒಂದು ಸುತ್ತಿನಂತೆ ಸತತವಾಗಿ ಆವರ್ತಿಸುತ್ತಿರುವ ಭೂಮಿಯ ವೇಗದ ವಿರುದ್ಧ ಬಿರಿಗಳಂತೆ (ಬ್ರೇಕ್ಸ್) ಈ ಭರತ-ಇಳಿತಗಳು ವರ್ತಿಸುತ್ತವೆ. ತತ್ಪರಿಣಾಮವಾಗಿ ಭೂಮಿಯ ಆವರ್ತನವೇಗ ಲಕ್ಷಾಂತರ ವರ್ಷಗಳಲ್ಲಿ ಕ್ರಮೇಣ ಕುಂಠಿತವಾಗುತ್ತದೆ. ಅದೇ ವೇಳೆಯಲ್ಲಿ, ಗತಿವೈಜ್ಞಾನಿಕ ನಿಯಮಗಳು ತಿಳಿಸುವಂತೆ, ಚಂದ್ರ-ಭೂಮಿ ಅತಿ ಸಮೀಪವಾಗಿದ್ದ ಕಾಲ ಒಂದಿರಬೇಕು, ಅದಕ್ಕೂ ಹಿಂದೆ ಅವೆರಡೂ ಕೂಡಿಕೊಂಡು ಅಖಂಡವಾದ ಒಂದೇ ವಸ್ತು ಇದ್ದಿರಬೇಕು ಎಂಬ ಅಂಶ ಸ್ಪಷ್ಟವಾಗುತ್ತದೆ. ಆ ದಿವಸಗಳಲ್ಲಿ ಚಂದ್ರ-ಭೂಮಿಯ ಆವರ್ತನವೇಗ ಈಗಿನದರ ಆರುಪಟ್ಟು ಜಾಸ್ತಿ-ಅಂದರೆ ಅಂದಿನ ಆವರ್ತನಾವಧಿ ಅಥವಾ ದಿವಸದ ಉದ್ದ 4 ಗಂಟೆಗಳು-ಇದ್ದಿರಬೇಕು. ಈಗ ಕಲ್ಪನೆಯನ್ನು ಇನ್ನಷ್ಟು ಗತಕಾಲಕ್ಕೆ, ಎಂದರೆ ಭೂಮಿಯ ಉಗಮದ ವೇಳೆಗೆ, ಹರಿಸಬೇಕು. ಮೊದಲು ಅನಿಲರೂಪದಲ್ಲಿದ್ದ ಭೂಮಿಯ ಹೊರ ಮೈ ವಿಸರಣೆಯಿಂದ (ರೇಡಿಯೇಷನ್) ಉಷ್ಣವನ್ನು ಕಳೆದುಕೊಂಡು ದ್ರವರೂಪಕ್ಕೆ ಇಳಿಯಿತು. ಆಗ ನೀರು ಹಬೆಯ ರೂಪದಲ್ಲಿ ಭೂಮಿಯನ್ನು ಆವರಿಸಿತ್ತು. ಇನ್ನಷ್ಟು ಉಷ್ಣ ನಷ್ಟವಾದಂತೆ ಭೂಮಿಯ ಮೇಲು ಭಾಗ ಘನೀಭವಿಸಿತು ಮತ್ತು ಮುಂದೊಂದು ದಿವಸ ಮೊದಲ ಮಳೆ ಮುಸಲಧಾರೆಯಲ್ಲಿ ಸಹಸ್ರಾರು ವರ್ಷಗಳ ಕಾಲ ಸುರಿಯಿತು. ಇದು ನಡೆದದ್ದು ಒಂದು ಒಂದೂವರೆ ಬಿಲಿಯನ್ ವರ್ಷಗಳಿಗೂ ಹಿಂದೆ (1 ಬಿಲಿಯನ್ = 100 ಕೋಟಿ). ಕಮರಿ ಕೊರಕಲುಗಳೆಲ್ಲ ನೀರಿನಿಂದ ತುಂಬಿ ಸಮುದ್ರ ಸರೋವರಗಳಾದುವು. ಇವುಗಳ ಮೇಲೆ ಸೂರ್ಯಾಕರ್ಷಣೆಯ ಪರಿಣಾಮವಾಗಿ ಉಬ್ಬರವಿಳಿತಗಳು ತಲೆದೋರಿದ್ದವು. ಭೂಮಿಯ ಆವರ್ತನೆಯ ಅವಧಿಯಲ್ಲಿ (ಅಂದು 4 ಗಂಟೆಗಳು) ಉಬ್ಬರವಿಳಿತಗಳು ಎರಡು ಸಲ ಕಾಣಿಸಿಕೊಳ್ಳುತ್ತಿದ್ದವು. ಅವುಗಳ ಅವಧಿಕಾಲ 2 ಗಂಟೆಗಳು. ಅಂದರೆ ಆವರ್ತನಾವಧಿಗೂ ಉಬ್ಬರವಿಳಿತಗಳ ಅವಧಿಕಾಲಕ್ಕೂ ಒಂದು ನಿರ್ದಿಷ್ಟ ಪೂರ್ಣಾಂಕ ಸಂಬಂಧ ಏರ್ಪಟ್ಟಿತ್ತು. ಹೀಗಾಗಿ ಪ್ರತಿ ಒಂದು ಆವರ್ತನೆಯಲ್ಲೂ ಉಬ್ಬರವಿಳಿತಗಳು ಭೂಮಿಗೆ ಹೆಚ್ಚಿನ ಬಲವನ್ನು ಒದಗಿಸುವ ನೂಕುಬಲಗಳಾಗಿ ಪರಿಣಮಿಸಿದುವು (ಉಯ್ಯಾಲೆಯ ಒಂದು ತುಯ್ತ ಮುಗಿದು ಮುಂದಿನದು ತೊಡಗುವಾಗ ಅದನ್ನು ತಳ್ಳಿದರೆ, ಅಂದರೆ ಅದಕ್ಕೆ ಬಲವನ್ನು ಒದಗಿಸಿದರೆ, ತುಯ್ತ ಏರುವ ವಿದ್ಯಮಾನವನ್ನು ಗಮನಿಸಬಹುದು), ಇದೇ ಅನುರಣನ ಸಿದ್ಧಾಂತ. ಭೂಮಿಯ ಮೇಲ್ಮೈ ಇನ್ನೂ ಮೆದುವೇ ಆಗಿದ್ದುದರಿಂದ, ಅನುರಣನೆ ಉಂಟುಮಾಡಿದ ಕುಲುಕಾಟದಿಂದ, ಭೂತಲದಲ್ಲಿ ಭಾರೀ ಬಿರುಕು ತಲೆದೋರಿ, ಕ್ರಮೇಣ ಅದರಿಂದ ಭೂಮಿಯ ಒಂದು ಅಂಶ ಕಳಚಿಕೊಂಡು ಆಕಾಶಕ್ಕೆ ಸಿಡಿದು ಹೋಯಿತು. ಇದೇ ಚಂದ್ರ. ಈ ಘಟನೆ ಸಂಭವಿಸಲು ಕನಿಷ್ಠ ಪಕ್ಷ 500 ವರ್ಷಗಳಾದರೂ ತೆಗೆದುಕೊಂಡಿರಬೇಕು. ಚಂದ್ರ ಜನನದಿಂದ ಉಂಟಾದ ಗಾಯ ಪೆಸಿಫಿಕ್ ಸಾಗರ. ಚಂದ್ರನ ಮೇಲೆ ಭೂಮಿ-ಸೂರ್ಯರ ಆಕರ್ಷಣೆ, ಭೂಮಿಯ ಆವರ್ತನವೇಗ ಹಾಗೂ ಅದರ ಮೇಲೆ ಉಬ್ಬರವಿಳಿತಗಳ ಪರಿಣಾಮ ಇವೆಲ್ಲವುಗಳ ಸಮಗ್ರ ಫಲಿತವಾಗಿ ಚಂದ್ರ  ಭೂಮಿಯಿಂದ ಕ್ರಮೇಣ ದೂರ ಸರಿಯುತ್ತ ಇಂದಿನ ಸ್ಥಾನಕ್ಕೆ ಬಂದಿದೆ. 

ಇಂದು ಅನುರಣನ ಸಿದ್ಧಾಂತಕ್ಕೆ ಐತಿಹಾಸಿಕ ಪ್ರಧಾನ್ಯ ಮಾತ್ರ ಉಂಟಷ್ಟೆ. ಏಕೆಂದರೆ ಈ ಊಹೆಯನ್ನು ಸಮರ್ಥಿಸುವ ಪುರಾವೆಗಳ ತೂಕ ಇವನ್ನು ವಿರೋಧಿಸುವ ಪುರಾವೆಗಳ ತೂಕವನ್ನು ಸಮತೋಲಿಸಲು ಶಕ್ತವಾಗಿಲ್ಲ.
ಎರಡನೆಯದು ಸ್ಫೋಟನೆ ಊಹೆ: ಇದನ್ನಿಂದು ವಿಜ್ಞಾನಿಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಇದರ ಪ್ರಕಾರ ಮೊದಲಿನದ್ದದ್ದು ಭೂಮಿ-ಚಂದ್ರ-ಮಂಗಳ ಒಂದುಗೂಡಿದ್ದ ಸಂಯುಕ್ತ ವಸ್ತು. ಆವರ್ತನೆಯನ್ನೂ ಸೂರ್ಯ ಪರಿಭ್ರಮಣೆಯನ್ನೂ ಮಾಡುತ್ತಿದ್ದ ಆ ವಸ್ತುವಿಗೆ ಸಮತೋಲನವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಅದರ ರೂಪ ಉದ್ದುದ್ದವಾಗಿ ವಿಕಾರಗೊಂಡು ಕ್ರಮೇಣ ನಡುವಿನ ತೆಳುಭಾಗದಲ್ಲಿ ತುಂಡಾಯಿತು., ಈ ಕ್ರಿಯೆಯಲ್ಲಿ 'ಕೊಸರಾಗಿ ಮೂರನೆಯ ಒಂದು ತುಣುಕು ಉಳಿಯಿತು. ಅದೇ ಚಂದ್ರ, ದೊಡ್ಡ ಭಾಗ ಭೂಮಿ, ಚಿಕ್ಕ ಭಾಗ ಮಂಗಳ. ಭೂಮಿಯ ಗುರುತ್ವಾಕರ್ಷಣ ಬಲ ಅಧಿಕ. ಅದ್ದರಿಂದ ಚಂದ್ರನನ್ನು ಅದು ತನ್ನ ಕ್ಷೇತ್ರದಲ್ಲೇ ಉಳಿಸಿಕೊಂಡಿತು. ಭೂಮಿ, ಚಂದ್ರ, ಮಂಗಳ ಏಕಕಾಲದಲ್ಲಿ ಜನಿಸಿದುದರಿಂದ ಚಂದ್ರನನ್ನು ಭೂಮಿಯ ತಮ್ಮ ಎಂದೂ ಮಂಗಳವನ್ನು ಭೂಮಿಯ ಅವಳಿ ಎಂದೂ ಕರೆಯುವುದುಂಟು. ಚಂದ್ರನಿಂದ ತಂದಿರುವ ಶಿಲೆಗಳ ಪರೀಕ್ಷೆಯಿಂದ ಭೂಮಿ ಹಾಗೂ ಚಂದ್ರ ಎರಡೂ ಸಮಾನ ವಯಸ್ಸಿನ ಕಾಯಗಳು (ಸುಮಾರು 5  x 109 ವರ್ಷಗಳು) ಎಂಬುದು ಸ್ಥಿರಪಟ್ಟಿದೆ. 

ಮೂರನೆಯದು ಅಪಹರಣ ಊಹೆ: ಇದರ ಪ್ರಕಾರ ಚಂದ್ರ ಮತ್ತು ಭೂಮಿಗೆ ಮೂಲತಃ ಯಾವುದೇ ಸಂಬಂಧವಿರಲಿಲ್ಲ. ಅಂದು ಚಂದ್ರ ಕ್ಷುದ್ರ ಗ್ರಹಗಳ (ನೋಡಿ- ಕ್ಷುದ್ರಗ್ರಹಗಳು) ಹೊನಲಿನಲ್ಲಿ ಇದ್ದ ಒಂದು ಕಾಯ. ಯಾವುದೋ ಗಳಿಗೆಯಲ್ಲಿ ಚಂದ್ರ ಸ್ವಂತಕಕ್ಷೆಯಿಂದ ವಿಚಲಿತವಾಗಿ ಭೂಕಕ್ಷೆಯ ತೀರ ಸಮೀಪ ಹಾಯುತ್ತಿದ್ದಿರಬಹುದು. ಆಗ ಭೂಮ್ಯಾಕರ್ಷಣೆಯಿಂದ ಬಂಧಿತವಾಗಿ ಭೂಮಿಯ ಸುತ್ತ ಪರಿಭ್ರಮಿಸುವ ಉಪಗ್ರಹವಾಯಿತು. ಆದ್ದರಿಂದ ಭೂಮಿಗೆ ಚಂದ್ರ ಪ್ರಾಪ್ತವಾದದ್ದು ಭೂಮಿಯ ಉಗಮದ ಬಹುಕಾಲಾನಂತರದಲ್ಲಿ. ಭೂಮಿ ಸೆರೆಹಿಡಿದದ್ದು ದಕ್ಕಿಸಿಕೊಳ್ಳಲು ಕಷ್ಟವಾಗುವಂಥ ಒಂದು ಮಹಾಗಾತ್ರವನ್ನೇ. ಇದರಿಂದ ಭೂಮಿಯ ಮೇಲೆ ಚಂದ್ರನಿಂದ (ಅದೇ ರೀತಿ ಚಂದ್ರನ ಮೇಲೆ ಭೂಮಿಯಿಂದ) ವಿಪ್ಲವ ಪರಂಪರೆಗಳೇ ಸಂಭವಿಸಿರಬೇಕು. ಭೂತೊಗಟೆಯ ವಿವಿಧ ಪ್ರದೇಶಗಳ ವಿವಿಧ ಸ್ತರಗಳ ಪ್ರತಿಚಯಗಳನ್ನು ತರಿಸಿ ಅಭ್ಯಸಿಸಿದ್ದಾರೆ. ಇದರ ಪ್ರಕಾರ ಲಭ್ಯವಾಗಿರುವ ಸಂಗತಿ  ಇಷ್ಟು.. ಭೂಮಿಯ ವಯಸ್ಸು ಸುಮಾರು 5 x 109 ವರ್ಷಗಳು. ಸುಮಾರು 4 x 109 ವರ್ಷಗಳ ಹಿಂದೆ (ಎಂದರೆ ಭೂಮಿ ಹುಟ್ಟಿ ಸುಮಾರು 100 ಕೋಟಿ ವರ್ಷಗಳ ತರುವಾಯ) ಒಂದು ಭೀಕರ ಘಟನೆ ಅಂತರಿಕ್ಷದಲ್ಲಿ ಸಂಭವಿಸಿದುದಕ್ಕೆ ಪುರಾವೆಗಳು ದೊರೆತಿವೆ. ಇದು ಚಂದ್ರನನ್ನು ಸೆರೆ ಹಿಡಿದಿದ್ದರಿಂದ ಆಗಿರಬಹುದೇ ಅಥವಾ ಬೇರೆ ಯಾವುದೋ ಕಾರಣದಿಂದ ಆಗಿರಬಹುದೇ ಎಂಬುದು ಇನ್ನೂ ತಿಳಿದಿಲ್ಲ. ಈ ಊಹೆಗೆ ಇಂದು ವಿಜ್ಞಾನಲೋಕದಲ್ಲಿ ಹೆಚ್ಚಿನ ಬೆಂಬಲವಿಲ್ಲ.
ನಾಲ್ಕನೆಯದು ಸ್ತಿಮಿತ ಸ್ಥಿತಿ ಊಹೆ: ಇದರ ಪ್ರಕಾರ ಸೌರವ್ಯೂಹವದ ಉಗಮ ಕಾಲದಲ್ಲೇ, ಎಂದರೆ ಭೂಮಿ ಮುಂತಾದ ಗ್ರಹಗಳು ಜನಿಸಿದಾಗಲೇ ಚಂದ್ರ ಕೂಡ ಜನಿಸಿತ್ತು. ಆಗಿನಿಂದಲೂ ಅದು ಭೂಮಿಯ ಉಪಗ್ರಹವಾಗಿಯೇ ಇತ್ತು ಎಂದಿದೆ. ಈ ಊಹೆಗೂ ಇಂದು ಭದ್ರವಾದ ಬುನಾದಿಯಿಲ್ಲ.

ಐದನೆಯದು ಸಂಲಯನ ಊಹೆ : ಇದರ ಪ್ರಕಾರ ಕ್ಷುದ್ರಗ್ರಹಗಳು ಗ್ರಹಗಳನ್ನು ಕಟ್ಟಿದ ಇಟ್ಟಿಗೆ ತುಂಡುಗಳು. ಎಲ್ಲ ಗ್ರಹಗಳೂ ಮೂಲತಃ ದೂಳು ಮತ್ತು ಕ್ಷುದ್ರಗ್ರಹಗಳ ಒಕ್ಕೂಟಗಳೇ. ಹಲವಾರು ಕ್ಷುದ್ರಗ್ರಹಗಳು ದೂಳಿನೊಡನೆ ಸೇರಿಕೊಂಡು ಭೂಮಿಯಂಥ ಒಂದು ಗ್ರಹವಾಯಿತು. ಅದೇ ಆಸುಪಾಸಿನಲ್ಲಿದ್ದ ಉಳಿದ ಚೂರಗಳು ಒಟ್ಟುಗೂಡಿ ಚಂದ್ರ ಆಯಿತು. ಈ ಊಹೆಯನ್ನೂ ಇಂದು ಬಹುತೇಕ ವಿಜ್ಞಾನಿಗಳು ಒಪ್ಪುವುದಿಲ್ಲ.

ಈ ಐದು ಊಹೆಗಳಿಗೆ ಹೋಲಿಸಿದಲ್ಲಿ ಅಪೋಲೋ ಗಗನಯಾತ್ರಿಗಳು ತಂದ ಚಂದ್ರನ ಕಲ್ಲುಮಣ್ಣುಗಳನ್ನು ವಿಶ್ಲೇಷಿಸಿದ ನಂತರ ಮತ್ತೊಂದು ಬಗೆಯ ಊಹೆಯನ್ನು ವಿಜ್ಞಾನಿಗಳು ಮಾಡಿದರು. ಅವರ ಪ್ರಕಾರ ಮಂಗಳಗ್ರಹದಷ್ಟು ದೊಡ್ಡದಾದ ಅಕಾಶಕಾಯವೊಂದು ಭೂಮಿಯ ಬಾಲ್ಯದಲ್ಲಿ ಇಲ್ಲಿಗೆ ಬಂದು ಒಂದು ವಿಶೇಷ ಬಗೆಯಲ್ಲಿ ಡಿಕ್ಕಿ ಹೊಡೆಯಿತಂತೆ. ಆ ಆಕಾಶಕಾಯಕ್ಕೆ ವಿಜ್ಞಾನಿಗಳು ಜರ್ಫಿಯಸ್ ಎಂಬ ಹೆಸರನ್ನು ನೀಡಿದ್ದಾರೆ. ಇದರಿಂದ ಆ ಆಕಾಶಕಾಯ ನಾಶವಾದುದಲ್ಲದೇ ಭೂಮಿಯ ಮೇಲ್ಚಿಪ್ಪೂ ಅನಿಲರೂಪಕ್ಕೆ ತೆರಳಿತಂತೆ. ಮುಂದೆ ಈ ಅನಿಲದ ಮೋಡ ಭೂಮಿಯನ್ನು ಸುತ್ತಲಾರಂಭಿಸಿತೆಂದು ವಿಜ್ಞಾನಿಗಳು ನುಡಿಯುತ್ತಾರೆ. ನಂತರ ಆ ಅನಿಲಗಳು ಬಾಷ್ಪೀಕರಣಕ್ಕೆ ಒಳಗಾಗಿ ಚಂದ್ರನ ಉದ್ಭವಕ್ಕೆ ಕಾರಣವಾಯಿತಂತೆ. ಈ ಊಹೆಗೆ ಇಂದು ಸಾಕಷ್ಟು ಬೆಂಬಲ ವಿಜ್ಞಾನಲೋಕದಲ್ಲಿ ದೊರಕಿದೆ.

II ಭೌತಸ್ವರೂಪ : 1 ದ್ರವ್ಯರಾಶಿ : ಚಂದ್ರನ ದ್ರವ್ಯರಾಶಿ (ಮಾಸ್) 7.35 x 1021 ಕಿ.ಗ್ರಾಂ. (ಭೂಮಿ 5.98 x 1024 ಕಿ.ಗ್ರಾಂ.). ಇದು ಭೂದ್ರವ್ಯರಾಶಿಯ (1/81.68) ಪಟ್ಟು ಕಡಿಮೆ. 
		2 ಗಾತ್ರ : ಭೂಕೇಂದ್ರದಿಂದ ಕಾಣುವಂತೆ ಚಂದ್ರನ ಸರಾಸರಿ ಕೋನ ವ್ಯಾಸ 31'5". ರೇಡಾರ್, ಲೇಸರ್ ಮುಂತಾದ ಆಧುನಿಕ ತಂತ್ರಗಳಿಂದ ಭೂಮಿ-ಚಂದ್ರ ಸರಾಸರಿ ದೂರವನ್ನು ಅಳೆಯಲಾಗಿದೆ. ಭೂ ಕೇಂದ್ರದಿಂದ ಚಂದ್ರಕೇಂದ್ರದ ಸರಾಸರಿ ದೂರ 3,84.401 ಕಿ.ಮೀ. (2,38,857 ಮೈಲಿ).
ಈ ರೇಖೀಯ ದೂರವನ್ನೂ ಚಂದ್ರನ ದೃಗ್ವ್ಯಾಸವನ್ನೂ ಸಂಬಂಧಿಸಿ ಚಂದ್ರನ ರೇಖೀಯ ವ್ಯಾಸವನ್ನೂ ತನ್ಮೂಲಕ ಘನಗಾತ್ರವನ್ನೂ ಗಣಿಸುವುದು ಸಾಧ್ಯ, ಚಂದ್ರನ ವ್ಯಾಸ 3475.9 ಕಿ.ಮೀ. (2156,86 ಮೈಲಿ) ಭೂಮಿಗೆ ಈ ಬೆಲೆ  12,742 ಕಿ.ಮೀ. (7917.88 ಮೈಲಿ). ಆದ್ದರಿಂದ ಭೂಮಿಯ ಮತ್ತು ಚಂದ್ರನ ಘನಗಾತ್ರಗಳ (ಅವು ಗೋಳಗಳೆಂದು ಭಾವಿಸಿದರೆ) ನಿಷ್ಪತ್ತಿ 49.47:1. ಅಲ್ಲಿಗೆ, ಭೂಮಿ ಒಂದು ಖಾಲಿ ಗೋಳವಾಗಿದ್ದರೆ ಅದರ ಒಳಗೆ ಸುಮಾರು 50 ಚಂದ್ರರನ್ನು ತುಂಬಬಹುದು ಎಂದಾಯಿತು.

  	3. ಸಾಂದ್ರತೆ: ದ್ರವ್ಯರಾಶಿಯನ್ನು ಘನಗಾತ್ರದಿಂದ ಭಾಗಿಸಿದಾಗ ದೊರೆಯುವ ಸೂಚ್ಯಂಕವಿದು. ಚಂದ್ರನ ಸರಾಸರಿ ಸಾಂದ್ರತೆ 3.34 ಗ್ರಾಂ/ಘನಸೆಂ.ಮೀ. (ಭೂಮಿ 5.5 ಗ್ರಾಂ/ಘನಸೆಂ.ಮೀ.) ಅಂದರೆ ಸಮಾನ ಗಾತ್ರದ ನೀರಿನ ತೂಕಕ್ಕಿಂತ ಚಂದ್ರನ ತೂಕ 3.34 ಪಟ್ಟು. (ಭೂಮಿಯ ತೂಕ 5.5 ಪಟ್ಟು). ಚಂದ್ರನ ಸರಾಸರಿ ಸಾಂದ್ರತೆ ಭೂಮಿಯದಕ್ಕಿಂತ ಕಡಮೆ ಇರುವುದನ್ನು ಗಮನಿಸಿದ ಕೆಲವು ವಿಜ್ಞಾನಿಗಳು ಭೂಮಿಯ ಆರಂಭದ ದಿವಸಗಳಲ್ಲಿ, ಚಂದ್ರ ಇನ್ನೂ ಭೂಮಿಯ ಅವಿಭಾಜ್ಯ ಅಂಗವಾಗಿದ್ದಾಗ, ಭಾರವಾದ ದ್ರವ್ಯಗಳು ಭೂ ಕೇಂದ್ರದೆಡೆಗೂ, ಹಗುರವಾದ ದ್ರವ್ಯಗಳು ಭೂಮೇಲ್ಮೈ ಎಡೆಗೂ, ಸಾಗಿ ಸಂಗ್ರಹಗೊಂಡಿದ್ದುವು. ಆ ವೇಳೆ ಭೂಮಿಯ ಮೇಲ್ಮೈಯಿಂದ ಸಿಡಿದು ಬೇರ್ಪಟ್ಟ ಚಂದ್ರನ ಸರಾಸರಿ ಸಾಂದ್ರತೆ ಭೂಮಿಯ ಸರಾಸರಿ ಸಾಂದ್ರತೆಗಿಂತ ಕಡಿಮೆ ಆಗಿರುವುದು ಸಹಜವೇ ಆಗಿದೆ ಎಂದು ವಾದಿಸುತ್ತಾರೆ.

		4. ಗುರುತ್ವಬಲ : ದ್ರವ್ಯರಾಶಿ ಒ ಮತ್ತು ತ್ರಿಜ್ಯ ಖ ಇರುವ ಒಂದು ಗೋಳೀಯ ವಸ್ತುವಿನ ಮೇಲ್ಮೈಯಲ್ಲಿ ಗುರುತ್ವಬಲ ಆ ವಸ್ತುವಿನ ಗುರುತ್ವಬಲ ಉಂಟುಮಾಡುವ ವೇಗೋತ್ಕರ್ಷ ಚಿ ಆಗಿದ್ದರೆ ಆಗ . ಇಲ್ಲಿ ಉ ವಿಶ್ವಗುರುತ್ವಾಕರ್ಷಣೀಯ ಸ್ಥಿರಾಂಕ. ಚಂದ್ರನ ಮೇಲ್ಮೈಯಲ್ಲಿ ಚಿಯ ಬೆಲೆ 161.7 ಸೆಂ.ಮೀ./ಸೆಕೆಂಡ್2 (ಭೂಮಿಯದು 980 ಸೆಂ.ಮೀ./ಸೆಕೆಂಡ್2 ಅಂದರೆ ಚಂದ್ರತಲದಲ್ಲಿ ವೇಗೋತ್ಕರ್ಷ ಭೂತದಲ್ಲಿನದಕ್ಕಿಂತ ಸುಮಾರು ರಷ್ಟು ಕಡಿಮೆ ಇರುತ್ತದೆ. ಯಾವುದೇ ಗ್ರಹದಲ್ಲಿ (ಇಲ್ಲವೇ ಉಪಗ್ರಹ) ಒಂದು ವಸ್ತುವಿನ ತೂಕ ಅದರ ದ್ರವ್ಯರಾಶಿ (m) ಹಾಗೂ ಗುರುತ್ವ ವೇಗೋತ್ಕರ್ಷಗಳ (g) ಗುಣಲಬ್ಧ (ತೂಕ = mg). ಆದ್ದರಿಂದ ಭೂಮಿಯಲ್ಲಿ 90 ಕಿ.ಗ್ರಾಂ. ತೂಕವಿರುವ ಓರ್ವ ವ್ಯಕ್ತಿಯ ತೂಕ ಚಂದ್ರನಲ್ಲಿ ಕೇವಲ 15 ಕಿ.ಗ್ರಾಂ. ಭೂಮಿಯಲ್ಲಿ ಒಂದಿಷ್ಟು ಪ್ರಯತ್ನದಿಂದ ಜಿಗಿಯಬಲ್ಲ ಎತ್ತರದ ಆರು ಪಟ್ಟು ಎತ್ತರವನ್ನು ಅಷ್ಟೇ ಪ್ರಯತ್ನದಿಂದ ಚಂದ್ರನಲ್ಲಿ ಆತ ಜಿಗಿಯಬಲ್ಲ.

		5. ವಿಮೋಚನಾ ವೇಗ : ಒಂದು ಆಕಾಶಕಾಯದ ಗುರುತ್ವಬಲದ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರವಾಗಲು ಯಾವುದೇ ಕಣ ಆ ಕಾಯದ ತಲದಿಂದ ಜಿಗಿಯಬೇಕಾದ ಕನಿಷ್ಠ ಪ್ರಾರಂಭಿಕ ವೇಗಕ್ಕೆ ವಿಮೋಚನಾ ವೇಗ (ಎಸ್ಕೇಪ್ ವೆಲಾಸಿಟಿ) ಎಂದು ಹೆಸರು. ಇದರ ಅಳತೆ v =.  ಆದ್ದರಿಂದ ಕಾಯ ಹೆಚ್ಚು ಹೆಚ್ಚು ಭಾರವುಳ್ಳದ್ದಾದಂತೆ ಅದರ ಗುರುತ್ವಬಲದ ಒಂದಿಗೇ ವಿಮೋಚನಾ ವೇಗವೂ ಹೆಚ್ಚು ಹೆಚ್ಚು ಆಗುತ್ತವೆ. ಸೂರ್ಯನಲ್ಲಿ ಇದರ ಬೆಲೆ 618 ಕಿ.ಮೀ./ಸೆ.; ಗುರುವಿನ್ಲಲಿ 59.54 ಕಿ.ಮೀ./ಸೆ ; ಭೂಮಿಯಲ್ಲಿ 11.19 ಕಿ.ಮೀ./ಸೆ; ಚಂದ್ರನಲ್ಲಿ 2.38 ಕಿ.ಮೀ./ಸೆ. ಸೂರ್ಯೋಷ್ಣದಿಂದ ಕಾದ ವಾಯುವಿನ ಅಣುಗಳು ಅನುಕೂಲ ಸನ್ನಿವೇಶಗಳಲ್ಲಿ 10 ಕಿ.ಮೀ./ಸೆ ವೇಗವನ್ನು ತಲಪುವುದೇನೂ ಅಸಾಮಾನ್ಯ ಘಟನೆಗಳಲ್ಲ. ಇಂಥ ಕ್ಷೋಭಿತ ಕಣಗಳನ್ನು ಬಂಧಿಸಿ ಭೂಮಿಗೆ ವಾಯುಮಂಡಲದ ಕವಚವನ್ನು ಕಾಪಾಡಿ ಇಟ್ಟಿರುವುದು ಭೂಮಿಯ ಪ್ರಬಲ ಗುರುತ್ವಬಲ. ಚಂದ್ರದಲ್ಲಿನ ಸ್ಥಿತಿ ತದ್ವಿಪರೀತ. ಒಂದು ಕಾಲದಲ್ಲಿ ಅಲ್ಲಿ ವಾಯುಮಂಡಲ ಇದ್ದಿದ್ದರೆ, ಅದೇ ಸೂರ್ಯೋಷ್ಣದಿಂದ ಕಾದು ಕ್ಷೋಭೆಗೊಂಡ ವಾಯಕಣಗಳನ್ನು ಹಿಡಿದಿಡಲು ಚಂದ್ರಗುರುತ್ವಬಲಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ವಾಯುಕಣಗಳು ಚಂದ್ರನಲ್ಲಿನ ವಿಮೋಚನ ವೇಗವನ್ನು ಮೀರಿ ಜಿಗಿದು ವಿಶಾಲಾಕಾಶದಲ್ಲಿ ಸ್ವತಂತ್ರವಾಗಿರಬೇಕು. ಚಂದ್ರನಲ್ಲಿ ವಾಯುಮಂಡಲ, ಅದರಂತೆಯೇ ಜಲರಾಶಿ, ಇಲ್ಲದಿರುವುದಕ್ಕೆ ಚಂದ್ರ ವಿಮೋಚನವೇಗ ಬಲು ಕಡಿಮೆ ಆಗಿರುವುದು ಒಂದು ಮುಖ್ಯ ಕಾರಣ.

	6. ವಾಯು ಮಂಡಲ ಮತ್ತು ಜಲರಾಶಿ : ಚಂದ್ರನಲ್ಲಿ ಇವೆರಡೂ ಇಲ್ಲ. ಚಂದ್ರನ ಮೇಲೆ ಮಾನವ ಇಳಿವ ಮೊದಲೇ ಅಥವಾ ಚಂದ್ರನ ಸಮೀಪ ದೃಶ್ಯಗಳನ್ನು ಆಧುನಿಕ ತಂತ್ರಗಳಿಂದ ಪಡೆಯುವ ಮೊದಲೇ ಈ ವಿಚಾರದಲ್ಲಿ ಸಾಕಷ್ಟು ಖಚಿತ ಜ್ಞಾನ ಅವನಿಗಿತ್ತು. ವಾಯುಮಂಡಲ ಸೂರ್ಯನ ಬೆಳಕನ್ನು ಚದರಿಸುತ್ತದೆ. ಚದರುವಿಕೆಯ ಪರಿಣಾಮಗಳನ್ನು ದೂರವೀಕ್ಷಣೆಯಿಂದ ಅಳೆಯಬಹುದು. ಚಂದ್ರನಲ್ಲಿ ಇಂಥ ಚದರಿಕೆಯ ಯಾವ ಲಕ್ಷಣಗಳನ್ನೂ ಗುರುತಿಸಲಾಗಿಲ್ಲ. ಅಲ್ಲದೇ ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರಬಿಂಬದ ಹರಿತವಾದ ಅಂಚನ್ನು ಗುರುತಿಸಲಾಗಿದೆ; ಅಲ್ಲಿ ವಾಯುಮಂಡಲವಿದ್ದು ಬೆಳಕಿನ ಚದರಿಕೆ ಆಗಿದ್ದರೆ ಬಿಂಬದ ಅಂಚು ಮಸಕಾಗುತ್ತಿತ್ತು. ವಾಯುಮಂಡಲದ ಅಭಾವದಿಂದಾಗಿ ಚಂದ್ರನ ಮೇಲ್ಮೈಯಲ್ಲಿ ಉಷ್ಣತೆಯ ಏರಿಳಿತಗಳು ಬಲು ತೀವ್ರವಾಗಿರುತ್ತವೆ. ಹಠಾತ್ತಾಗಿಯೂ ಇರುತ್ತವೆ. ಚಂದ್ರನ ಸೂರ್ಯಮುಖ ಪಾಶ್ರ್ವದಲ್ಲಿ ಉಷ್ಣತೆ ನೀರಿನ ಕುದಿ ಬಿಂದುವಿಗಿಂತ (100ಲಿಸೆ.) ಹೆಚ್ಚಿದ್ದರೆ ಸೂರ್ಯವಿಮುಖ ಪಾಶ್ರ್ವದಲ್ಲಿ ಅದು—1700 ಸೆ. ನಷ್ಟು ಕೆಳಕ್ಕೆ ಇಳಿದಿರುವುದುಂಟು. ಉಷ್ಣತೆಯ ಏರಿಳಿತಗಳ ಈ ಅತಿ ವ್ಯಾಪ್ತಿಯ ಪ್ರದೇಶದಲ್ಲಿ ಜಲರಾಶಿ ಇದ್ದಿದ್ದರೆ ಅದು ಉಗಿ-ಬರ್ಫ ಸ್ಥಿತಿಗಳ ನಡುವೆ ಆಂದೋಲಿಸುತ್ತಿರಬೇಕಾಗಿತ್ತು. ಆದರೆ ಆ ಮೊದಲೇ ಉಗಿಯ ಕಣಗಳು ಚಂದ್ರತಲದಿಂದ ಜಿಗಿದು ಮುಕ್ತವಾಗಿಬಿಡುತ್ತಿದ್ದುವು. ಹೀಗೆ ವಾಯು ಹಾಗು ಜಲರಾಹಿತ್ಯದ ಪರಿಣಾಮವಾಗಿ ಚಂದ್ರನಲ್ಲಿ ಯಾವ ತರಹದ ಜೀವಿಗಳ ಉಗಮ ಮತ್ತು ವಿಕಾಸವೂ ಸಾಧ್ಯವಾಗಲಿಲ್ಲ. ಚಂದ್ರ ಒಂದು ನಿರ್ಜೀವ ಜಗತ್ತು.

		7. ನೈಸರ್ಗಿಕ ಬಲಗಳು : ಭೂಮಿಯ ಮೆಲೆ ವರ್ತಿಸುವ ನೈಸರ್ಗಿಕ ಬಲಗಳು ಪ್ರಧಾನವಾಗಿ ಏಳು: ಸೂರ್ಯಾಕರ್ಷಣೆ, ಚಂದ್ರಾಕರ್ಷಣೆ, ಸೂರ್ಯೋಷ್ಣ, ಉಲ್ಕಾಪಾತ, ವಾಯುಮಂಡಲದ ಕ್ಷೋಭೆ, ಜಲರಾಶಿಯ ಬಡಿತ, ಆಂತರಿಕ ಬಲಗಳು (ಭೂಕಂಪನ). ಇವುಗಳ ಪೈಕಿ, ಭೂಮಿಯ ಸ್ವರೂಪದ ಮೇಲೆ ತೀವ್ರ ಕುರುಹುಗಳನ್ನು ಮಾಡುವ ಬಲಗಳೆಂದರೆ ಸೂರ್ಯೋಷ್ಣ, ವಾಯು ಜಲರಾಶಿಗಳ ಕ್ಷೋಭೆ ಹಾಗೂ ಆಂತರಿಕ ಬಲಗಳು. ಪರ್ವತಗಳು ಹುಟ್ಟು, ಬೆಳೆವಣಿಗೆ, ಅಳಿವು, ನೆಲದ ಸವಕಳಿ, ಸಸ್ಯರಾಶಿಯ ವ್ಯಾಪ್ತಿ ಮುಂತಾದ ಸಮಸ್ತ ಬದಲಾವಣೆಗಳಿಗೂ ಕಾರಣಗಳಿವು. ಇನ್ನು ಉಲ್ಕಾಪಾತವನ್ನು ಸಮರ್ಥವಾಗಿ ತಡೆಹಿಡಿದು ಭೂಮಿಯ ಮೇಲ್ಮೈಗೆ ರಕ್ಷೆ ಒದಗಿಸುವ ಹೊದಿಕೆಯೇ ವಾಯುಮಂಡಲ. ಆದ್ದರಿಂದ ಉಲ್ಕೆಗಳ ಪತನದಿಂದ ಭೂಮೇಲ್ಮೈಯಲ್ಲಿ ಆಗಿರುವ ಹಾನಿ ಅತ್ಯಲ್ಪ. ಚಂದ್ರನಲ್ಲಾದರೋ ವಾಯು ಹಾಗೂ ಜಲರಾಶಿಗಳ ಅಭಾವದಿಂದಾಗಿ ಅಲ್ಲಿನ ಮೇಲ್ಮೈಸ್ವರೂಪವನ್ನು ತೀವ್ರವಾಗಿ ಬದಲಾಯಿಸಬಲ್ಲ ಎರಡು ಪ್ರಧಾನ ನೈಸರ್ಗಿಕ ಬಲಗಳೇ ಇಲ್ಲವಾಗಿವೆ. ಇನ್ನು ಭೂಮಿ ಹಾಗೂ ಸೂರ್ಯಾಕರ್ಷಣೆಗಳು ಉಂಟುಮಾಡುವ ಬದಲಾವಣೆಗಳು ದೀರ್ಘಕಾಲದಲ್ಲಿ ಅತ್ಯಲ್ಪ. ಆದ್ದರಿಂದ ಚಂದ್ರಸ್ವರೂಪವನ್ನು ಬದಲಾಯಿಸುವ ನೈಸರ್ಗಿಕ ಬಲಗಳೇನಿದ್ದರೂ ಅವು ಮುಖ್ಯವಾಗಿ ಸೂರ್ಯೋಷ್ಣ, ಉಲ್ಕಾಪಾತ ಹಾಗೂ ಆಂತರಿಕಬಲಗಳು. ಈ ಹಿಂದೆ ಹೇಳಿದಂತೆ ಚಂದ್ರನ ಮೇಲೆ 170ಲಿ ಸೆ. ಯಿಂದ ತೊಡಗಿ 100ಲಿ ಸೆ. ಅನ್ನೂ ಮಿಕ್ಕಿ ವ್ಯತ್ಯಯವಾಗುತ್ತದೆ. ಇದರಿಂದ ಬಂಡೆ, ನೆಲ, ಕಮರಿ ಎಲ್ಲವೂ ಅತಿ ತೀವ್ರ ಉಷ್ಣತೆಗಳ ನಡುವೆ ಏರಿಳಿಯುವುವು. ಬಂಡೆಗಳು ಒಡೆದು ಕಲ್ಲು ಚೂರು ಹೋಗಿ ಕ್ರಮೇಣ ದೂಳಾಗುವುದು ಈ ಏರಿಳಿತದ ಪರಿಣಾಮ. ಚಂದ್ರ ಪರ್ವತಗಳ ಬದಿಗಳು ತೀರ ಕಡಿದಾಗಿರುತ್ತವೆ. ಚಂದ್ರತಲದ ಮೇಲೆ ನೇರವಾಗಿ ಬೀಳುವ ಉಲ್ಕಾವೃಷ್ಟಿಯಿಂದ ಸಾಕಷ್ಟು ಕಲೆಗಳೂ ಕೂಪಗಳೂ ಉಂಟಾಗುವುವು. ಅಂದರೆ ಚಂದ್ರಗರ್ಭ ಸಹ ಘನೀಭವಿಸಿ ಹೋಗಿದೆಯೇ (ಭೂಮಿಯಲ್ಲಿ ಹೀಗಿಲ್ಲವಷ್ಟೆ?) ಅಥವಾ ಚಂದ್ರನ ತೊಗಟೆ ಸಾಕಷ್ಟು ದಪ್ಪ ಮತ್ತು ಗಡಸಾಗಿದ್ದು ಸುಪ್ಪ ಜ್ವಾಲಾಮುಖಿಗಳ ಪ್ರಕಟಣೆಯನ್ನು ಅದುಮಿಟ್ಟಿದೆಯೇ? ಉತ್ತರ ಖಚಿತವಲ್ಲ. ಮೊದಲಿಗೆ ಚಂದ್ರನ ಮೇಲೆ ವಿಪುಲವಾಗಿ ಕಾಣಬರುವ ಕೂಪ ಮತ್ತು ಗುಳಿಗಳು ಚಂದ್ರನಲ್ಲಿ ಒಂದು ಕಾಲದಲ್ಲಿ ಕ್ರಿಯಾಶೀಲವಾಗಿದ್ದು ಈಗ ಸುಪ್ತವಾಗಿರಬಹುದಾದ ಜ್ವಾಲಾಮುಖಿಗಳ ಪರಿಣಾಮವಾಗಿರಬಹುದು; ಆಗ ಜ್ವಾಲಾಮುಖಿಗಳಿಂದ ಪ್ರವಹಿಸಿದ ಲಾವಾರಸ ಹರಿದು ಆಕಾರರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂಬ ವಾದ ಇದ್ದಿತು. ಹೀಗಲ್ಲದೇ, ಚಂದ್ರತಲ ಇನ್ನೂ ಮಿದುವಾಗಿದ್ದಾಗ ಅಲ್ಲಿ ಪತನವಾದ ಉಲ್ಕೆಗಳಿಂದಾದ ಗಾಯಗಳು ಈ ಕೂಪ ಹಾಗೂ ಕುಳಿಗಳಾಗಿರಬಹುದೆಂಬ ವಾದವೂ ಸಹ ಇದ್ದಿತು. ಆದರೆ ಇಂದು ವಿಜ್ಞಾನಿಗಳು ಚಂದ್ರನ ಮೇಲೆ ಇರುವ ಕಡುಬೂದಿ ಬಣ್ಣದ ಬೃಹತ್ ತಗ್ಗಿನ ಪ್ರದೇಶಗಳು ಚಂದ್ರನಿಗೆ ಬೃಹತ್ ಉಲ್ಕೆಗಳು ಅಪ್ಪಳಿಸಿದ ನಂತರ ಚಂದ್ರನ ಮೇಲ್ಮೆಯಡಿಯಿಂದ ಹರಿದ ಲಾವಾರಸದಿಂದ ಉಂಟಾಗಿವೆ ಎಂದು ನಂಬಿದ್ದಾರೆ.

		8. ಪ್ರಾಕೃತಿಕ ಸ್ಥಿತಿ : ಹುಣ್ಣಿಮೆಯ ರಾತ್ರಿಯ ಪೂರ್ಣಚಂದ್ರಬಿಂಬವನ್ನು ಬರಿಗಣ್ಣಿನಿಂದಲೇ ನೋಡಿ ಅದರ ಬಣ್ಣ ಏಕರೀತಿಯಾಗಿಲ್ಲ ಎಂಬುದನ್ನು ಅರಿಯಬಹುದು. ಗ್ಯಲೆಲಿಯೋ (1564-1642) ತಾನೇ ರೂಪಿಸಿದ ದೂರದರ್ಶಕದಿಂದ ಚಂದ್ರನತ್ತ ನೋಡಿದಾಗ ಚಂದ್ರನ ಮೇಲೆ ಪರ್ವತಾವಳಿಗಳೂ ಕೂಪಕಮರಿಗಳು ಇದ್ದದು ಸ್ಪಷ್ಟವಾಗಿ ಗೋಚರವಾಯಿತು. ಸಮುದ್ರಗಳಂತೆ ಗೋಚರಿಸಿದ ಪ್ರದೇಶಗಳನ್ನು ಆಗ ಗುರುತಿಸಿ ಅವುಗಳಿಗೆ ಹೆಸರಿಸಲಾಯಿತು. ಡಾನ್ಝಿಗಿನ ಜಾನ್ ಹೆವೆಲ್ (1611-1687) ಎಂಬಾತ 1647ರಲ್ಲಿ ಸೆಲೆನೋಗ್ರಾಫಿಯ ಎಂಬ ಗ್ರಂಥವನ್ನು ಪ್ರಕಟಿಸಿದ. ಅದರಲ್ಲಿ ಅವನು ದೃಗ್ಗೋಚರ ಚಂದ್ರಪಾಶ್ರ್ವದ ಪ್ರಧಾನ ಏರು ತಗ್ಗುಗಳನ್ನೆಲ್ಲ ಗುರುತಿಸಿ ಹೆಸರಿಸಿದ್ದ. ಅಂದಿನ ನಂಬಿಕೆಯ ಪ್ರಕಾರ ಚಂದ್ರನಲ್ಲಿ ಭೂಮಿಯಲ್ಲಿರುವಂತೆಯೇ ಖಂಡಗಳೂ ಸಮುದ್ರಗಳು ಇವೆ, ಜೀವಿಗಳ ನಿವಾಸವದು-ಅಂದರೆ ಭೂಮಿಯಂತೆ ಇರುವ ಇನ್ನೊಂದು ಲೋಕ ಚಂದ್ರ-ಎಂದಿತ್ತು. ಆದರೆ ಇಂದು, ಈ ಮೊದಲೇ ಹೇಳಿರುವಂತೆ, ಚಂದ್ರ ಒಂದು ಬರಡು ಲೋಕ ಎಂದು ಈಗ ಚೆನ್ನಾಗಿ ಗೊತ್ತಿದೆ. ಚಂದ್ರನಲ್ಲಿರುವ ಪರ್ವತ, ಕಣಿವೆ, ಕೂಪ ಮುಂತಾದವು ಭೂಮಿಯಲ್ಲಿನ ಸಂವಾದೀ ಏರುತಗ್ಗುಗಳಿಗಿಂತ ಭಿನ್ನ ಸ್ವರೂಪದವು. ಅಲ್ಲಿ ವರ್ತಿಸುವ ಬಲಗಳೇ ಬೇರೆ ಇಲ್ಲಿ ವರ್ತಿಸುವ ಬಲಗಳೇ ಬೇರೆ ಆಗಿರುವುದು ಇದರ ಕಾರಣ. 

		9. ಸಮುದ್ರಗಳು (ಮರಿಯ): ಚಂದ್ರಬಿಂಬಕ್ಕೆ ಮೊಲದ ಮುದ್ರೆ ಒತ್ತಿರುವ ಮಹಾ ಆಳಗಳಿವು ; ನೀರಿಲ್ಲದ ಬರಡುಪ್ರದೇಶಗಳು. ಮೊದಲು ತಪ್ಪಾಗಿ ಕರೆಯಲ್ಪಟ್ಟ ಮಾರಿಯಾ (ಲ್ಯಾಟನಿನಲ್ಲಿ ಸಮುದ್ರಗಳು) ಎಂಬ ಹೆಸರೇ ಇಂದಿಗೂ ಉಳಿದುಕೊಂಡಿದೆಯಷ್ಟೆ. ಈ ಸಮುದ್ರಗಳು ಒಣ, ವಿಶಾಲ, ಮಟ್ಟಸ, ತಗ್ಗು ನೆಲಗಳು. ಹೀಗಾಗಿ ಆಸುಪಾಸಿನ ನೆಲಕ್ಕಿಂತ ಮಂದ ಕಳೆಯವಾಗಿ ಇವು ಕಾಣುತ್ತವೆ. ಚಂದ್ರನ ದೃಗ್ಗೋಚರ ಪಾಶ್ರ್ವದಲ್ಲಿರುವ 15 ಸಮುದ್ರಗಳ ಪೈಕಿ ಅತಿ ದೊಡ್ಡದು ಇಂಬ್ರಿಯಮ್ ಸಮುದ್ರ. ಇದು ಅಡ್ಡವಾಗಿ 1125 ಕಿ.ಮೀ. ನಷ್ಟು ವ್ಯಾಪಿಸಿದೆ. ಹೆಚ್ಚಿನ ಸಮುದ್ರಗಳಿಗೆ ಸ್ಥೂಲವಾದ ವರ್ತುಲಾಕಾರ ಉಂಟು. ಇವುಗಳಲ್ಲಿ ಹೆಚ್ಚಿನವು ಪರಸ್ಪರ ಸಂಯೋಜಿತವಾಗಿವೆ, ಕೆಲವು ಒಂದರ ಮೇಲೊಂದು ವ್ಯಾಪಿಸಿವೆ ಕೂಡ. ಇಂದಿನ ತಿಳಿವಳಿಕೆಯ ಪ್ರಕಾರ ತಳಗಳು ನಾವು ಭಾವಿಸಿರುವಷ್ಟು ನುಣುಪಾಗಿ ಏನೂ ಇಲ್ಲ. ಸಾವಿರಾರು ಗುಳಿಗಳು ಕೂಪಗಳು ಒಂದೊಂದು ಸಮುದ್ರತಳದಲ್ಲೂ ಇವೆ. ಸೂರ್ಯನ ಬೆಳಕು ಅವುಗಳ ಮೇಲೆ ಬಿದ್ದಾಗ ಕೆಲವು ತಳಗಳು ಅಲೆ ಅಲೆಯಂಥ ಬೆಳಕನ್ನು ಪ್ರತಿಫಲಿಸುವುದೂ ಕಂಡುಬಂದಿದೆ.
 				ಎಡದಿಂದ ಕೆಳಗಿನಿಂದ 			ಎಡದಿಂದ ಕೆಳಗಿನಿಂದ
ಬಲಕ್ಕೆ 	  ಮೇಲಕ್ಕೆ 			ಬಲಕ್ಕೆ    ಮೇಲಕ್ಕೆ
ಅಂಡಾರಮ್ 							ಫೇಕಂಡಿಟಾಟಿಸ್  
ಸಮುದ್ರ 			8 	    97  		ಸಮುದ್ರ	      18 		75
ಆಬನೆಜ್ರ 			57	    96 		ಫ್ರಾಕಸ್ಪೊರ್ 	 36 		95
ಆಬುಲ್ ಫೇಡ		56 	    88		ಬೆಸಲ್ 		 52 		48
ಅರಿಸ್ಟೊಟಿಲೀಜ್ 		56 	    20 		ಬೋಮಾಂಟ್ 	 39 		92
ಆಲೀಯಸೆನ್ಸಿಸ್ 		65 	   105 		ಮನಿಲೇಯಸ್ 	 66 		57
ಆಲ್ಪಟೆಗ್ನೀಯಸ್ 		66 	    84 		ಮಾರ್ಜಿನಸ್ 
ಸಮುದ್ರ  	  3          50
ಆಲ್ಮನಾನ್  			55 	    91 		ಯೂಡಕ್ಸಸ್ 	 56 		25
ಆಸ್ಟ್ರೇಲೀ ಸಮುದ್ರ 		25 	  115 		ಲ ಮೋನ್ಯೇ 	 39 		42
ಕಾಕೇಸಿಯನ್ 						ಲೈಬ್‍ನಿಟ್ಸ್ 
ಪರ್ವತಗಳು     55 	        130
ಪರ್ವತಗಳು 			62	  32			ಲ್ಯಾಂಗ್ರೀನಸ್ 	 11 	        79
ಕ್ರಿಸಿಯಮ್ ಸಮುದ್ರ 		15 	 150 			ವರ್ನರ್ 	 67 		101
ಜ್ಯಾನ್ಸನ್ 			40 	   56 		ವೇಪೋರಮ್ 
ಸಮುದ್ರ 	 	   65	 	 58
ಟಾರಸ್ ಪರ್ವತಗಳು 		30 	 35 			ಸರೆನಿಟಾಟಿಸ್ ಸಮುದ್ರ 	52 	42
ಟ್ರಾಂಗ್ ಕ್ವೆಲೀಟಾಟಿಸ್ 		40 	 62 			ಸ್ಪೂಮಾನ್‍ಜ್ ಸಮುದ್ರ 	8 	67
ಸಮುದ್ರ 							ಸ್ಮಿತಿಯೈ ಸಮುದ್ರ 		1 	68
ನೆಕ್ಟಾರಿಸ್ ಸಮುದ್ರ 		35 	90  			ಹೈಂಡ್ 			62 	82 
ಪೈರನೀಜ್ ಪರ್ವತಗಳು 	28 	87 			ಹ್ಯಾಡ್ಲಿ ದಿಬ್ಬ 		65 	41
ಪ್ಲೇಪಾರ್ 			61 	99 			ಹ್ಯಾಲ್ಮಸ್ ಪರ್ವತಗಳು 	60 	50

					ಎಡದಿಂದ ಕೆಳಗಿನಿಂದ 			ಎಡದಿಂದ ಕೆಳಗಿನಿಂದ
ಬಲಕ್ಕೆ ಮೇಲಕ್ಕೆ 				ಬಲಕ್ಕೆ ಮೇಲಕ್ಕೆ
ಅಪನೈನ್ ಪರ್ವತಗಳು 	72 	50 		ಟೆನರಿಫ್ ಸಾಲು 		79 	 21
ಟ್ವೆಕೊ 			78 	114
ಆರಿಸ್ಟಿಲಸ್ 			59 	34 		ಡೂಅರೆಫೆಲ್ 
ಪರ್ವತಗಳು 		89     125
ಆರ್ಕಿಮಿಡೀಸ್ 		75 	39 		ಡ್ಯಾಲಂಬೇರ್ 
ಪರ್ವತಗಳು 	     127 	76
ಆಲ್ಪೈನ್ ಕಣಿವೆ 		67 	21 		ನೂಬೀಯಮ್ 		85 	94
ಆಲ್ಪ್ಸ್ 			67 	20 		ಸಮುದ್ರ
ಆಲ್ಫಾನ್ಸಸ್ 			74 	87 		ಪೀಟಾನ್ ದಿಬ್ಬ 		71 	28
ಇಂಬ್ರಿಯಮ್ 		90 	35 		ಫ್ರಿಗ್ರೋರಿಸ್  		70 	14
ಸಮುದ್ರ 						ಸಮುದ್ರ
ಕಾರ್ಪೆಥೀಯನ್ 		95 	55 		ಮೇರಿಯಸ್ 		117 	56 
ಕೆಸ್ಸೀನೀ ಉಜ್ಜ್ವಲ 		73 	106 		ರುಕ್ ಪರ್ವತಗಳು 	110 	108
ಬಿಂದು 						ಷ್ರೋಟಿರ್ಸ್ ಕಣಿವೆ 		113 	42
ಕೊಪರ್ನಿಕಸ್ 		93 	60 		ಹಿರಾಡಟಸ್ 		113 	43
ಕ್ಲವೀಯಸ್ 			75 	124 		ಹೈಗನ್‍ಜ್ ದಿಬ್ಬ		 73 	49
ಗ್ರಿಮಾಲ್ಡೀ 			126 	74 		ಹ್ಯೂಮಾರಮ್ 		
ಜೂರ ಪರ್ವತಗಳು 		92	20 		ಸಮುದ್ರ			105	 96
ಇನ್ನು ಕೆಲವು ತಳಗಳಲ್ಲಿ ಗುಡ್ಡಗಳಿವೆ. ಉದಾಹರಣೆಗೆ ನ್ಯೂಬಿಯಮ್ ಸಮುದ್ರ ತಳದಲ್ಲಿರುವ ನೇರ ಗೋಡೆ (ಸ್ಟ್ರೇಟ್ ವಾಲ್). ಇದರ ಎತ್ತರ ಸುಮಾರು 180 ಮೀ. ಉದ್ದ ಸುಮಾರು 130 ಕಿ.ಮೀ. ಮೊದಲಿಗೆ ಮಾನವರಹಿತ ಸರ್ವೇಯರ್ ಆಕಾಶನೌಕೆಗಳು ಮತ್ತು ನಂತರ ಗಗನಯಾತ್ರಿಗಳಿದ್ದ ಅಮೆರಿಕದ ಅಪೊಲೋ ಅಂತರಿಕ್ಷ ನೌಕೆಗಳು ಚಂದ್ರನ ಸಮುದ್ರ ತಳಗಳ ಮೇಲೆ ಇಳಿದು ದತ್ತಾಂಶಗಳನ್ನು ಭೂಮಿಗೆ ಪ್ರಸರಿಸಿವೆ. ಅಲ್ಲಿನ ವಸ್ತುಸ್ಥಿತಿಗಳ ಬಗ್ಗೆ ಗಮನಾರ್ಹ ಸಾದೃಶ್ಯ ಉಂಟು. ಸುಮಾರು 5-10 ಮೀ. ದಪ್ಪದ ಭಗ್ನಾವಶೇಷಗಳು ಅಲ್ಲಿ ತುಂಬಿವೆ. ದೂಳು, ಸುಮಾರು 0.0025 ಸೆಂ.ಮೀ. ವ್ಯಾಸದ ಸೂಕ್ಷ್ಮಕಣಗಳು, ಮರಳ ಹರಳುಗಳು ಇವುಗಳ ಮಿಶ್ರಣವೇ ಈ ಭಗ್ನಾವಶೇಷ. ಇದರ ಸರಾಸರಿ ಸಾಂದ್ರತೆ ಗ್ರಾಂ/ಘನಸೆಂ.ಮೀ 0.7 ರಿಂದ 1.2ರ ನಡುವೆ ಉಂಟು. ಈ ವಸ್ತುವನ್ನು ಅದುಮಬಹುದಾದರೂ ಇದು ಮನುಷ್ಯನ ತೂಕವನ್ನು ಸುಲಭವಾಗಿ ಭರಿಸಬಲ್ಲುದು.

		10 ಕೂಪಗಳು : ವ್ಯಾಸ 1.5 ಕಿ.ಮೀ. ನಿಂದ ತೊಡಗಿ 300 ಕಿ.ಮೀ. ವರೆಗೆ ಇರುವ ವರ್ತುಳೀಯ ತಗ್ಗುಗಳಿವು. ಇನ್ನೂ ಚಿಕ್ಕವುಗಳಿಗೆ ಗುಳಿಗಳೆಂದು ಹೆಸರು.
ಚಂದ್ರನ ಮೇಲ್ಮೈಯಲ್ಲಿ ಸಮುದ್ರಗಳಾದ ಬಳಿಕ ಇವುಗಳಿಗೆ ಅಧಿಕ ಪ್ರಾಧಾನ್ಯ ಉಂಟು. ಭೂಮಿಯಿಂದ ವೀಕ್ಷಿಸಿ ಸುಮಾರು 30,000 ದಷ್ಟು ಕೂಪಗಳನ್ನು ಲೆಕ್ಕ ಮಾಡಲಾಗಿತ್ತು. ಇವುಗಳ ಪೈಕಿ ಕ್ಲೇವಿಯಸ್ ಮತ್ತು ಗ್ರಿಮಾಲ್ಡಿ ಎಂಬವು ಅತಿ ದೊಡ್ಡವು. ಇವುಗಳ ವ್ಯಾಸ ಸುಮಾರು 240 ಕಿ.ಮೀ ವಿಖ್ಯಾತ ವಿಜ್ಞಾನಿಗಳ ಹೆಸರಿನಿಂದ ಕೂಪಗಳನ್ನು ಹೆಸರಿಸಲಾಗಿದೆ-ಟೈಕೊ, ಕೊಪರ್ನಿಕಸ್, ಕೆಪ್ಲರ್ ಇತ್ಯಾದಿ. ಸಮುದ್ರಗಳು ವ್ಯಾಪಿಸಿಲ್ಲದ ಚಂದ್ರ ಪ್ರದೇಶದಲ್ಲಿ ಕೂಪಗಳು ಹೆಚ್ಚಾಗಿ ಇರುವುದನ್ನು ಗುರುತಿಸಲಾಗಿದೆ. ಇನ್ನು ಸಮುದ್ರಗಳ ಒಳಗೇ ಪರಿಶೀಲಿಸಿದರೆ ಇರುವ ಕೂಪಗಳ ಸಂಖ್ಯೆ ಹೋಲಿಕೆಯಿಂದ ಕಡಿಮೆ. ಆದ್ದರಿಂದ ಚಂದ್ರತಲದಲ್ಲಿ ಕೂಪಗಳ ಉಗಮ ಮೊದಲು ಆಗಿರಬೇಕೆಂದೂ ಸಮುದ್ರಗಳ ಉಗಮ ಅನಂತರದ ವಿದ್ಯಮಾನವೆಂದೂ ಭಾವಿಸುವುದುಂಟು. ಸಾಧಾರಣ ಗಾತ್ರದ ಹೆಚ್ಚಿನ ಕೂಪಗಳು ವೃತ್ತಾಕಾರವಾಗಿವೆ. ಅವುಗಳಿಗೆ ಹೊರಗೋಡೆಗಳಿವೆ-ಇವುಗಳ ಎತ್ತರ ತಳದಿಂದ 300 ಮೀ. ಗಿಂತಲೂ ಹೆಚ್ಚಾಗಿರುವುದು ಅಪರೂಪವಲ್ಲ. ಪರಿಸರದ ನೆಲಕ್ಕಿಂತ ಕೂಪದ ತಳ ಎತ್ತರ ಮಟ್ಟದಲ್ಲಿರುವುದೂ ಉಂಟು. ಆದರೆ ಇದು ವಿರಳ. ಹೆಚ್ಚಿನ ಕೂಪಗಳಲ್ಲಿ ತಳ ಆಸುಪಾಸಿನ ನೆಲಕ್ಕಿಂತ ತಗ್ಗಿನಲ್ಲೇ ಇದೆ. ಕೂಪಗಳ ಒಳಗೋಡೆಗಳು ಹೊರಗೋಡೆಗಳಿಗಿಂತ ತೀರ ಕಡಿದಾಗಿ ಇರುವುದರಿಂದ ಪ್ರತಿಯೊಂದು ಕೂಪವೂ ಭಯಂಕರ ಮೃತ್ಯುಕೂಪದಂತೆಯೇ ಇರುವುದು. ವಿಶಾಲ ಕೂಪಗಳಲ್ಲಿ ಹೆಚ್ಚಿನವುಗಳ ಕೇಂದ್ರದಲ್ಲಿ ಪರ್ವತಾವಳಿಗಳು ಚಾಚಿಕೊಂಡಿವೆ. ಬಯಲು ನೆಲದ ಮೇಲೆ ಬಾಂಬ್ ಬಿದ್ದು ಆಸ್ಫೋಟಿಸಿದಾಗ ಉಳಿಯುವ ಗುರುತನ್ನು ಹೆಚ್ಚಿನ ಕೂಪಗಳೂ ಹೋಲುವುವು. ಅಂದರೆ ಪ್ರಬಲ ಆಘಾತದ ಪರಿಣಾಮ ಈ ಕೂಪಗಳು ಎಂದು ಭಾವಿಸಬಹುದು. ಬಾಹ್ಯವಸ್ತುಗಳ ತಾಡನೆಯೋ ಆಂತರಿಕ ಜ್ವಾಲಾಮುಖಿಗಳ ಆಸ್ಪೋಟನೆಯೋ ಕೂಪಗಳನ್ನು ರೂಪಿಸಿರಬೇಕು. ಹಿಂದೊಮ್ಮೆ ಕ್ರಿಯಾಪಟುಗಳಾಗಿದ್ದ ಜ್ವಾಲಾಮುಖಿಗಳಿಂದ ಪ್ರವಹಿಸಿದ ಲಾವಾರಸ ಹರಿದು ಆಕಾರರಹಿತ ಕೊರಕಲು ಕಣಿವೆಗಳಿಗೆ ಲೇಪನಗೊಂಡು ಕೂಪಗಳಾಗಿರಬಹುದೆಂಬ ಊಹೆ ಮೊದಲು ಇದ್ದಿತು. ಇವುಗಳ ಗಾತ್ರ ಮತ್ತು ರೂಪ ಬದಲಾದದ್ದನ್ನು ಗಮನಿಸಲಾಗಿದೆ. ಪೂರ್ಣಚಂದ್ರಗ್ರಹಣ ಕಾಲದಲ್ಲಿ ಕೆಲವು ಕೂಪಗಳು ಸ್ವಂತ ಪ್ರಕಾಶವನ್ನು ಬೀರುವುದನ್ನು ಗುರತಿಸಿದ್ದಾರೆ. 

11 ಪರ್ವತಗಳು : ಚಂದ್ರನಲ್ಲಿ ಸಾಕಷ್ಟು ಪರ್ವತಸಮೂಹಗಳೇ ಇವೆ-ಆಲ್ಪ್ಸ್, ಆಪೆನ್ನೈನ್ಸ್, ಕಾರ್ಪೇಥಿಯನ್ಸ್ ಇತ್ಯಾದಿ. ಈ ಹೆಸರುಗಳು ಭೂಮಿಯ ಮೇಲಿನ ಪರ್ವತಾವಳಿಗಳ ಹೆಸರುಗಳಿಂದಲೇ ಪ್ರಭಾವಿತವಾದವು. ಆದರೆ ಸಾದೃಶ್ಯ ಇಲ್ಲಿಗೆ ಮುಕ್ತಾಯವಾಗುತ್ತದೆ. ಮಳೆಯ ಹೊಡೆತ, ಗಾಳಿಯ ಬಡಿತ, ನೀರಿನ ಹರಿಯುವಿಕೆಯಿಂದಾಗುವ ಸವಕಳಿ, ಗಿಡಮರಗಳ ನಿರಂತರ ಪ್ರಭಾವ ಇವೇ ಮುಂತಾದವುಗಳಿಂದ ಭೂಮಿಯ ಮೇಲಿನ ಪರ್ವತಾವಳಿಗಳ ಬಾಹ್ಯ ರೂಪಗಳಲ್ಲಿ ತೀವ್ರ ವ್ಯತ್ಯಾಸಗಳು ತಲೆದೋರಿವೆ. ಇಂಥ ಯಾವ ಸಮಸ್ಯೆಯೂ ಇಲ್ಲದಿರುವ ಚಂದ್ರಲೋಕದ ಬೆಟ್ಟಗುಡ್ಡಗಳು ಹೆಚ್ಚು ಕಡಿಮೆ ಅವು ಮೈದಳೆದ ಕಾಲದ ನಗ್ನರೂಪದಲ್ಲಿಯೇ ಇಂದಿಗೂ ಇವೆ. ಕಡಿದಾದ ಮೈಗಳು, ನೆಲದಿಂದ ಹಠಾತ್ತಾಗಿ ಅಂತರಿಕ್ಷಕ್ಕೆ ಚಾಚಿರುವ ಶಿಖರಾಗ್ರಗಳು, ಒಂಟಿ ಬಂಡೆಗಳು ಮುಂತಾದವು ಚಂದ್ರ ಪರ್ವತಗಳ ವೈಶಿಷ್ಟ್ಯ. ಅತ್ಯುನ್ನತ ಶಿಖರದ ಎತ್ತರ 7.620 ಮೀ. ವರೆಗೂ ಇದೆ. (ಅತ್ಯುನ್ನತ ಎವರೆಸ್ಟಿನ ಎತ್ತರ 8,839 ಮೀ.). ಅಪೆನ್ನೈನ್ಸ್ ಪರ್ವತ ಶ್ರೇಣಿಗಳಲ್ಲಿ ಹ್ಯಾಡ್ಲೀ ಎಂಬವನ ಹೆಸರಿನ ರಿಲ್ ಅಥವಾ ಕಣಿವೆ ಎದ್ದು ತೋರುವ ಉದ್ದವಾದ ಒಂದು ಬಿರುಕು. ಸರಿ ಸುಮಾರು ಒಂದೇ ದಪ್ಪದ ನಳಿಗೆ ಅಡ್ಡಾದಿಡ್ಡಿ ಹರಿದಂತೆ ಇದರ ವ್ಯಾಪ್ತಿ ಉಂಟು. ಇದು ಪರ್ವತದಿಂದ ತೊಡಗಿ ಪಕ್ಕದ ಸಮುದ್ರದವರೆಗೂ ಹಬ್ಬಿಕೊಂಡಿದೆ. ಈ ವಲಯದ ಚಿತ್ರಗಳ ಪರಿಶೀಲನೆಯಿಂದ ತಿಳಿದಿರುವುದಿಷ್ಟು ; ಹ್ಯಾಡ್ಲೀ ಕಣಿವೆಯ ಎರಡು ಪಕ್ಕಗಳ ಗೋಡೆಗಳಿಂದ ಹೊಸತಾಗಿ ಕಲ್ಲುಗಳು ಉರುಳಿರುವ ಗಾಯಗಳನ್ನು ಗುರುತಿಸಲಾಗಿದೆ; ಈ ಕಣಿವೆ ಒಂದು ಸಮುದ್ರದ ತಳವನ್ನು ಸೇರಿ ಅಲ್ಲಿಯೂ ಕೊರೆದುಕೊಂಡು ಮುಂದೆ ಹೋಗಿದೆ. ಇದರ ಹರಿವಿನ ಪೂರ್ಣಾಭ್ಯಾಸ ಚಂದ್ರ ವಿವಿಧ ಸ್ತರಗಳ ರಚನೆ, ರೂಪಾಂತರ, ವಯಸ್ಸು ಮುಂತಾದವುಗಳಿಗೆ ಹೆಚ್ಚಿನ ಒಳನೋಟ ನೀಡಿದೆ.

12 ಮ್ಯಾಸ್ಕನುಗಳು : ಚಂದ್ರನಲ್ಲಿ ಅಧಿಕ ದ್ರವ್ಯರಾಶಿ ಕೇಂದ್ರೀಕೃತ ಸ್ಥಳಗಳಿಗೆ ಈ ಹೆಸರುಂಟು. ಒಂSs ಅಔಓಛಿeಟಿಣಡಿಚಿಣioಟಿ ಎಂಬ ಪದಗಳ ಸಂಯೋಜಿತ ಸಂಕ್ಷೇಪ ರೂಪ ಒಂSಅಔಓ. ಚಂದ್ರನ ಸುತ್ತ ಪ್ರರಿಭ್ರಮಿಸಲು ನಿಯೋಜಿಸಿದ ಆಂತರಿಕ್ಷ ನೌಕೆಗಳ ಕಕ್ಷಾವೇಗಗಳನ್ನು ಕರಾರುವಾಕ್ಕಾಗಿ ನಿರ್ಧರಿಸಲಾಗಿತ್ತು. ಆದರೆ ವಾಸ್ತವಿಕ ಕಕ್ಷಾವೇಗಗಳು ಸೈದ್ಧಾಂತಿಕ ಕಕ್ಷಾವೇಗಗಳಿಂದ ವಿಚಲನೆಗೊಂಡಿದ್ದುದನ್ನು-ಅದೂ ಕೆಲವೆಡೆಗಳಲ್ಲಿ ಮಾತ್ರ-ಗುರುತಿಸಲಾಯಿತು. ಇಂಬ್ರಿಯಮ್, ಸೆರೆನಿಡೆಟಿಸ್, ಕ್ರಿಸಿಯಮ್, ಹ್ಯೂಮರಮ್ ಮತ್ತು ನೆಕ್ಟಾರಿಸ್ ಸಮುದ್ರಗಳ ಮೇಲು ಭಾಗಗಳಲ್ಲಿ ಒಂದು ನೌಕೆ ಸಾಗುತ್ತಿದ್ದಾಗ ಅದರ ಕಕ್ಷಾವೇಗ ಏರುತ್ತಿತ್ತು. ಆದ್ದರಿಂದ ಆ ವಲಯಗಳಲ್ಲಿ ಚಂದ್ರನ ಗುರುತ್ವಾಕರ್ಷಣ ಬಲ ಹೆಚ್ಚು ಇರಬೇಕು ಎಂದು ವಿಜ್ಞಾನಿಗಳು ತೀರ್ಮಾನಿಸಿದರು. ಇದರ ಕಾರಣ ಅಲ್ಲಿ ಅಧಿಕ ದ್ಯವ್ಯರಾಶಿ ಕೇಂದ್ರೀಕರಣ. ಇಂಥ ವಲಯಗಳೇ ಮ್ಯಾಸ್ಕನುಗಳು. ದೈತ್ರಗಾತ್ರದ, ಮಹಾಭಾರದ ಹಾಗೂ ಕಬ್ಬಿಣಾಂಶ ಜಾಸ್ತಿ ಇರುವ ಉಲ್ಕಾಪಿಂಡಗಳು ಮ್ಯಾಸ್ಕನ್ ವಲಯಗಳಲ್ಲಿ ಹುದುಗಿಕೊಂಡಿರಬಹುದು ಎಂದು ಕೆಲವರ ಊಹೆ. ಚಂದ್ರನ ಒಳಗಿನಿಂದ ಹರಿದ ವಿವಿಧ ಸಾಂದ್ರತೆಗಳ ಲಾವಾರಸ ಈ ತಗ್ಗು ಪ್ರದೇಶಗಳನ್ನು ಆವರಿಸಿ ಅಲ್ಲಿ ದಟ್ಟವಾಗಿ ಘನೀಭವಿಸಿರಬಹುದು ಎಂದು ಬೇರೆಯವರ ಅಭಿಪ್ರಾಯ. ಉಲ್ಕಾ ಸಂಘರ್ಷದಿಂದ ಉಂಟಾದ ಕೂಪಗಳನ್ನು ಮುಚ್ಚಲು, ಅಂದು ದ್ರವರೂಪದಲ್ಲಿ ಇದ್ದಿರಬಹುದಾದ ಚಂದ್ರರಸ ಹರಿದು ಈ ವಲಯದಲ್ಲಿ ದಟ್ಟೈಸಿರಬಹುದು ಎಂದು ಮತ್ತೊಂದು ವಿಜ್ಞಾನಿಗಳ ಗುಂಪಿನ ಅಭಿಪ್ರಾಯ. ಈ ಬಗ್ಗೆ ಇನ್ನೂ ಖಚಿತವಾದ ತೀರ್ಮಾನಕ್ಕೆ ಬರಲು ವಿಜ್ಞಾನ ಲೋಕಕಿನ್ನೂ ಸಾಧ್ಯವಾಗಿಲ್ಲ. 

13 ಚಂದ್ರನ ಶಿಲೆಗಳು ; ಚಂದ್ರನ ಮೇಲಿಳಿದ ಮನುಷ್ಯ ಅಲ್ಲಿಂದ ಶಿಲೆಗಳನ್ನು ತಂದಿದ್ದಾನೆ. ಇವನ್ನು ಭೂಮಿಯಲ್ಲಿನ ಪ್ರಯೋಗಶಿಲೆಗಳಲ್ಲಿ ವಿಭಜಿಸಿ ಪರೀಕ್ಷಿಸಲಾಗಿದೆ. ಆಯ್ದು ತಂದ ಚಂದ್ರ ಶಿಲೆಗಳು ಅಗ್ನಿಜನ್ಯ ಅಂದರೆ ಉಷ್ಣಶಕ್ತಿಯಿಂದ ನಿರ್ಮಿತವಾದವುಗಳೆಂದು ಗೊತ್ತಾಗಿದೆ. (ಮ್ಯಾಗ್ಮದ-ಎಂದರೆ ಕಾಯವೊಂದು ಘನೀಭವಿಸುವ ಪೂರ್ವಸ್ಥಿತಿಯ ಶಿಲಾದ್ರವದ-ಉಷ್ಣವು ವಿಸರಣೆಯಿಂದ ನಷ್ಟವಾದಂತೆ ಅದು ಹೆಪ್ಪುಗಟ್ಟಿ ಅಕ್ಕಪಕ್ಕದ ಸಂಸ್ತರಗಳ ಒತ್ತಡದಿಂದ ಕಲ್ಲಾಗುವುದು. ಇದೇ ಅಗ್ನಿಜನ್ಯಶಿಲೆ ಅಥವಾ ಅಗ್ನಿಶಿಲೆ. ಭೂಮಿಯಲ್ಲಿ ಇರುವ ಇತರ ಎರಡು  ವಿಧದ ಶಿಲೆಗಳು ಜಲಜ ಶಿಲೆಗಳು ಮತ್ತು ರೂಪಾಂತರಿತ ಶಿಲೆಗಳು. ಆದರೆ 95%ರಷ್ಟು ಅಗ್ನಿಶಿಲೆಗಳೇ. ಆದ್ದರಿಂದ ಚಂದ್ರ ಮೊದಲು ಶಿಲಾದ್ರವದ ರೂಪದಲ್ಲಿದ್ದು ಘನೀಭವಿಸಿ ಈಗಿನ ರೂಪಕ್ಕೆ ಬಂದಿರಬಹುದು ಎಂಬ ಊಹೆಗೆ ಬಲವಾದ ಪುರಾವೆ ಲಭಿಸಿದಂತಾಗಿದೆ. ಜಲಜಶಿಲೆ ಇದುವರೆಗೆ (2005) ದೊರೆತಿಲ್ಲ. ಅಗ್ನಿಶಿಲೆಗಳ ಶೋಧನೆಯಿಂದ ಶೀತಲಚಂದ್ರ ಊಹೆಗೆ (ಇದರ ಪ್ರಕಾರ ಚಂದ್ರ ಎಂದೂ ಬಿಸಿಯಾಗಿರಲಿಲ್ಲ; ಆದ್ದರಿಂದ ಅದರ ಗರ್ಭದಲ್ಲಿಯೂ ಉಷ್ಣವಿರುವುದು ಸಾಧ್ಯವಿಲ್ಲ ಎಂದಿದೆ) ಮಂಗಳ ಹಾಡಿದಂತಾಯಿತು. ಈಗ ದೊರೆತಿರುವ ಅಗ್ನಿಶಿಲೆಗಳ ವಯಸ್ಸು 3.1 ( 108 ವರ್ಷಗಳೆಂದು ಅಂದಾಜು. ಇವನ್ನು ಪಡೆದದ್ದು ಚಂದ್ರನ ಸಮುದ್ರದಿಂದ. ಆದ್ದರಿಂದ ಸಮುದ್ರದ ವಯಸ್ಸು ಕನಿಷ್ಠ ಪಕ್ಷ 3.1 ( 108 ವರ್ಷಗಳಾಗಿರಲೇಬೇಕು. ಇದರ ಅರ್ಥ ಚಂದ್ರನ ಸಮುದ್ರಗಳು ಈಚಿನ ರಚನೆಗಳಲ್ಲ; ಇವು ಸಾಕಷ್ಟು ಹಳೆಯವು ಮಾತ್ರವಲ್ಲ ಲಕ್ಷಾಂತರ ವರ್ಷಗಳಿಂದ ಅದೇ ರೂಪದಲ್ಲಿ ಇವೆ ಕೂಡ. ಭೂಮಿಯಲ್ಲಿ ದೊರೆತಿರುವ ಅತಿ ಪ್ರಾಚೀನ ಶಿಲೆಗಳ ವಯಸ್ಸು ಸುಮಾರು 3.3 ( 108 ವರ್ಷಗಳು. ಈ ಹೋಲಿಕೆಯಲ್ಲಿ ಚಂದ್ರ ಮತ್ತು ಭೂಮಿಯ ಶಿಲೆಗಳು ಸಮಕಾಲೀನವಾಗಿವೆ. ಆದರೆ ಭೂಮಿಯಲ್ಲಿ ಆ ಮೊದಲೂ ಶಿಲೆಗಳಿದ್ದಿರಲಿಲ್ಲ ಎಂದು ತೀರ್ಮಾನಿಸಲಾಗದು. ನೈಸರ್ಗಿಕ ಬಲಗಳ ಹೊಡೆತದಿಂದ ಅವು ಶಿಥಿಲವಾಗಿ ನಾಶವಾಗಿ ಹೋಗಿರುವ ಸಾಧ್ಯತೆ ಉಂಟು. ಚಂದ್ರ ಟ್ರಾಂಕ್ವಿಲಿಟಿ ಸಮುದ್ರದ ಮೇಲ್ಮೈಯಿಂದ ಆಯ್ದು ತಂದ ದೂಳನ್ನೂ ಶಿಲೆಗಳನ್ನೂ ಪರಿಶೀಲಿಸಿದಾಗ ದೂಳಿನ ಪ್ರಾಯ ಸುಮಾರು 4.6 ( 109 ವರ್ಷಗಳೆಂದೂ ಶಿಲೆಗಳ ಪ್ರಾಯ ಸುಮಾರು 3.6 ( 109 ವರ್ಷಗಳೆಂದೂ (ಎಂದರೆ ಶಿಲೆಗಳು ದೂಳಿಗಿಂತ 1 ( 109  ವರ್ಷಗಳಷ್ಟು ತರುಣ) ಕಂಡುಬಂದಿತು. ದೂಳಿನ ಪ್ರಾಯ ಚಂದ್ರನ ಪ್ರಾಯದಷ್ಟೇ (ಇದು ಸರಿಸುಮಾರಾಗಿ 5 ( 109 ವರ್ಷಗಳು). 
ಅನಂತರದ ಅಪೋಲೋ 17ರ ಗಗನಯಾತ್ರಿಗಳು ಚಂದ್ರನ ಎತ್ತರ ಪ್ರದೇಶದಲ್ಲಿ ಇಳಿದು ಅಲ್ಲಿಂದ ಸಂಗ್ರಹಿಸಿ ತಂದ ಶಿಲೆಗಳು ಸುಮಾರು 4 ರಿಂದ 4.3 ಬಿಲಿಯನ್ ವರ್ಷಗಳಷ್ಟು ಹಳೆಯವೆಂದು ಅಂದಾಜು ಮಾಡಲಾಯಿತು. ಈ ನಿಟ್ಟಿನಲ್ಲಿ ಅಪೋಲೋ 17ರ ಗಗನಯಾತ್ರಿಗಳು ತಂದ ಒಂದು ಶಿಲೆಯ ವಯಸ್ಸು ಸುಮಾರು 4.6 ಬಿಲಿಯನ್ ವರ್ಷಗಳೆಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಚಂದ್ರ ಜನನವಾದ ಸುಮಾರು  1 ( 109 ವರ್ಷಗಳ ತರುವಾಯ, ಎಂದರೆ ಸುಮಾರು 4 x 109 ವರ್ಷಗಳ ಹಿಂದೆ, ಸಂಭವಿಸಿದ ಕೆಲವು ದುರ್ಘಟನೆಗಳ ಪರಂಪರೆ ಚಂದ್ರನನ್ನು ಭೀಕರವಾಗಿ ಅಲುಗಿಸಿಬಿಟ್ಟಿತು. ಆಗ ಲಾವಾರಸದ (ಅಥವಾ ಚಂದ್ರಶಿಲಾರಸದ) ಪ್ರವಾಹವೇ ಹರಿಯಿತು. ಚಂದ್ರ ಗರ್ಭದಿಂದ ಹೊರಬಂದ ಲಾವಾರಸ ತಣಿದು ಶಿಲೆಗಳಿರಬಹುದು ಅಥವಾ ಉಲ್ಕಾ ತಾಡನೆಯಿಂದ ಶಿಲೆ ಕರಗಿ ಮರುರೂಪ ಪಡೆದಿರಬಹುದು. ಎರಡನೆಯ ಕಾರಣ ಸಮರ್ಪಕ ಎಂದು ಭಾವಿಸಿದರೆ ಅಂಥ ದುರ್ಘಟನೆಯ ಕುರುಹು ಚಂದ್ರನ ನೆರೆಕಾಯವಾದ ಭೂಮಿಯಲ್ಲಿಯೂ ಕಾಣಬೇಕು. ಬಹುಶಃ ಈ ಕಾರಣದಿಂದ ವಿಜ್ಞಾನಿಗಳಿಗೆ ಭೂಮಿಯ ಮೇಲೆ 3.6 ( 109 ವರ್ಷಗಳಿಗಿಂತ ಹಳೆಯ ಕಲ್ಲುಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ (ಭೂಮಿಯ ವಯಸ್ಸು ಸುಮಾರು 5  109  ವರ್ಷಗಳು). ಚಂದ್ರನಿಂದ ತಂದ ವಸ್ತುಗಳ ರಖಮನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳ ನೆರವಿನಿಂದ ಪರಿಶೀಲಿಸಿದಾಗ ಉಲ್ಕಾಪಾತದ ಪರವಾಗಿ ಇನ್ನಷ್ಟು ದಾಖಲೆ ದೊರೆಯಿತು. ಅತ್ಯಂತ ಸೂಕ್ಷ್ಮಕಣಗಳ (ಅತಿಸೂಕ್ಷ್ಮ ಉಲ್ಕೆಗಳು) ಅವಿಚ್ಛಿನ್ನ ಪ್ರಹಾರದಿಂದ ಚಂದ್ರಶಿಲೆಗಳ ಕಣಕಣಗಳ ಮೇಲೆಯೂ ಆದ ಗುರುತುಗಳು ಸ್ಪಷ್ಟವಾಗಿ ಕಂಡವು. ಗಾಜಿನಂತೆ ಹೊಳೆವ ತುಣುಕುಗಳೂ ಸಾಕಷ್ಟು ದೊರೆತಿವೆ. ಉಲ್ಕಾಪಾತದಿಂದ ಕರಗಿ ಹಾರಿದ ಮರಳುಮಿಶ್ರಿತ ಕಲ್ಲಿನ ದ್ರವ ಘನೀಭವಿಸಿದಾಗ ಇವು ಉಂಟಾಗಿರಬಹುದು. ವಿಶ್ವಕಿರಣ (ಕಾಸ್ಮಿಕ್ ರೇ) ಮತ್ತು ಸೌರ ಕಣಗಳ ತಾಡನದ ಅಚ್ಚಳಿಯದ ಕುರುಹುಗಳನ್ನೂ ಗುರುತಿಸಲಾಗಿದೆ. ಎಂದೆಂದೂ ಮಾಸದ ಈ ಕುರುಹುಗಳ ಪರಿಶೀಲನೆಯಿಂದ ಅವು ಯಾವಾಗ ಉಂಟಾದವೆಂದು ಕಂಡು ಹಿಡಿಯಬಹುದು. ಟ್ರಾಂಕ್ವಿಲ್ವಿಟ ಸಮುದ್ರದಿಂದ ಸಂಗ್ರಹಿಸಿದ ಶಿಲೆಗಳಲ್ಲಿ ಭೂಮಿಯ ಮೇಲೆ ಇರದಂಥ ಕನಿಷ್ಠ ಪಕ್ಷ ಮೂರು ಲೋಹ ಸಂಯುಕ್ತಗಳನ್ನು ಪತ್ತೆಹಚ್ಚಲಾಯಿತು. ಇವೆಲ್ಲವುಗಳಲ್ಲೂ ಕಬ್ಬಿಣದ ಅಂಶವೇ ಪ್ರಧಾನ. ಚಂದ್ರನಲ್ಲಿ ಜೀವ ವಿಕಾಸವನ್ನು ಕರಿತು ಅಭಿಪ್ರಾಯ ಸ್ಪಷ್ಟವಾಗಿದೆ-ಅಲ್ಲಿ ಎಂದೂ ಜೀವಿಗಳಿದ್ದಿರಲಾರವು; ಜೀವವಿಕಾಸಕ್ಕೆ ಚಂದ್ರ ಖಂಡಿತವಾಗಿಯೂ  ಪ್ರತಿಕೂಲ ಪರಿಸರ. ರಚನೆ, ವಯಸ್ಸು ಈ ದೃಷ್ಟಿಯಿಂದ ಭೂಮಿ ಹಾಗೂ ಚಂದ್ರರಲ್ಲಿ ಸಾಮ್ಯ ಕಂಡು ಬಂದರೂ ಇತರ ವಿವರಗಳ ಪರಿಶೀಲನೆಯಿಂದ ಇವುಗಳಲ್ಲಿರುವ ಭಿನ್ನತೆ ಮತ್ತು ಅಸಮತೆಗಳು ಜಾಸ್ತಿ ಎಂದು ತಿಳಿದಿದೆ. ಚಂದ್ರ ಗರ್ಭದಲ್ಲಿ ಯಾವ ತರಹದ ಕಂಪನವನ್ನೂ ಪತ್ತೆ ಹಚ್ಚಲಾಗಿಲ್ಲ. ಚಂದ್ರನ ತೊಗಟೆಯ ಮೇಲಿರುವ ರಾಸಾಯನಿಕ ಸಂಯುಕ್ತಗಳೂ ಖನಿಜಗಳೂ ಭೂಮಿಯ ಮೇಲಿನವುಗಳಿಂತ ಗಮನಾರ್ಹವಾಗಿ ಬೇರೆಯಾಗಿವೆ. ಅದೊಂದು ಕಿಟ್ಟ; ಅಧಿಕ ಉಷ್ಣತೆಯಲ್ಲಿ ತಯಾರಾದ, ನೀರು ಇದ್ದಿದ್ದರೆ ಅಂದೇ ಕಳೆದುಕೊಂಡ, ಬರುಡು ಆಕಾಶಕಾಯ ಎಂದು ವಿಜ್ಞಾನಿಗಳ ತೀರ್ಮಾನ. 
14 ಚಂದ್ರನ ಮೇಲ್ಮೈಯಲ್ಲಿನ ರಾಸಾಯನಿಕಗಳು: ಚಂದ್ರನ ಮೇಲೆ 1966 ರಿಂದ ಈಚೆಗೆ ರಷ್ಯ ದೇಶದ ಲ್ಯೂನಾ ಸರಣಿಯ ಅಮೆರಿಕ ದೇಶದ ಸರ್ವೆಯರ್ ಸರಣಿಯ ರೋಬೋಟ್ ನೌಕೆಗಳು ಮತ್ತು ಅಪೋಲೋ ಸರಣಿಯ ಮಾನವ ಸಹಿತ ನೌಕೆಗಳು ವಿವಿಧ ಪ್ರದೇಶಗಳಲ್ಲಿ ನಿಧಾನವಾಗಿ ಇಳಿದವು. ಲೂನಾ ನೌಕೆಗಳಲ್ಲಿ ಮತ್ತು ಅವುಗಳಲ್ಲಿ ಚಂದ್ರನ ಮೇಲೆ ಇಳಿಸಿದ ಎರಡು ಲೊನಖೋಡ್-1 ಮತ್ತು ಎರಡು ಸ್ವಯಂಚಾಲಿತ ವಾಹನಗಳಲ್ಲಿ ಮತ್ತು ಸರ್ವೇಯರ್ ನೌಕೆಗಳಲ್ಲಿ ಅಳವಡಿಸಿದ್ದ ಸೂಕ್ಷೋಪಕರಣಗಳ ನೆರವಿನಿಂದ ಚಂದ್ರನ ಮೇಲ್ಮೈಯಲ್ಲೇ ಕೆಲವು ಪ್ರಯೋಗಗಳನ್ನು ಸ್ವಯಂಚಾಲಿತವಾಗಿ ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಲಾಯಿತು. ವಿಶ್ಲೇಷಣೆಗೆ ಆಯ್ದುಕೊಂಡ ವಸ್ತುವಿನ ಮೇಲೆ ಆಲ್ಫಾ ಕಣಗಳನ್ನು (ಹಿಲಿಯಮ್ ಪರಮಾಣುಗಳ ತಿರುಳುಗಳು) ತಾಡಿಸಲಾಯಿತು. ಈ ಆಲ್ಫಾ ಕಣಗಳು ಚಂದ್ರ ವಸ್ತುವಿನ ಪರಮಾಣುವಿನ ತಿರುಳುಗಳೊಡನೆ ಅಂತರಕ್ರಿಯೆ ಎಸಗಿ ಹಲವಾರು ಪ್ರೋಟಾನುಗಳೂ ಇತರ ಆಲ್ಫಾ ಕಣಗಳೂ ಹೊರಹೊಮ್ಮುವಂತೆ ಮಾಡಿದುವು. ಹಾಗೆ ಚಿಮ್ಮಲ್ಪಟ್ಟ ಪ್ರೋಟಾನುಗಳ ಹಾಗೂ ಆಲ್ಫಾ ಕಣಗಳ ಶಕ್ತಿವಿತರಣೆ ತಾಡಿತ ವಸ್ತುವನ್ನು ನಿರ್ಮಿಸಿರುವ ಪರಮಾಣುಗಳ ಬಗೆಗಳನ್ನು ಅವಲಂಬಿಸಿತ್ತು. ಆದ್ದರಿಂದ ತಾಡನಾನಂತರ ಲಭಿಸಿದ ಶಕ್ತಿ ವಿತರಣೆಯನ್ನು ಸೂಕ್ಷ್ಮವಾಗಿ ಅಳೆದು ದೊರೆತ ಮಾಹಿತಿಗಳನ್ನು ಭೂಮಿಗೆ ಬಿತ್ತರಿಸಲಾಯಿತು. ಇವನ್ನು ಆಧರಿಸಿ ವಿಜ್ಞಾನಿಗಳು ಚಂದ್ರತಲದಲ್ಲಿನ ಶಿಲೆಗಳ ಹಾಗೂ ಕಣಗಳ ವಿಶ್ಲೇಷಣೆಯನ್ನು ಮಾಡಿದರು. ಮೊದಲಿಗೆ ಚಂದ್ರನ ಮೇಲ್ಮೈಯ ಬೇರೆ ಬೇರೆ ಭಾಗಗಳಿಂದ ಆಯ್ದು ತಂದ ಶಿಲೆಯ ರಖಮುಗಳಿಂದ ದೊರೆತ ಫಲಿತಾಂಶಗಳೂ ಕೆಲಮಟ್ಟಿಗೆ ಒಂದೇ ಆಗಿದ್ದುದು ಕಂಡುಬಂದಿತು. ಅವುಗಳಲ್ಲಿ ಚಂದ್ರನ ಸಾಗರ ಸಮುದ್ರ ಪ್ರದೇಶಗಳಲ್ಲಿ ದೊರೆತ ಬಸಾಲ್ಟ್ ಶಿಲೆಗಳಲ್ಲಿ ಕಬ್ಬಿಣ, ಮ್ಯಾಂಗನೀಸ್ ಹಾಗೂ ಟೈಟೇನಿಯಂ ನಂತರ `ಭಾರವಾದ ಧಾತುಗಳು ಹೆಚ್ಚಾಗಿ ಕಂಡುಬಂದರೆ ಅನೋರ್ಥೋಸೈಟ್‍ಗಳಲ್ಲಿ ಅಲ್ಯೂಮಿನಿಯಂ ಹಾಗೂ ಕ್ಯಾಲ್ಸಿಯಂನಂತಹ ಧಾತುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ಒಂದೊಂದೂ ರಾಸಾಯನಿಕ ರಚನೆಯ ರೀತ್ಯ ಚಂದ್ರನ ಈ ಶಿಲೆಗಳು ಭೂಮಿಯಲ್ಲಿ ದೊರೆಯುವ ಬಸಾಲ್ಟ್ ಹಾಗೂ ಅನೋರ್ಥೋಸೈಟ್ ಶಿಲೆಗಳನ್ನು ಹೋಲುತ್ತವೆ. ಆದ್ದರಿಂದ ಚಂದ್ರ ಮತ್ತು ಭೂಮಿಗಳ ಕೆಲವು ವಸ್ತುಗಳಿಗಾದರೂ ಒಂದೇ ರಾಸಾಯನಿಕ ಇತಿಹಾಸವಿತ್ತೆಂದು ವೇದ್ಯವಾಯಿತು.
15 ಚಂದ್ರನ ಅದೃಶ್ಯಭಾಗ : ಭೂಮಿಯಿಂದ ನೋಡುವ ವೀಕ್ಷಕನಿಗೆ ಚಂದ್ರನ ಒಂದು ಭಾಗ ಮಾತ್ರ ಸದಾ ಕಾಣುತ್ತಿರುತ್ತದೆ. ಇನ್ನೊಂದು ಭಾಗ, ಎಂದರೆ ಹಿಂಭಾಗ, ಸದಾ ಅದೃಶ್ಯವಾಗಿಯೇ ಇರುವುದು. 1959ರ ಅಕ್ಟೋಬರ್ 4ರಂದು ರಷ್ಯ ದೇಶದ ಆಕಾಶನೌಕೆ ಲೂನಿಕ್ 3 ಚಂದ್ರನ ಅದೃಶ್ಯಭಾಗದೆಡೆಗೆ ಸಾಗಿ ಭೂಮಿಗೆ ಅಲ್ಲಿನ ಚಿತ್ರಗಳನ್ನು ಬಿತ್ತರಿಸಿತು. ಇವೇ ನಮಗೆ ದೊರೆತ ಪ್ರಥಮ ಚಿತ್ರಗಳು. ಆ ಬಳಿಕ ಸಾಕಷ್ಟು ಸವಿವರ ಚಿತ್ರಗಳನ್ನು ಲೂನಾರ್ ಆರ್ಬಿಟರ್ ಲೂನಾ ಕ್ಲಮಂಚೈನ್, ಲೂನಾರ್ ಪ್ರಾಸ್‍ಪೆಕ್ಟರ್, ಇಂತಹ ರೋಬೋಟ್ ನೌಕೆಗಳ ಹಾಗೂ ಅಪೋಲೋ ಮಾನವಸಹಿತ ನೌಕೆಗಳ ನೆರವಿನೊಡನೆ ಸಂಗ್ರಹಿಸಲಾಗಿದೆ. ಅದೃಶ್ಯಭಾಗದಲ್ಲಿ `ಸಮುದ್ರಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಇರುವ ಒಂದು ವ್ಯತ್ಯಾಸವನ್ನು ಬಿಟ್ಟರೆ ಚಂದ್ರನ ಎರಡೂ ಅರ್ಧಗಳಲ್ಲಿ ಸಾಕಷ್ಟು ಸಾದೃಶ್ಯ ಉಂಟು.
III ಚಲನೆಗಳು : 1 ಆವರ್ತನೆ ಭ್ರಮಣೆ ; ಸಾಮಾನ್ಯವಾಗಿ ಎಲ್ಲ ಆಕಾಶಕಾಯಗಳಿಗೂ ಇರುವಂತೆ ಚಂದ್ರನಿಗೆ ಕೂಡ ಎರಡು ಪ್ರಧಾನ ಚಲನಗಳಿವೆ-ಸ್ವಂತಾಕ್ಷದ ಸುತ್ತ ಆವರ್ತನೆ, ಭೂಮಿಯ ಸುತ್ತ ಭ್ರಮಣೆ. ಇವೆರಡರ ಅವಧಿಗಳೂ ಸಮವಾಗಿವೆ, ಎಂದರೆ, ಚಂದ್ರನ ನಾಕ್ಷತ್ರಿಕ ಪರಿಭ್ರಮಣೆಯ ಅವಧಿ (ಸೈಡೀರಿಯಲ್ ರಿವೊಲ್ಯೂಷನ್-ಸ್ಥಿರ ನಕ್ಷತ್ರಗಳನ್ನು ಕುರಿತಂತೆ ಭೂಮಿಯನ್ನು ಒಂದು ಸಲ ಸುತ್ತುಹಾಕಲು ಚಂದ್ರನಿಗೆ ಬೇಕಾಗಿರುವ ಕಾಲಾವಧಿ) ಚಂದ್ರನ ನಾಕ್ಷತ್ರಿಕ ಆವರ್ತನೆಯ ಅವಧಿಗೆ (ಸೈಡೀರಿಯಲ್ ರೋಟೇಷನ್) ಸಮವಾಗಿದೆ. 

ಚಿತ್ರ-11-1

ಇದು 27.32 ದಿವಸಗಳು ಅಥವಾ 27 ದಿ. 7 ಗಂ. 43 ನಿ. 11.5 ಸೆ. ಆದರೆ ಇದೇ ಅವಧಿಯಲ್ಲಿ ಭೂಮಿ-ಚಂದ್ರ ವ್ಯವಸ್ಥೆ ಸೂರ್ಯನ ಸುತ್ತ ಸುಮಾರು 27/365 (ಎಂದರೆ ಸುಮಾರು 1/13ರಷ್ಟು ಅಥವಾ ಸುಮಾರು 270 ಯೂನಿಟ್ಸ್ ದೂರವನ್ನು ಗಮಿಸಿರುತ್ತದೆ. ಆದ್ದರಿಂದ ಚಂದ್ರನ ಒಂದು ನಾಕ್ಷತ್ರಿಕ ಪರಿಭ್ರಮಣೆಯ ಅವಧಿಯಲ್ಲಿ ಸೂರ್ಯ ಸ್ಥಿರನಕ್ಷತ್ರಗಳ ಹಿನ್ನೆಲೆಯಲ್ಲಿ ಸುಮಾರು 270ಯಷ್ಟು ಪಶ್ಚಿಮ-ಪೂರ್ವದಿಶೆಯಲ್ಲಿ ಚಲಿಸಿರುವಂತೆ ಭೂಮಿಯಲ್ಲಿರುವ ವೀಕ್ಷಕನಿಗೆ ಭಾಸವಾಗುತ್ತದೆ. ಚಂದ್ರನ ಪರಿಭ್ರಮಣ ದಿಶೆಯೂ ಪಶ್ಚಿಮ-ಪೂರ್ವ. ಹೀಗಾಗಿ ಸೂರ್ಯನನ್ನು ಕುರಿತಂತೆ ಚಂದ್ರ ಒಂದು ಪರಿಭ್ರಮಣೆಯನ್ನು ಭೂಮಿಯ ಸುತ್ತ ಮುಗಿಸಲು ನಾಕ್ಷತ್ರಿಕ ಪರಿಭ್ರಮಣಾವಧಿಗಿಂತ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗುವುದು. ಈ ಅವಕಾಶಕ್ಕೆ ಸಂಯುತಿ ಅವಧಿ(ಸಿನಾಡಿಕ್ ಪೀರಿಯಡ್) ಎಂದು ಹೆಸರು. 

ಚಿತ್ರ-11-2

ಇದೇ ಅವಧಿಯಲ್ಲಿ ಚಂದ್ರನ ಕಲೆಗಳಲ್ಲಿ (ಫೇಸಸ್) ಒಂದು ಪೂರ್ಣಾಂದೋಳನ ಮುಗಿಯುವುದರಿಂದ ಇದಕ್ಕೆ ಚಾಂದ್ರಮಾಸ ಅಥವಾ ತಿಂಗಳು (ಲ್ಯೂನೇಷನ್) ಎಂಬ ಹೆಸರು ಕೂಡ ಉಂಟು. ಚಾಂದ್ರಮಾಸದ ಅವಧಿ 29.53 ದಿವಸಗಳು ಅಥವಾ 29 ದಿ. 12 ಗಂ. 44 ನಿ. 2.8 ಸೆ. ಸಾಮಾನ್ಯ ವೀಕ್ಷಕರಿಗೆ ಚಾಂದ್ರಮಾಸವೇ ಪ್ರಕಟಿತವಾಗಿ (ಕಲೆಗಳ ಪೂರ್ಣಾಂದೋಳನದ ಪರಿಣಾಮ) ಕಾಣುವುದರಿಂದ ರೂಢಿಯಲ್ಲಿ ಅದಕ್ಕೇ ಹೆಚ್ಚಿನ ಪ್ರಾಧಾನ್ಯ ಲಭಿಸಿದೆ.
2 ದೋಲನUಳು : ಚಂದ್ರನ ಆವರ್ತನಾವಧಿಯೂ ಪರಿಭ್ರಮಣಾವಧಿಯೂ ಸಮವಾಗಿರುವುದರಿಂದ ಭೂಮಿಯಲ್ಲಿ ನಿಂತಿರುವ ವೀಕ್ಷಕನಿಗೆ ಚಂದ್ರನ ಒಂದು ಪಾಶ್ರ್ವ ಮಾತ್ರ ಕಾಣುತ್ತದೆ, ಉಳಿದ ಪಾಶ್ರ್ವ ಸದಾ ಅದೃಶ್ಯವಾಗಿರುತ್ತದೆ. ಈ ವೈಚಿತ್ರ್ಯದ ಗಣಿತ ಅರ್ಥವಾಗಲು ಒಂದು ಸುಲಭ ಪ್ರಯೋಗ ಮಾಡಿನೋಡಬಹುದು. ಹಜಾರದ ನಡುವೆ ಒಂದು ಅಗ್ಗಿಷ್ಟಿಕೆ ಇರಲಿ (ಔ) (ಚಿತ್ರ 12). ಅದರ ಸುತ್ತ ತುಸು ದೂರದಲ್ಲಿ ಒಂದು ವೃತ್ತ ಪರಿಧಿಯ ಮೇಲೆ (S) ಒಬ್ಬ ವ್ಯಕ್ತಿ ಸದಾ ಅಗ್ಗಿಷ್ಟಿಕೆ ಕಡೆಗೆ ಮುಖಮಾಡಿಕೊಂಡಿರುವಂತೆ ಚಲಿಸಲಿ. ಉದಾಹರಣೆಗೆ ಂಯಲ್ಲಿ ಆತನ ಮುಖ ಉತ್ತರಕ್ಕಿದೆ; ಃಗೆ ಬಂದಾಗ ಅದು ದಕ್ಷಿಣಕ್ಕಿರುವುದು; ಆಗೆ ಬಂದಾಗ ಅದು ಪೂರ್ವಕ್ಕಿರುವುದು; ಕೊನೆಗೆ ಂಗೆ ಮರಳಿದಾಗ ಪುನಃ ಉತ್ತರಾಭಿಮುಖಿಯಾಗಿರುವುದು. ಅಲ್ಲಿಗೆ ಆ ವ್ಯಕ್ತಿ Sನ ಮೇಲೆ ಒಂದು ಸುತ್ತನ್ನು ಮುಗಿಸುವ ಅವಧಿಯಲ್ಲಿ ತನ್ನ ಸುತ್ತ ಕೂಡ ಒಂದು ಸುತ್ತನ್ನು ಮುಗಿಸಿರುತ್ತಾನೆ ಎಂದಾಯಿತು. ಈಗ ಔ ಭೂಮಿ ಮತ್ತು ವ್ಯಕ್ತಿ ಚಂದ್ರ ಎಂದು ಭಾವಿಸಿದರೆ ವೀಕ್ಷಕನಿಗೆ ಚಂದ್ರನ ಬೆನ್ನಭಾಗ ಎಂದೂ ಕಾಣುವುದಿಲ್ಲ. ವಾಸ್ತಾವಿಕವಾಗಿ ಚಂದ್ರನ ಚಲನೆ ಬಲು ಜಟಿಲವಾಗಿದೆ. ಹಲವಾರು ಆಂದೋಲನಗಳಿಂದ ಕೂಡಿದೆ. ಇವುಗಳ ಪರಿಣಾಮವಾಗಿ,  ಯಾವುದೇ ಒಂದು ಕ್ಷಣದಲ್ಲಿ ಭೂವೀಕ್ಷಕನಿಗೆ ಚಂದ್ರನ ಅರ್ಧಭಾಗ ಮಾತ್ರ ಕಾಣಿಸುವುದು ನಿಜವಾದರೂ ಒಂದು ವರ್ಷದ ಅವಧಿಯಲ್ಲಿ ಚಂದ್ರನ ಅದೃಶ್ಯಭಾಗದ ಒಂದಿಷ್ಟು ಅಂಶವೂ ಕಂಡಿರುತ್ತದೆ. ಈ ವಿದ್ಯಮಾನಕ್ಕೆ,  ಎಂದರೆ ಭೂಮಿ-ಚಂದ್ರ ವ್ಯವಸ್ಥೆಯ ಚಲನೆಯ ಪರಿಣಾಮವಾಗಿ ಚಂದ್ರನ ಅದೃಶ್ಯಭಾಗದ ಒಂದಿಷ್ಟು ಅಂಶವನ್ನು ಕಾಣಲಾಗುವ ವಿದ್ಯಮಾನಕ್ಕೆ, ಚಂದ್ರನ ದೋಲನಗಳು (ಲೈಬ್ರೇಷನ್ಸ್) ಎಂದು ಹೆಸರು. ದೋಲನಗಳನ್ನು ಜ್ಯಾಮಿತೀಯ ಮತ್ತು ಭೌತದೋಲನಗಳೆಂದು ವರ್ಗೀಕರಿಸಲಾಗಿದೆ.  ಜ್ಯಾಮಿತೀಯ ದೋಲನಗಳಲ್ಲಿ ಮೂರು ಬಗೆಗಳುಂಟು : ರೇಖಾಂಶ ದೋಲನ, ಅಕ್ಷಾಂಶ ದೋಲನ,  ದ್ಯೆನಂದಿನ ದೋಲನ.

ರೇಖಾಂಶ ದೋಲನ (ಲ್ಯೆಬ್ರೇಶನ್ ಇನ್ ಲಾಂಜಿಟ್ಯೂಡ್) : ಚಂದ್ರನ ಆವರ್ತನ ದರ ಏಕರೀತಿ ಇದೆ. ಆದರೆ ಕಕ್ಷೆಯ ಮೇಲೆ ಸಂಚರಿಸುವಾಗ ಚಂದ್ರನ ಕೋನವೇಗ (ಎಂದರೆ ಪರಿಭ್ರಮಣವೇಗ) ಬದಲಾಗುತ್ತಲೇ ಇರುವುದು. ಹೀಗಾಗಿ ಇವೆರಡು ಚಲನೆಗಳ ಸರಾಸರಿ ದರ ಒಂದೇ ಆಗಿದ್ದರೂ ಒಂದು ಇನ್ನೊಂದರೊಡನೆ ಹೊಂದಿಕೊಳ್ಳದೇ ಲಯ ತಪ್ಪುತ್ತದೆ. ತತ್ಪರಿಣಾಮವಾಗಿ ಭೂವೀಕ್ಷಕರಿಗೆ ಮೊದಲು ಚಂದ್ರನ ಒಂದಿಷ್ಟು ಪಶ್ಚಿಮ (ಅದೃಶ್ಯ) ಪಾಶ್ರ್ವವೂ ಬಳಿಕ ಒಂದಿಷ್ಟು ಪೂರ್ಣ (ಅದೃಶ್ಯ) ಪಾಶ್ರ್ವವೂ ಗೋಚರಿಸುತ್ತವೆ. ಒಂದೊಂದು ಪಾಶ್ರ್ವದಲ್ಲೂ ಸುಮಾರು 80 ಯೂನಿಟ್‍ಗಳಷ್ಟು ಹೆಚ್ಚಿನ ಅಂಶವನ್ನು ಈ ಪ್ರಕಾರ ಕಾಣುತ್ತೇವೆ. 
ಅಕ್ಷಾಂಶ ದೋಲನ (ಲೈಬ್ರೇóಷನ್ ಇನ್ ಲ್ಯಾಟಿಟ್ಯೂಡ್) : ಚಂದ್ರನ ಆವರ್ತನಾಕ್ಷ ಚಂದ್ರ ಕಕ್ಷೆಯ ಸಮತಲಕ್ಕೆ ಲಂಬವಾಗಿಲ್ಲ. ಬದಲು ಸುಮಾರು 6.50 ಗಳಷ್ಟು ವಾಲಿಕೊಂಡಿದೆ. ಚಂದ್ರನ ಅಕ್ಷವಿನ್ಯಾಸ, ಭೂಮಿಯ ಅಕ್ಷ ವಿನ್ಯಾಸದಂತೆ ಸದಾಕಾಲ ಸ್ಥಿರವಾಗಿರುವುದು. ತತ್ಪರಿಣಾಮವಾಗಿ ಭೂವೀಕ್ಷಕನಿಗೆ ಚಂದ್ರನ ಉತ್ತರ ಮೇರುವಿನಿಂದ ಆಚೆಗೆ ಅದೃಶ್ಯ ಪಾಶ್ರ್ವದ 6.50ಯಷ್ಟು ಒಮ್ಮೆ ಗೋಚರಿಸಿದರೆ ಎರಡು ವಾರಗಳ ತರುವಾಯ ದಕ್ಷಿಣ ಮೇರುವಿನಿಂದ ಆಚೆಗೆ ಅದೃಶ್ಯ ಪಾಶ್ರ್ವದ 6.50 ಯಷ್ಟು ಗೋಚರಿಸುವುದು. 

ದೈನಂದಿನ ದೋಲನ (ಡೈಯುರ್ನಲ್ ಲೈಬ್ರೇಷನ್) : ಭೂಮಿಯ ಆವರ್ತನೆ ಹಾಗೂ ಪ್ರರಿಭ್ರಮಣೆಗಳ ಸಂಯುಕ್ತ ಪರಿಣಾಮವಾಗಿ ಚಂದ್ರನ ಪೂರ್ವ ಹಾಗೂ ಪಶ್ಚಿಮ ಅಂಚುಗಳಿಂದ ಆಚೆಗೆ 10 ಯಷ್ಟು ಅದೃಶ್ಯ ಪಾಶ್ರ್ವ ಗೋಚರಿಸುತ್ತದೆ.

ಚಿತ್ರ-12

ಜ್ಯಾಮಿತೀಯ ದೋಲನಗಳ ಸಂಯುಕ್ತ ಫಲವಾಗಿ ಚಂದ್ರನ ಭಾಗ ಭೂವೀಕ್ಷಕನಿಗೆ ಸದಾ ಗೋಚರಿಸುತ್ತದೆ; 41% ಅಂಶ ಎಂದೂ ಗೋಚರಿಸುವುದಿಲ್ಲ. 18% ಅಂಶ ಪರ್ಯಾಯವಾಗಿ ಗೋಚರ ಅಗೋಚರವಾಗುತ್ತಿರುವುದು. 
ಭೌತ ದೋಲನ (ಫಿಸಿಕಲ್ ಲೈಬ್ರೇಷನ್): ಚಂದ್ರನ ಆಕಾರ ಪರಿಪೂರ್ಣಗೋಳವಲ್ಲ; ಪರಸ್ಪರ ಲಂಬವಾಗಿರುವ ಮೂರು ಅಕ್ಷಗಳಿಂದ ಕೂಡಿದ ದೀರ್ಘವೃತ್ತ ಕಲ್ಪವಿದು (ಟ್ರೈ ಆ್ಯಕ್ಸಿಯಲ್ ಎಲ್ಲಿಪ್ಸಾಯಿಡ್).
ಹೀಗಾಗಿ ಚಂದ್ರನ ಭೌತಸನ್ನಿವೇಶಗಳನ್ನು ನಾವು ವೀಕ್ಷಿಸುವಾಗ ಸ್ವಲ್ಪ ಏರಿಳಿತಗಳು ತೋರುವುವು. ಇದೇ ಭೌತ ದೋಲನಗಳು.

ಚಿತ್ರ-13-1

ಚಿತ್ರ-13-2

ಚಿತ್ರ-13-3

	3 ಕಕ್ಷೆ : ಚಂದ್ರ ಭೂಮಿಯ ಸುತ್ತ ಸಂಚರಿಸುವ ಕಕ್ಷೆಯ ಆಕಾರ ದೀರ್ಘವೃತ್ತ. ಇದರ ಒಂದು ನಾಬಿಯಲ್ಲಿü ಭೂಮಿ ಉಂಟು. ಈ ಚಲನೆ ಕೆಪ್ಲರನ ನಿಯಮಗಳ (ನೋಡಿ- ಕೆಪ್ಲರನ-ನಿಯಮಗಳು) ಅನುಸಾರ ಇದೆ. ಕಕ್ಷೆಯ ಸರಾಸರಿ ಉತ್ಕೇಂದ್ರತೆ 0.0549 ಭೂಮಿಯ ನೀಚಬಿಂದುವಿನಲ್ಲಿ (ಪೆರಿಜೀ-ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತಿಸಮೀಪವಾಗಿರುವ ಬಿಂದು) ಭೂಮಿ-ಚಂದ್ರರ ದೂರ ಸುಮಾರು 356,400 ಕಿ.ಮೀ; ಮತ್ತು ಭೂಮ್ಯುಚ್ಚ ಬಿಂದುವಿನಲ್ಲಿ (ಅಪೋಜೀ-ಎಂದರೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತಿ ದೂರವಾಗಿರುವ ಬಿಂದು) ಭೂಮಿ-ಚಂದ್ರನ ದೂರ ಸುಮಾರು 406,686 ಕಿ.ಮೀ.

ಚಿತ್ರ-15

ನೀಚಬಿಂದುವಿನಲ್ಲಿ ಕಕ್ಷಾವೇಗ ಗರಿಷ್ಠ. ಉಚ್ಚಬಿಂದುವಿನಲ್ಲಿ ಅದು ಕನಿಷ್ಠ. ಕಕ್ಷಾವೇಗದ ಸರಾಸರಿ 1021 ಮೀ./ಸೆ. ಚಂದ್ರನ ಕಕ್ಷಾತಲ ಕ್ರಾಂತಿ ವೃತ್ತ ತಲಕ್ಕೆ (ನೊಡಿ- ಕ್ರಾಂತಿ-ವೃತ್ತ) ಸುಮಾರು 508' ಗಳಷ್ಟು ವಾಲಿಕೊಂಡಿದೆ. ಇವೆರಡೂ ವೃತ್ತಗಳು ಓ, ಓ' ಎಂಬ ಎರಡು ಬಿಂದುಗಳಲ್ಲಿ ಛೇದಿಸುತ್ತವೆ. 

ಇವುಗಳಿಗೆ ಪಾತ ಬಿಂದುಗಳು ಅಥವಾ ಸರಳವಾಗಿ ಪಾತಗಳು (ನೋಡ್ಸ್) ಎಂದು ಹೆಸರು (ನೋಡಿ- ಗ್ರಹಣ,-ಖಗೋಳೀಯ) ಬಹು ಪ್ರಬಲ ಗುರುತ್ವಾಕರ್ಷಣ ಕೇಂದ್ರವಾದ ಸೂರ್ಯ ಸಹಜವಾಗಿಯೇ ಚಂದ್ರನನ್ನು ಕ್ರಾಂತಿ ವೃತ್ತ ತಲಕ್ಕೆ ಸೀಮಿತಗೊಳಿಸಲು ಸೆಳೆಯುತ್ತಿರುತ್ತದೆ. ಆದರೆ ಚಂದ್ರನ ನಿರಂತರ ಚಲನೆಯ ಪರಿಣಾಮವಾಗಿ ಇದು ಸಾಧ್ಯವಾಗುವುದಿಲ್ಲ.

ಚಿತ್ರ-16

 ಬದಲು ಪಾತಗಳು ಚಂದ್ರಚಲನೆಯ ವಿರುದ್ಧ ದಿಶೆಯಲ್ಲಿ (ಎಂದರೆ ಪೂರ್ವ-ಪಶ್ಚಿಮ ದಿಶೆಯಲ್ಲಿ) ಕ್ರಾಂತಿವೃತ್ತದ ಮೇಲೆ ಕ್ರಮೇಣ ಜರುಗುತ್ತವೆ (ಭೂಕಕ್ಷೆ ವಿಷುವದ್ವೈತ್ತವನ್ನು ಛೇದಿಸುವ γ, Ω ಎಂಬ ಎರಡು ವಿಷುವದ್ಬಿಂದುಗಳು ಕ್ರಾಂತಿವೃತ್ತದ ಮೇಲೆ ಪೂರ್ವ-ಪಶ್ಚಿಮ ದಿಶೆಯಲ್ಲಿ ಚಲಿಸುವ ಅಯನಾಂಶ (ನೋಡಿ- ಅಯನಾಂಶ) ಎಂಬ ವಿದ್ಯಮಾನಕ್ಕೆ ಸಂವಾದಿಯಾದ ವಿದ್ಯಮಾನವಿದು). ಪಾತರೇಖೆ 6,708 ದಿವಸಗಳಲ್ಲಿ ಅಥವಾ 18 ವ. 224 ದಿ.ಗಳಲ್ಲಿ ಕ್ರಾಂತಿವೃತ್ತದ ಮೇಲೆ ಒಂದು ಪೂರ್ಣ ಪರಿಭ್ರಮಣೆಯನ್ನು ಮುಗಿಸುತ್ತದೆ.

4. ಆಕಾಶದಲ್ಲಿ ಚಂದ್ರನ ಚಲನೆ: ನಿರಪೇಕ್ಷವಾಗಿ ಪರಿಶೀಲಿಸುವಾಗ ಚಂದ್ರನ ಚಲನೆ ತೀರ ಜಟಿಲವಾದದ್ದು. ಚಂದ್ರನ ಮೂಲ ಹಾಗು ಸಮೀಪಗ್ರಹವಾದ ಭೂಮಿಯ ಪ್ರಭಾವ ಒಂದು ಕಡೆ, ಸೌರವ್ಯೂಹದ ಪ್ರಧಾನ ಕಾಯ ಸೂರ್ಯನ ಪ್ರಭಾವ ಒಂದು ಕಡೆ-ಇವುಗಳ ಪರಿಣಾಮವಾಗಿ ಚಂದ್ರನ ವರ್ತನೆ ಬಲು ಸಿಕ್ಕುಸಿಕ್ಕಾಗಿದೆ. ಇದರ ಮುಖ್ಯಾಂಶಗಳನ್ನು ಮುಂದೆ ಬರೆದಿದೆ.

1. ಭೂಮಿಯ ಸುತ್ತ ಚಂದ್ರ ರೇಖಿಸುವ ದೀಘೃವೃತ್ತ ಒಂದು ಸಮತಲದ ಮೇಲೆ ಸ್ಥಿರವಾಗಿಲ್ಲ-ಅದು ತಲದ ಮೇಲೆ ಚಂದ್ರಚಲನೆಯ ದಿಶೆಯಲ್ಲಿ ಪರಿಭ್ರಮಿಸುತ್ತದೆ (ನೇರ ಚಲನೆ ಅಥವಾ ಡೈರೆಕ್ಟ್ ಮೋಷನ್ ಎಂದು ಇದರ ಹೆಸರು). ಹೀಗಾಗಿ ದೀರ್ಘವೃತ್ತದ ದೀರ್ಘಾಕ್ಷ ಒಂದು ಪೂರ್ಣ ಪರಿಭ್ರಮಣೆಯನ್ನು 3232 ದಿವಸಗಳಲ್ಲಿ ಅಥವಾ 8 ವ. 310 ದಿ.ಗಳಲ್ಲಿ ಮುಗಿಸುತ್ತದೆ. ಈ ಚಲನೆಗೆ ಸದೃಶವಾದದ್ದು ಭೂ ಕಕ್ಷೆಯ ನೀಚೋಚ್ಚ ರೇಖೆಯ (ಲೈನ್ ಆಫ್ ಆ್ಯಪ್ಸಿಡ್ಸ್) ಚಲನೆ-21,000 ವರ್ಷಗಳಲ್ಲಿ ಇದು ಒಂದು ಸುತ್ತನ್ನು ಪೂರೈಸುವುದು.

2. ಪಾತರೇಖೆಯ ಹಿನ್ನಡೆ (ರಿಟ್ರೊಗ್ರೇಡ್ ಮೋಷನ್). ಇದನ್ನು ಈ ಮೇಲೆ ಕಕ್ಷೆ ಎಂಬ ಶೀರ್ಷಿಕೆಯಲ್ಲಿ ವಿವರಿಸಿದೆ.
3. ಚಂದ್ರಕಕ್ಷೆಯ ತಲ ಕಾಂತಿವೃತ್ತ ತಲಕ್ಕೆ ವಾಲಿಕೊಂಡಿದೆ (ಸರಾಸರಿ ಬೆಲೆ 50 8' 48") ಎಂದು ಹೇಳಿದೆಯಷ್ಟೆ. ಈ ಬಾಗು (ಇನ್‍ಕ್ಲಿನೇಷನ್) ಕನಿಷ್ಠ 50 0' 1" ನಿಂದ ಗರಿಷ್ಠ 50 17' 35" ಗಳ ವರೆಗೆ ಆಂದೋಳಿಸುತ್ತದೆ. ಇದರ ಅವಧಿ 173 ದಿವಸಗಳು.

4. ಕಕ್ಷೆಯ ಉತ್ಕೇಂದ್ರತೆಯ ಪರಿಣಾಮವಾಗಿ ಪ್ರತಿಯೊಂದು ತಿಂಗಳಿನಲ್ಲೂ ಚಂದ್ರ 60 ಯೂನಿಟ್‍ಗಳಷ್ಟು ತಡವಾಗಿ ಇಲ್ಲವೇ ಮೊದಲಾಗಿ ಚಲಿಸುತ್ತಿರುತ್ತದೆ. ಇದಕ್ಕೆ ಕೇಂದ್ರ ಸಂಸ್ಕಾರ (ಇಕ್ವೇಷನ್ ಆಫ್ ಸೆಂಟರ್) ಎಂದು ಹೆಸರು.
5. ಸ್ವಂತ ಕಕ್ಷೆಯಲ್ಲಿ ಚಲಿಸುತ್ತಿರುವ ಚಂದ್ರನ ಮೇಲೆ ಸೂರ್ಯಾಕರ್ಷಣೆ ಕ್ಷೋಭೆ ಉಂಟುಮಾಡುತ್ತದೆ ಚಂದ್ರಕಕ್ಷೆಯ ನೀಚೋಚ್ಚರೇಖೆಯ ಮೂಲಕ ಸೂರ್ಯಹಾಯುವಾಗ ಕಕ್ಷೆಯ ಉತ್ಕೇಂದ್ರತೆ ಹೆಚ್ಚಾಗುವುದು ; ಅದಕ್ಕೆ ಲಂಬವಾಗಿರುವ ರೇಖೆಯ ಮೂಲಕ ಸೂರ್ಯ ಹಾಯುವಾಗ ಈ ಉತ್ಕೇಂದ್ರತೆ ಕಡಿಮೆ ಆಗುವುದು. ಈ ಪರಿಣಾಮಕ್ಕೆ ಚಂದ್ರಾಕಕ್ಷಾ ಕ್ಷೋೀಭೆ ಅಥವಾ ಸರಳವಾಗಿ ಚಾಂದ್ರಕ್ಷೋಭೆ (ಎವೆಕ್ಷನ್) ಎಂದು ಹೆಸರು. ಇದರ ಪ್ರಕಟಿರೂಪವಾಗಿ ಚಂದ್ರನ ರೇಖಾಂಶದಲ್ಲಿ (ಲಾಂಜಿಟ್ಯೂಡ್) 10 15'ಗಳಷ್ಟು ಗರಿಷ್ಠ ವ್ಯತ್ಯಾಸ ತೋರಿಬರುತ್ತದೆ. ಕ್ಷೋಭೆಯ ಅವಧಿಕಾಲ 32 ದಿವಸಗಳು.
6. ಇತರ ಅಸಮತೆಗಳಲ್ಲಿ ಮುಖ್ಯವಾದವು 15 ದಿವಸಗಳ ಅವಧಿಕಾಲವಿರುವ ವಿಚರಣೆ (ವೇರಿಯೇಷನ್), ಒಂದು ವರ್ಷ ಅವಧಿಕಾಲವಿರುವ ವಾರ್ಷಿಕ ಸಂಸ್ಕಾರ (ಆ್ಯನ್ಯುಯಲ್ ಇಕ್ವೇಷನ್), 29 ದಿವಸಗಳ ಅವಧಿಕಾಲವಿರುವ ದಿಗ್ವ್ಯತ್ಯಾಸದ ಅಸಮತೆ ಇತ್ಯಾದಿ. ಚಂದ್ರನ ಚಲನೆಯಲ್ಲಿ 1500ರಷ್ಟು ಅಸಮತೆಗಳನ್ನು ಗುರುತಿಸಿದ್ದುಂಟು. ಅವುಗಳ ಪೈಕಿ ಮುಖ್ಯವಾದ 500ನ್ನು ಗಮನದಲ್ಲಿಟ್ಟುಕೊಂಡೇ ಚಾಂದ್ರಕೋಷ್ಟಕಗಳನ್ನು ತಯಾರಿಸಬೇಕು. ಉದಾಹರಣೆಗೆ, ಚಂದ್ರನ ಕಕ್ಷಾವೇಗ ಶತಮಾನದವೊಂದರ 120 ಗಳಷ್ಟು ಏರುವುದೆಂದು ತಿಳಿದಿದೆ. ಆದ್ದರಿಂದ 1974ರಲ್ಲಿ ಬಲು ನಿಖರವಾಗಿ ಚಂದ್ರಕಕ್ಷೆಯನ್ನು ಗುರುತು ಮಾಡಿದೊರೆತ ಫಲಿತಾಂಶಗಳನ್ನು 2074ರಲ್ಲಿ ಉಪಯೋಗಿಸಿದರೆ ಅಂದಿನ ವಾಸ್ತವ ಚಂದ್ರ, ಗಣನೆ ತಿಳಿಸುವ ಚಂದ್ರ ಇರಬೇಕಾದಲ್ಲಿ ಇರುವುದಿಲ್ಲ, ಬದಲು ಸುಮಾರು 120 ಅಥವಾ ಸುಮಾರು 22.5 ಕಿ.ಮೀ ಮುಂದೆ ಇರುವುದು.
ಇದುವರೆಗೆ ವಿವರಿಸಿದ ಎಲ್ಲ ಅಸಮತೆಗಳ ಹಾಗೂ ಅಸಮ ಬಲಗಳ ಪರಿಣಾಮವಾಗಿ ಭೂಮಿ-ಚಂದ್ರ ವ್ಯವಸ್ಥೆ ಸೂರ್ಯನನ್ನು ಕುರಿತಂತೆ ಆಕಾಶದಲ್ಲಿ ರೇಖಿಸುವ ಪಥವನ್ನು ಚಿತ್ರ 11 (ಬಿ), (ಸಿ) ಗಳಲ್ಲಿ ಕಾಣಿಸಿದೆ.
5.  ಶರಚ್ಚಂದ್ರ : ಶರತ್ಕಾಲದಲ್ಲಿ (ಎಂದರೆ ಆಶ್ವೀಜ ಕಾರ್ತಿಕಮಾಸಗಳು ; ಆಗಸ್ಟ್-ನವೆಂಬರ್ ಅವಧಿಯಲ್ಲಿ ಹಿಂದೆ ಮುಂದೆ ಬರುತ್ತವೆ) ಬರುವ ಹುಣ್ಣಿಮೆಯ ಚಂದ್ರ. ಶರಚ್ಚಂದ್ರ. ಇದು ವಸಂತ ವಿಷುವದ್ಬಿಂದುವಿನೊಡನೆ (ಅಂದರೆ ಫಸ್ಟ್ ಪಾಯಿಂಟ್ ಆಫ್ ಏರೀಸ್ ಅಂದರೆ ವರ್ನಲ್ ಈಕ್ವಿನಾಕ್ಸ್) ಉದಯಿಸುವುದು. ಉತ್ತರ ಅಕ್ಷಾಂಶಗಳ ನಿವಾಸಿಗಳಿಗೆ ಆ ವೇಳೆ ಕ್ರಾಂತಿವೃತ್ತ ಕ್ಷಿತಿಜದೊಡನೆ ಕನಿಷ್ಠವಾಗಿ ಬಾಗಿಕೊಂಡಿರುತ್ತದೆ. ಚಂದ್ರಕಕ್ಷೆ ಕ್ರಾಂತಿವೃತ್ತಕ್ಕೆ 5ಲಿ 8'ಗಳಷ್ಟು ಬಾಗಿಕೊಂಡಿರುವುದರಿಂದ ಚಂದ್ರ ವಸಂತವಿಷವದ್ಬಿಂದುವಿನಿಂದ ವಿಶೇಷ ದೂರಸಾಗುವುದಿಲ್ಲ. ಹೀಗಾಗಿ ಶರಚ್ಚಂದ್ರ ಮತ್ತು ಅದರ ಸಮೀಪದ ಸಂಜೆಗಳೆಂದು ಚಂದ್ರೋದಯದಲ್ಲಿ ಗಣನೀಯ ತಡವಾಗುವುದಿಲ್ಲ. ಅರ್ಥಾತ್ ಭೂ ನಿವಾಸಿಗಳಿಗೆ ಆ ದಿವಸಗಳಂದು ತಿಂಗಳ ಬೆಳಕು ಸಂಜೆ ಕವಿಯುವ ಮೊದಲೇ ದೊರೆಯುತ್ತದೆ. 

ಚಿತ್ರ-17-2

ಹಲವಾರು ಪ್ರದೇಶಗಳಲ್ಲಿ ಇದು ಕೊಯ್ಲಿನ ವೇಳೆ. ಆದ್ದರಿಂದ ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ಶರಚ್ಚಂದ್ರನಿಗೆ ಕೊಯ್ಲು ಚಂದ್ರ (ಹಾರ್ವೆಸ್ಟ್ ಮೂನ್) ಎಂದು ಕರೆಯುವುದು ವಾಡಿಕೆ. ಮರುತಿಂಗಳ ಹುಣ್ಣಿಮೆಯ ವೇಳೆ ಜನ ಬೇಟೆಯಲ್ಲಿ ತೊಡಗುವುದರಿಂದ ಆ ಚಂದ್ರನಿಗೆ ಬೇಟೆಗಾರರ ಚಂದ್ರ ಎಂದು ಕರೆಯುವುದುಂಟು.

VI ಕಲೆಗಳು (ಫೇಸಸ್) : ಚಂದ್ರ (ಇನ್ನಷ್ಟು ವ್ಯಾಪಕವಾಗಿ ಹೇಳುವುದಾದರೆ ಯಾವುದೇ ಗ್ರಹ) ಭೂಮಿಗೆ ಪ್ರದರ್ಶಿಸುವ ಬಿಂಬಕ್ಕೆ-ಎಂದರೆ ಹೊಳೆಯುವ ಭಾಗಕ್ಕೆ-ಕಲೆ ಎಂದು ಹೆಸರು. ಇದರ ಮಾಪಕ ಹೊಳೆಯುವ ಭಾಗ ಹಾಗೂ ಪೂರ್ಣಬಿಂಬಗಳ ನಿಷ್ಪತ್ತಿ. ಆದ್ದರಿಂದ ಅಮಾವಾಸ್ಯೆ ಚಂದ್ರನ ಕಲೆ 0, ಹುಣ್ಣಿಮೆ ಚಂದ್ರನ ಕಲೆ 1 ಉಳಿದ ದಿವಸಗಳಂದು ಚಂದ್ರನ ಕಲೆ ಒಂದು ಭಿನ್ನರಾಶಿ. ಯಾವುದೇ ಮುಹೂರ್ತದಲ್ಲಿ ಭೂಮುಖವಾಗಿರುವ ಅರ್ಧಾಂಶ ಭೂನಿವಾಸಿಗಳಿಗೆ ಕಾಣುತ್ತಿರುವುದು. ಚಿತ್ರದಲ್ಲಿ ಇ ಭೂಮಿ:ಈ ಅರ್ಧಾಂಶ ಂಈಅಉ; ಸೂರ್ಯಮುಖವಾಗಿರುವ ಅರ್ಧಾಂಶ ಬೆಳಗುತ್ತಿರುವುದು-ಚಿತ್ರ್ರದಲ್ಲಿ S ಸೂರ್ಯ ಬೆಳಗುತ್ತಿರುವ ಅರ್ಧಾಂಶದ ಗಡಿಯನ್ನು ಂಃಅ ಸೂಚಿಸುತ್ತದೆ. 

ಚಿತ್ರ-18

ಆದ್ದರಿಂದ ಈ ಎರಡು ಆರ್ಧಗೋಳಗಳ ಸಾಮಾನ್ಯ ಗೋಳಖಂಡ (ಚಂದ್ರಕ ಅಥವಾ ಲ್ಯೂನ್ ಎಂದು ಇದನ್ನು ಕರೆಯುವುದುಂಟು) ವೀಕ್ಷಕನಿಗೆ ಬೆಳಕು ಪ್ರತಿಫಲಿಸುವ ಭಾಗ-ಇದು ಂಃಅಈಂ ಎಂಬ ಚಂದ್ರಕ. ಮೂರು ಆಯಾಮಗಳ ಈ ಚಂದ್ರಕ ಭೂಮಿ-ಚಂದ್ರ ದೂರದ ಅಗಾಧತೆಯಿಂದಾಗಿ, ವೀಕ್ಷಕನ ದೃಷ್ಟಿರೇಖೆಗೆ (ಇಒ) ಲಂಬವಾಗಿರುವ ಸಮತಲದ ಮೇಲೆ (ಕಾಗದದ ಸಮತಲ) ವೀಕ್ಷೇಪಿತವಾದಂತೆ ಭಾಸವಾಗುತ್ತದೆ.-ಇದು ಂಆಅಈಂ ಸಮತಲ. ಹೀಗಾಗಿ ಚಂದ್ರನ ಹೊಳೆಯುವ ಭಾಗ (ಅಂತೆಯೇ ಪೂರ್ಣ ಚಂದ್ರ) ಒಂದು ಸಮತಲದಂತೆ ಕಾಣುವುದು.
ಚಂದ್ರನ ಕಲೆ= ಚಂದ್ರನ ತ್ರಿಜ್ಯ

ಇಲ್ಲಿ ( ಕೋನಕ್ಕೆ ಚಂದ್ರನ ಕೋನಾಂತರ (ಇಲಾಂಗೇಷನ್) ಎಂದು ಹೆಸರು. 
ಒಂದು ಚಂದ್ರ ಮಾಸದಲ್ಲಿ (ಲ್ಯುನೇಷನ್) ಚಂದ್ರನ ಕಲೆಗಳಲ್ಲಿ ಒಂದು ಪೂರ್ಣಾಂದೋಳನ ಮುಗಿಯುತ್ತದೆ. ಒಂದು ನಿಶ್ಚಿತ ಸಂಜೆ ಅಮಾವಾಸ್ಯೆ ಎಂದು ಭಾವಿಸೋಣ. ಅದು ವೀಕ್ಷಕ-ಸೂರ್ಯರೇಖೆಯ ದಿಶೆಯಲ್ಲಿ ಸರಿಸುಮಾರಾಗಿ ಚಂದ್ರ ಇರುತ್ತದೆ. ಸೂರ್ಯ ಚಂದ್ರರ ರೇಖಾಂಶಗಳು ಅಂದು ಸಮ. ಆದ್ದರಿಂದ ಚಂದ್ರನ ಹೊಳೆಯುವ ಭಾಗ ಭೂಮಿಯ ವಿರುದ್ಧ ದಿಕ್ಕಿನಲ್ಲಿರುವುದು. ಅಲ್ಲದೆ ಸೂರ್ಯನ ಬೆಳಕಿನಲ್ಲಿ ಚಂದ್ರ ಕಾಣಿಸುವುದು ಸಾಧ್ಯವಾಗುವುದಿಲ್ಲ.

		ಎರಡನೆಯ ಸಂಜೆಯಾಗುವಾಗ ಸೂರ್ಯ ಭೂಮಿಯ ಸುತ್ತ ಸುಮಾರು 10 ಯಷ್ಟು (ಇದು ತೋರ್ಕೆ ಚಲನೆ) ಮತ್ತು ಚಂದ್ರ ಸುಮಾರು 130 ಗಳಷ್ಟು ಪಶ್ಚಿಮ-ಪೂರ್ವ ದಿಶೆಯಲ್ಲಿ ಚಲಿಸಿರುತ್ತವೆ. ಆದ್ದರಿಂದ ಅಂದು ಚಂದ್ರ ಸೂರ್ಯನಿಗಿಂತ ಸುಮಾರು 120 ಗಳಷ್ಟು ಮುನ್ನಡೆದಿರುತ್ತದೆ. (ಪಶ್ಚಿಮ-ಪೂರ್ವ). ಅಂದರೆ ಚಂದ್ರ-ಸೂರ್ಯರ ರೇಖಾಂಶ ವ್ಯತ್ಯಾಸ 120 ಎಂದಾಯಿತು. ಚಂದ್ರ ಸೂರ್ಯನಿಗಿಂತ ಪೂರ್ವಕ್ಕೆ ಇರುವುದರಿಂದ ಸೂರ್ಯ ಕಂತಿದ ಸ್ವಲ್ಪ ಕಾಲಾನಂತರ ಚಂದ್ರ ಕಂತುವುದು. ಆದರೆ ಈ ಅಂತರ ಅತ್ಯಲ್ಪವಾಗಿರುವುದರಿಂದ ಪಾಡ್ಯದ ಚಂದ್ರನನ್ನು ಕಾಣುವುದು ಕಷ್ಟ. ಮೂರನೆಯ ಸಂಜೆ ಸೂರ್ಯ-ಚಂದ್ರ ಅಂತರ (ರೇಖಾಂಶ ವ್ಯತ್ಯಾಸ) ಗಮನಾರ್ಹವಾಗಿ ಏರಿರುತ್ತದೆ. ಅದು ಈಗ ಸುಮಾರು 240. ಆದ್ದರಿಂದ ಬಿದಿಗೆ ಚಂದ್ರನನ್ನು ಪ್ರಯಾಸದಿಂದ ಕಾಣಬಹುದು. ಇದರ ಹೊಳೆಯುವ ಭಾಗ ಸೂರ್ಯ ಮುಖವಾಗಿ-ಎಂದರೆ ಪಶ್ಚಿಮ ದಿಶೆಗೆ-ಇದೆ. 

		ಮುಂದಿನ ಸಂಜೆಗಳಲ್ಲಿ ಚಂದ್ರನ ಕಲೆ ಕ್ರಮೇಣ ಏರುವುದರ ಜೊತೆಗೆ ಸಂಜೆ ವೇಳೆ ಚಂದ್ರ ಸೂರ್ಯನಿಗಿಂತ ಪಶ್ಚಿಮ ಪೂರ್ವ ದಿಶೆಯಲ್ಲಿ ಸಾಕಷ್ಟು ದೂರ ಸರಿದಿರುತ್ತದೆ ಕೂಡ. 15 ದಿವಸಗಳಾಗುವಾಗ ರೇಖಾಂಶ ವ್ಯತ್ಯಾಸ 1800 ಆಗಿರುತ್ತದೆ. ಅಂದು ಭೂ ವೀಕ್ಷಕನಿಗೆ ಸೂರ್ಯ ಮತ್ತು ಚಂದ್ರ ವಿರುದ್ಧ ದಿಶೆಗಳಲ್ಲಿರುತ್ತವೆ. ಆದ್ದರಿಂದ ಚಂದ್ರನ ಹೊಳೆಯುವ ಭಾಗ ಪೂರ್ತಿ ಗೋಚರಿಸುತ್ತದೆ. ಇದೇ ಹುಣ್ಣಿಮೆ. 
ಚಂದ್ರನ ಪಶ್ಚಿಮಾಭಿಮುಖ ಚಲನೆ ಏಕ ಪ್ರಕಾರ ಮುಂದುವರಿಯುತ್ತಲೇ ಇರುವುದು. ಆದ್ದರಿಂದ ರೇಖಾಂಶವ್ಯತ್ಯಾಸ ವೃದ್ಧಿಗೊಳ್ಳುತ್ತಿರುವುದು. ಹೀಗಾಗಿ ಚಂದ್ರೋದಯ ಒಂದು ಸಂಜೆಯಿಂದ ಮತ್ತೊಂದು ಸಂಜೆಗೆ ತಡವಾಗುತ್ತಾ, ಇದೇ ವೇಳೆ ಚಂದ್ರನ ಕಲೆ ತಗ್ಗುತ್ತಾ, ಸಾಗುವುದು. ಈಗ ಚಂದ್ರನ ಪೂರ್ವಪಾಶ್ರ್ವ ಬೆಳಕನ್ನು ಬಿರುತ್ತದೆ. ಹುಣ್ಣಿಮೆಯ ಆನಂತರದ 15 ದಿವಸಗಳಲ್ಲಿ ಸೂರ್ಯ ಮತ್ತು ಚಂದ್ರರ ರೇಖಾಂಶ ವ್ಯತ್ಯಾಸ 3600 ಎಂದರೆ 0ಲಿ ಆಗಿ ಅಂದು ಪುನಃ ಅಮಾವಾಸ್ಯೆ ಸಂಭವಿಸುವುದು.

	ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗಿನ 15 ದಿವಸಗಳ ಅವಧಿಗೆ ಶುಕ್ಲಪಕ್ಷವೆಂದು ಹೆಸರು. ಚಂದ್ರನ ಕಲೆಗಳಲ್ಲಿ ತಲೆದೋರುವ ಏರಿಳಿತಗಳನ್ನು ಚಿತ್ರ 19 (ಎ) ನಲ್ಲಿ ಕಾಣಿಸಿದೆ. 

V  ತಿಂಗಳ ಬೆಳಕು : ಸೂರ್ಯನಿಂದ ಹೊಮ್ಮುವ ಬೆಳಕು. ಉಷ್ಣ ಮುಂತಾದ ವಿದ್ಯುತ್ಕಾಂತ ವಿಸರಣೆ (ಶಕ್ತಿ) ಚಂದ್ರನ ಮೇಲೆ ಕೂಡ ಬೀಳುತ್ತದೆ. ಇದರ ಒಂದಂಶವನ್ನು ಚಂದ್ರ ಪ್ರತಿಫಲಿಸುವುದು. ಪ್ರತಿಫಲಿತ ಬೆಳಕಿಗೆ ತಿಂಗಳ ಬೆಳಕು ಅಥವಾ ಬೆಳದಿಂಗಳು ಎಂದು ಹೆಸರು. ಭೂಮಿ ಸಹ ಇದೇ ರೀತಿ ಬೆಳಕನ್ನು ಪ್ರತಿಫಲಿಸುತ್ತದೆ. ಇದರ ಹೆಸರು ಭೂಕಾಂತಿ. ಬಾಲಚಂದ್ರ ಬಿಂಬಲದಲ್ಲಿ ಹೊಳೆಯುವ ಭಾಗಕ್ಕೆ ಪೂರಕವಾಗುವಂತೆ ಮಸಕಾದ ಭಾಗ ಎದ್ದು ಕಾಣುವುದು ಭೂಕಾಂತಿಯ ಪರಿಣಾಮ. ಬೆಳುದಿಂಗಳು ತಂಪು ಎನ್ನುವ ಪ್ರಚಲಿತ ಭಾವನೆ ತಪ್ಪು. ಈ ಕೆಳಗಿನ ಯಾದಿ ಇದನ್ನು ಸ್ಪಷ್ಟಪಡಿಸುತ್ತದೆ.
	ವಿಸ್ತರಣೆಯ 		ಶೇಕಡಾ
ಸೌರಬೆಳಕು 		ಬೆಳುದಿಂಗಳು
ಅತಿನೇರಿಳೆ (ಹೃಸ್ವ ಅಲೆ) 			10			1
ದೃಗ್ಗೋಚರ ಬೆಳಕು 			46 			5
ಅತಿರಕ್ತ (ದೀರ್ಘ ಅಲೆ)			44 			6
ಗ್ರಹೋಷ್ಣ (ಅತಿ ದೀರ್ಘ ಅಲೆ) 		0	 		88

ಗ್ರಹೋಷ್ಣ ಎಂದರೆ ಒಂದು ಗ್ರಹ (ಅಥವಾ) ಉಪಗ್ರಹ; (ನಕ್ಷತ್ರವಲ್ಲ ಎನ್ನುವ ಅರ್ಥದಲ್ಲಿ) ತನ್ನ ಮೇಲೆ ಪಾತವಾಗುವ ಸೌರ ಉಷ್ಣವನ್ನು ಪ್ರತಿಫಲಿಸುವುದರಿಂದ ದೊರೆಯುವ ಉಷ್ಣ, ಸುಮಾರು ಐದು ಲಕ್ಷ ಹುಣ್ಣಿಮೆ ಚಂದ್ರ ಏಕಕಾಲದಲ್ಲಿ ನೀಡುವ ಬೆಳಕಿನ ಮೊತ್ತ ಸೂರ್ಯನ ಬೆಳಕಿಗೆ ಸಮವಾದೀತು! ಅಥವಾ, ರಾತ್ರಿಯ ಆಕಾಶವಿಡೀ ಹೊಳೆಯುವ ಚಂದ್ರ ಆಗಿದ್ದರೆ ಆಗ ನಮಗೆ ದೊರೆಯುವ ಬೆಳಕು ಸೂರ್ಯನ ಬೆಳಕಿನ 1/5 ಅಂಶ ಮಾತ್ರವಾದೀತಷ್ಟೆ! ತಿಂಗಳ ಬೆಳಕಿನ ತೀವ್ರತೆ ಅ/4 ಮೀಟರ್-ಕ್ಯಾಂಡಲ್ (ಒಂದು ಮೀಟರ್ ದೂರದಲ್ಲಿ ಇರಿಸಿದ ಕ್ಯಾಂಡಲ್, ಎಂದರೆ ಮೇಣದ ಬತ್ತಿ, ಬೀರುವ ಬೆಳಕಿಗೆ 1 ಮೀ. ಕ್ಯಾಂ. ಎಂದು ಹೆಸರು) ಬೆಳುದಿಂಗಳು ಇದರ ¼ ರಷ್ಟು ಉಂಟಷ್ಟೆ. ಹುಣ್ಣಿಮೆಯ ಚಂದ್ರನ ಕ್ರಾಂತಿಮಾನ 12.5 (ಶುಕ್ರ —4.4, ಗುರು —2.5, ಲುಬ್ಧಕ —1.58) ಚಂದ್ರನ ಆಲ್ಬೆಡೊ (ಎಂದರೆ ಪ್ರತಿಫಲನ ಸಾಮಥ್ರ್ಯ; ಪ್ರತಿಫಲಿತ ಬೆಳಕು ಮತ್ತು ಪಾತ ಬೆಳಕುಗಳ ನಿಷ್ಪತ್ತಿ ಇದರ ಸೂಚ್ಯಂಕ) 0.07. ಸೌರವ್ಯೂಹದ ಗ್ರಹಗಳಲ್ಲಿ ಗರಿಷ್ಠ ಆಲ್ಬೆಡೊ ಶುಕ್ರನಿಗೂ (0.64) ಕನಿಷ್ಠ ಆಲ್ಬೆಡೊ ಬುಧನಿಗೂ (0.00)ಉಂಟು. ಭೂಮಿಯ ಆಲ್ಬೆಡೊ 0.4. ಚಂದ್ರನ ಮೇಲೆ ಪಾತವಾಗುವ ಸೌರ ಬೆಳಕಿನ 93% ಅಲ್ಲಿಯೇ ಹೀರಿಕೊಳಲ್ಪಡುತ್ತದೆ. ಇದು ಉಷ್ಣವಾಗಿ ಪರಿವರ್ತನೆಗೊಂಡು ಚಂದ್ರನನ ಮೇಲ್ಮೈಯ ಉಷ್ಣತೆ ಏರುವುದು. ಚಂದ್ರನ ಆಲ್ಬೆಡೊ ಇಷ್ಟೊಂದು ಕಡಿಮೆ ಆಗಿರಲು ಕಾರಣ ಅದರ ತಲದ ಏರಿಳಿತಗಳು. ಡೊಗರು, ಕಮರಿಗಳು, ಆರ್ಧಚಂದ್ರ (ಎಂದ್ರೆ ಚಂದ್ರನ ಕಲೆ ಳಿ) ಬೀರುವ ಬೆಳಕು, ಹುಣ್ಣಿಮೆ ಚಂದ್ರ ಬೀರುವ ಬೆಳಕಿನ 1/9 ರಷ್ಟು ಮಾತ್ರ ಉಂಟು. ಇದು ಚಂದ್ರನ ತಲದ ವಕ್ರತೆಗಳನ್ನೂ ಪಾತವಾಗುವ ಸೌರಕಿರಣಗಳ ದಿಸೆಯನ್ನೂ ಅವಲಂಬಿಸಿ ಹೀಗಾಗುತ್ತದೆ.
	ಗಿI  ಕೆಲವು ಉಪಯುಕ್ತ ಮಾಹಿತಿಗಳು : ಚಂದ್ರಗೋಳದ ತ್ರಿಜ್ಯ (ಭೂಮಿಯ ಸಮಭಾಜಕೀಯ ತ್ರಿಜ್ಯ = 1) : 0.27227 ; ಎಂದರೆ 1736.7 ಕಿ.ಮೀ 
ಮೇಲ್ಮೈ ಸಲೆ : 105 ಕಿ.ಮೀ2 
ಘನಗಾತ್ರ : 219 x 108 ಕಿ.ಮೀ.3 ದ್ರವ್ಯರಾಶಿ (ಭೂಮಿ=1) :  ; ಎಂದರೆ 7.35 x 1025 ಗ್ರಾಂ.
ಸರಾಸರಿ ಸಾಂದ್ರತೆ (ನೀರು=1) : 3.36
ಚಂದ್ರತಲದಲ್ಲಿ ಗುರುತ್ವ ವೇಗೋತ್ಕರ್ಷ : 163  ಸೆಂ.ಮೀ. 
ಸಂಯುತಿ ಅವಧಿ (ಚಂದ್ರಮಾಸ) : 29.530588 ದಿ = 29 ದಿ. 12 ಗಂ. 44 ಮಿ. 2.8 ಸೆ,
ನಾಕ್ಷತ್ರಿಕ ಅವಧಿ 27.321661 ದಿ = 27 ದಿ. 7 ಗಂ. 43 ಮಿ. 11.5 ಸೆ,
ಸರಾಸರಿ ದಿಗ್ವ್ಯತ್ಯಾಸ : 57'2.7"
ಸರಾಸರಿ ದೂರ (ಭೂಮಿಯ ಸಮಭಾಜಕೀಯ ತ್ರಿಜ್ಯ = 1) : 60.2665 ' ಎಂದರೆ 384,400 ಕಿ.ಮೀ 
ಸರಾಸರಿ ತೋರ್ಕೆ ತ್ರಿಜ್ಯ : 15' 32" (ಸೂರ್ಯ 16')
ಕಕ್ಷೆಯ ಸರಾಸರಿ ಉತ್ಕೇಂದ್ರತೆ : 0.0549
ಸರಾಸರಿ ಭೂಮಿ ನೀಚ ದೂರ : 363.300 ಕಿ.ಮೀ (ಕನಿಷ್ಟ 356,500 ಕಿ.ಮೀ)
ಸರಾಸರಿ ಭೂಮ್ಯುಚ್ಚ ದೂರ : 405.500 ಕಿ.ಮೀ  (ಗರಿಷ್ಟ : 406,800 ಕಿ.ಮೀ)
ಕ್ರಾಂತಿ ವೃತ್ತಕ್ಕೆ ಕಕ್ಷೆಯ ಸರಾಸರಿ ಬಾಗು : 50 8' 43"
ಕ್ರಾಂತಿ ವೃತ್ತಕ್ಕೆ ಚಾಂದ್ರ ಸಮಭಾಜಕೀಯವೃತ್ತದ ಬಾಗು ; 10 32"
	ಗಿII  ಭಾರತೀಯ ಖಗೋಳ ವಿಜ್ಞಾನದಲ್ಲಿ ಚಂದ್ರ : ಆಕಾಶದಲ್ಲಿ ಸೂರ್ಯನಾದ ಬಳಿಕ ಅತ್ಯಂತ ಗಮನಾರ್ಹ ಕಾಯವೆಂದರೆ ಚಂದ್ರನೇ. ಕೇವಲ ಪ್ರಕಾಶ ಒಂದರಲ್ಲೇ ಅಲ, ತನ್ನ ಕಲೆಗಳ ಏರಿಳಿತಗಳು ನಾಕ್ಷತ್ರಿಕ ಹಿನ್ನೆಲೆಯಲ್ಲಿ ವೇಗಯುತವಾದ ಚಲನೆ ಇವುಗಳಿಂದಲೂ ಚಂದ್ರ ಒಂದು ವಿಶಿಷ್ಟ ಗುಣವಿರುವ ಆಕಾಶಕಾಯ. ಚಂದ್ರನಿಗೆ ಸ್ವಂತ ಪ್ರಕಾಶವಿಲ್ಲ. ಸೂರ್ಯಪ್ರಕಾಶವನ್ನು ಪ್ರತಿಫಲಿಸಿ ಅದು ಬೆಳಗುತ್ತದೆ ಎನ್ನುವುದನ್ನು ಭಾರತೀಯ ಖಗೋಳವಿಜ್ಞಾನಿಗಳು ಋಗ್ವೇದ ಕಾಲದಷ್ಟು ಹಿಂದೆಯೇ ಗಮನಿಸಿ ಉಲ್ಲೇಖಿಸಿದ್ದಾರೆ. (ಋಗ್ವೇದ Iಘಿ 41.9) ಅಮಾವಾಸ್ಯೆಯ ವಿದ್ಯಮಾನವನ್ನು ಆಲಂಕಾರಿಕವಾಗಿ ಶತಪಥ ಬ್ರಾಹ್ಮಣದಲ್ಲಿ ಈ ಕೆಳಗಿನಂತೆ ವರ್ಣಿಸಿದೆ (ಶ.ಬ್ರಾ. 1.6.4.  18-20) : 
		ಅಲ್ಲಿ ಉರಿಯುತ್ತಿರುವ ಆ ಕಾಯ (ಎಂದರೆ ಸೂರ್ಯ) ಬೇರೆ ಯಾರೂ ಅಲ್ಲ-ಸಾಕ್ಷಾತ್ ಇಂದ್ರನೇ : ಇನ್ನು ಚಂದ್ರನೋ ಸ್ವತಃ ವೃತ್ರನೇ. ಪ್ರವೃತ್ತಿಯಿಂದ ಇಂದ್ರ ವೃತ್ರನ ಶತ್ರು. ಈ ವೃತ್ರ ಹಿಂದೆ (ಎಂದರೆ ಹಿಂದಿನ ರಾತ್ರಿ) ಇಂದ್ರ (ಸೂರ್ಯ)ನಿಗಿಂತ ಅತಿ ದೂರದಲ್ಲಿ ಮೂಡಿದ್ದರೂ ಈಗ ಅವನು (ವೃತ್ರ) ಇಂದ್ರನೆಡೆಗೆ ಈಸಿ ಅವನ ತೆರೆಬಾಯಿಯನ್ನು ಪ್ರವೇಶಿಸುತ್ತಾನೆ. ಹೀಗೆ ವೃತೃನನ್ನು ಕಬಳಿಸಿದ ಇಂದ್ರ ಮೂಡುತ್ತಾನೆ-ವೃತ್ರ ಈಗ ಎಲ್ಲೂ ಕಾಣಿಸುವುದಿಲ್ಲ. ವೃತ್ರನ ಸತ್ತ್ವವನ್ನು ಹೀರಿಕೊಂಡು ಇಂದ್ರ ಆತನನ್ನು ಹೊರಗೆಸೆದುಬಿಡುತ್ತಾನೆ. ಸತ್ತ್ವ ಕಳೆದುಕೊಂಡ ವೃತ್ರನನ್ನು ಪಶ್ಚಿಮಾಕಾಶದಲ್ಲಿ ಕಾಣಬಹುದು. ಅಲ್ಲಿಂದ ಮುಂದೆ ಅವನು ಕ್ರಮೇಣ ವೃದ್ಧಿಹೊಂದುತ್ತಾನೆ. ಪುನಃ ಇಂದ್ರನಿಗೆ ಆಹಾರವಾಗುತ್ತಾನೆ.
		ಸೂರ್ಯನನ್ನು ಕುರಿತು ಚಂದ್ರನ ಪಶ್ಚಿಮ-ಪೂರ್ವ ದಿಶೆಯ ಚಲನೆಯನ್ನೂ ಚಂದ್ರನ ಕಲೆಗಳ ಏರಿಳಿತಗಳನ್ನೂ ಬಲು ಸೊಗಸಾಗಿ ವರ್ಣಿಸುವ ಚಿತ್ರವಿದು. ಕಾಲಮಾಪನವನ್ನು ಮಾಡಲು ಸಹಜವಾಗಿ ಒದಗುವ ಆಕಾಶಗಡಿಯಾರ ಚಂದ್ರ ಎನ್ನುವ ಸಂಗತಿ ಬಲು ಪ್ರಾಚೀನ ಕಾಲದಲ್ಲೇ ಭಾರತೀಯರಿಗೆ ತಿಳಿದಿತ್ತು., ಚಂದ್ರನ ಸಂಯುತಿ ಅವಧಿ (ಚಾಂದ್ರಮಾಸ) ಹಾಗೂ ನಾಕ್ಷತ್ರಿಕ ಅವಧಿ ಇವೆರಡನ್ನೂ ಅವರು ಗುರುತಿಸಿದ್ದರು-ಮೊದಲನೆಯದು ಸೂರ್ಯನನ್ನು ಕುರಿತಂತೆ ಒಂದು ಪೂರ್ಣ ಪರಿಭ್ರಮಣೆ (ಅವಧಿ 29.5 ದಿ.) ಎರಡನೆಯದು ಸ್ಥಿರ ನಕ್ಷತ್ರಗಳನ್ನು ಕುರಿತಂತೆ ಒಂದು ಪೂರ್ಣ ಪರಿಭ್ರಮಣೆ (ಅವಧಿ ಸುಮಾರು 27 ದಿ.) ಈ ವಿವರಗಳು ಆರಂಭದ ಸಂಹಿತೆಗಳಲ್ಲೇ ಬಂದಿವೆ, ಚಂದ್ರಕಕ್ಷೆಯಲ್ಲಿರುವ ಆಶ್ವಿನಿಯಿಂದ ರೇವತಿವರೆಗಿನ 27 ನಕ್ಷತ್ರಗಳಿಗೆ ಪ್ರಾಧಾನ್ಯ ಬಂದದ್ದು ಈ ಕಾರಣದಿಂದ.
	ಗಿIII  ಮಾನವ, ಚಂದ್ರನ ಮೇಲೆ : ಚಂದ್ರನ ಮೇಲೆ ಮಾನವ ಮೊದಲು ಕಾಲಿಟ್ಟಿದ್ದು 1969ರ ಜುಲೈ 21 ರಂದು. (ನೋಡಿ-ಅಪೋಲೊ-11).
(ನೋಡಿ- ಅಂತರಿಕ್ಷ-ಸಂಶೋಧನೆ) 
(ನೋಡಿ- ಉಪಗ್ರಹ,-ಕೃತಕ)
		ಮನುಷ್ಯನನ್ನು ಚಂದ್ರನ ಮೇಲೆ ಇಳಿಸಿ, ಸ್ವಲ್ಪ ಕಾಲ ಅಲ್ಲಿಯೇ ಉಳಿಸಿ, ಬಳಿಕ ಭೂಮಿಗೆ ಮರಳಿಸುವ ಉದ್ದೇಶದಿಂದ ಅಪೊಲೊ ಆಕಾಶಯೋಜನೆ 1961-70ರ ದಶಕದಲ್ಲಿ ಕಾರ್ಯ ಪ್ರವೃತ್ತವಾಯಿತು. ಇದರ ಪ್ರಥಮ ಫಲ ಸಿದ್ಧಿಸಿದ್ದು 1969ರ ಜುಲೈ 21ರಂದು ಮೊದಲಿಗೆ ನೀಲ್ ಆರ್ಮಸ್ಟ್ರಾಂಗ್ ನಂತರ ಎಡ್ವಿನ್ ಅಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟಾಗ, ಅವರು ಪಯಣಿಸಿದ ಅಂತರಿಕ್ಷ ನೌಕೆಯ ಹೆಸರು ಅಪೊಲೊ-11. ಆ ಮೊದಲಿನ ಅಪೊಲೊ ಹಾಗೂ ಇತರ ಮಾನವರಹಿತ ಅಂತರಿಕ್ಷ ನೌಕೆಗಳು ಮನುಷ್ಯನ ಚಂದ್ರಾವತರಣಕ್ಕೆ ಬೇಕಾದ ಮಾಹಿತಿಗಳನ್ನು ಸವಿವರವಾಗಿ ಮತ್ತು ವಿಪುಲವಾಗಿ ಒದಗಿಸುವುದರಲ್ಲಿ ಯಶಸ್ವಿಯಾದ್ದರಿಂದಲೇ ಆರ್ಮ್‍ಸ್ಟ್ರಾಂಗ್ " ಅದು ಮಾನವನೊಬ್ಬನಿಗೆ ಬಲು ಪುಟ್ಟ ಹೆಜ್ಜೆ, ಆದರೆ ಮಾನವಜನಾಂಗಕ್ಕೆ ದೈತ್ಯ ನೆಗೆತ" ಈ ಅರ್ಥಬರುವ ಮೊತ್ತಮೊದಲ ಮಾತನ್ನು ಚಂದ್ರನ ಮೇಲಿಂದ ಉದ್ಗರಿಸಲು ಸಮರ್ಥನಾದ. ಅಪೊಲೊ ಸರಣಿ ಮುಂದುವರಿದು 1972ರ ಡಿಸೆಂಬರಿನಲ್ಲಿ ಅಪೊಲೊ-17 ನೌಕೆ ಅದರ ಯಾನಿಗಳ ಸಮೇತ ಧರೆಗೆ ಸುರಕ್ಷಿತವಾಗಿ ಮರಳಿದಾಗ ಅಪೊಲೊ ಯೋಜನೆ, ಎಂದರೆ "ಚಂದ್ರನ ಮೇಲೆ ಮಾನವ," ಯೋಜನೆ ಪೂರ್ಣವಾಯಿತು. ಈ ಯೋಜನೆಯ ಮುಕ್ತಾಯ ಮಾನವನ ಜ್ಞಾನಕ್ಷಿತಿಜವನ್ನು ಆರು ಪ್ರಮುಖ ಕ್ಷೇತ್ರಗಳಲ್ಲಿ ವಿಸ್ತರಿಸಿತು.
 	ಮೊದಲನೆಯದು ಜೀವವಿಜ್ಞಾನ ಕ್ಷೇತ್ರ. ಮನುಷ್ಯ ಭೂಮಿಯ ಶಿಶು. ಇಲ್ಲಿನ ವಾಯುಮಂಡಲ, ಜಲರಾಶಿ, ಹವೆ, ಸಸ್ಯಸಂಪತ್ತು, ಗುರುತ್ವಬಲ, ಸೌರವಿಕಿರಣ, ಭೌತಪರಿಸ್ಥಿತಿ, ಸಾಮಾಜಿಕ ಜೀವನ ಒಂದೊಂದು ಈತನ ದೇಹ ಮತ್ತು ಮನಸ್ಸನ್ನು ರೂಪಿಸಿದೆ. ಭೂಮಿಯಿಂದ ಹೊರಗೆ ಹೋಗುವ ಮನುಷ್ಯ ಇವೆಲ್ಲ ಅನುಕೂಲ ಪ್ರಭಾವಗಳಿಂದ ಪರೋಕ್ಷವಾಗಿ ತಿಳಿದ ಮತ್ತು ತಿಳಿಯದ ಎಷ್ಟೋ ಪ್ರಭಾವಗಳಿಗೆ ಈಡಾಗುತ್ತಾನೆ. ಅಂತರಿಕ್ಷದ ಹಾಗೂ ಅಂತರಿಕ್ಷಯಾನದ ಹಲವಾರು ವಿದ್ಯಮಾನಗಳನ್ನು ಭೂಮಿಯಲ್ಲೇ ಕೃತಕವಾಗಿ ಸೃಷ್ಟಿಸಿ ಅವುಗಳಿಗೆ ಮನುಷ್ಯನನ್ನು ಒಡ್ಡಿ ಆ ಪರಿಣಾಮಗಳನ್ನು ಆಭ್ಯಸಿಸಿ ಅವನನ್ನು ಅಂತರಿಕ್ಷಯಾನಕ್ಕೆ ಸಿದ್ಧಪಡಿಸಲಾಯಿತು. ಸುಸಜ್ಜಿತವಾದ ಅಂತರಿಕ್ಷ ಉಡುಪನ್ನು ತೊಟ್ಟು ಭೂ ಗುರುತ್ವದ ಆರರಲ್ಲಿ ಒಂದರಷ್ಟು ಮಾತ್ರ ಇರುವ ಚಂದ್ರತಲದಲ್ಲಿ ನಡೆಯುವುದು. ನಿಲ್ಲುವುದು, ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಇವೇ ಮೊದಲಾದ ಅಂತರಿಕ್ಷ ಚಟುವಟಿಕೆಗಳು ಇಂಥ ಪ್ರಯತ್ನದ ಫಲ. ಅಂದರೆ ಯುಕ್ತಶಿಕ್ಷಣ, ತಕ್ಕಪೋಷಾಕು, ಸವಾಲನ್ನು ಎದುರಿಸುವ ದಿಟ್ಟತನ, ಸಮರ್ಥ ಭೂ ನಿಯಂತ್ರಣ ಇವೇ ಮುಂತಾದವು ಸುಸಂಘಟಿತವಾಗಿ ಮೇಳೈಸಿದರೆ ಮನುಷ್ಯ ಭೂಮಿಯಿಂದ ಹೊರಕ್ಕೆ ಹೋಗಿ ಅಜ್ಞಾತ ಲೋಕಗಳ ಅನ್ವೇಷಣೆ ನಡೆಸಿ ಯಶಸ್ವಿಯಾಗಿ ಮರಳಬಲ್ಲ ಎಂಬುದು ಇದರಿಂದ ವೇದ್ಯವಾಯಿತು.

		ಎರಡನೆಯದು ಯಂತ್ರನಿರ್ಮಾಣ ಕ್ಷೇತ್ರ. ಆಕಾಶಯಾನ ಕಾಲದಲ್ಲಿ ಎದುರಾಗುವ ವೇಗ, ಉಷ್ಣತೆ, ಸಂಮರ್ದ, ಘರ್ಷಣೆ ಸೌರವಿಕಿರಣ ಇವೆಲ್ಲವೂ ಭೂಪರಿಸರದ ಯಾವ ಪ್ರಯಾಣದಲ್ಲೂ ಎದುರಾಗದಂಥವು. ಇಂಥ ತೀವ್ರ ಪ್ರಭಾವಗಳ ವಿರುದ್ಧ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ತಮ್ಮೊಳಗಿರುವ ಸೂಕ್ಷ್ಮೋಪಕರಣಗಳಿಗೂ ಮಾನವ ಯಾತ್ರಿಗಳಿಗೂ ರಕ್ಷಣೆ ಒದಗಿಸುವ ಅಂತರಿಕ್ಷ ನೌಕೆಗಳ ನಿರ್ಮಾಣ ಮನುಷ್ಯ ಹಿಂದೆಂದೂ ಎದುರಿಸಿದ ಹೊಸ ಸಮಸ್ಯೆಗಳನ್ನೇ ಸೃಷ್ಟಿಸಿದುವು. ಉದಾಹರಣೆಗೆ ಅಪೊಲೊ-11 ನೌಕೆ ಅದರ ವಾಹನ ಸ್ಯಾಟರ್ನ್-5 ರಾಕೆಟಿನ ಸಮೇತ  ನೆಲದ ಮೇಲೆ ನಿಂತಿದ್ದಾಗ ಈ ವ್ಯವಸ್ಥೆಯ ತೂಕ 3000 ಟನ್ ಎತ್ತರ 110 ಮೀಟರ್, ಇಂಥ ಮಹಾತೂಕವನ್ನು ಭೂಮಿಯಿಂದ ಮೇಲಕ್ಕೆ ಉಡಾಯಿಸುವಾಗ 3400 ಟನ್ನುಗಳನ್ನು ನೂಕುಬಲವನ್ನು ಮೊದಲು ಉತ್ಪಾದಿಸಬೇಕಾಯಿತು. ಭೂಮಿಯನ್ನು ಸುತ್ತುವ ಕಾರ್ಯದಿಂದ ವಿಮೋಚನೆ ಪಡೆದ ಹಂತದಲ್ಲಿ ನೌಕೆಯ ವೇಗ ಗಂಟೆಗೆ 39,200 ಕಿಲೋ ಮೀಟರುಗಳಷ್ಟಿತ್ತು! ಚಂದ್ರಯಾನ ಮುಗಿಸಿ ಭೂಮಿಗೆ ಮರಳುವಾಗ ನೌಕೆಯ ಹೊರಕವಚದ ಉಷ್ಣತೆ 26000 ಸೆ. ಇಂಥ ಸಮಸ್ಯೆಗಳನ್ನು ನಿರೀಕ್ಷಿಸಿ ಸೂಕ್ತ ಮತ್ತು ಸಮರ್ಥ ಯಂತ್ರಗಳನ್ನೂ ರಚನೆಗಳನ್ನೂ ನಿರ್ಮಿಸಲೆಂದೇ ಮೈದಳೆದ ವಿಜ್ಞಾನವಿಭಾಗದ ಹೆಸರು ಅಂತರಿಕ್ಷ ವಿನ್ಯಾಸಶಾಸ್ತ್ರ. ನೌಕೆಯ ಒಂದೊಂದು ಬಿಡಿಭಾಗವೂ ಅತಿನಿಷ್ಕøಷ್ಟ ಮತ್ತು ಕಠಿಣ ಪೂರ್ವಪರೀಕ್ಷೆಗೆ ಒಳಗಾದ ವಿನಾ ಅದು ಯಾನಯೋಗ್ಯವಾಗುವುದಿಲ್ಲ. ಇಂಥ ಬಿಡಿ ಭಾಗಗಳ ಆಲೇಖ್ಯ ಹೇಗಿರಬೇಕು, ಆ ಭಾಗಗಳನ್ನು ಯಾವ ಪದಾರ್ಥಗಳಿಂದ ನಿರ್ಮಿಸಬೇಕು ಎಂಬ ವಿವರಗಳೆಲ್ಲವೂ ಈಗ ಅಂತರಿಕ್ಷ ವಿನ್ಯಾಸಕರಿಗೆ ತಿಳಿದಿರುವ ಸಂಗತಿಗಳಾಗಿವೆ.

	ಮೂರನೆಯದು ಶಕ್ತಿಮೂಲಾನ್ವೇಷಣೆ. ಅಂತರಿಕ್ಷಯಾನ ಸಾಂಪ್ರದಾಯಿಕ ವಿಮಾನಸಂಚಾರಕ್ಕಿಂತ ತೀರ ಭಿನ್ನವಾದದ್ದು. ಅತಿಯಾಗಿ ಸರಳೀಕರಿಸಿ ಹೇಳುವುದಾದರೆ ವಿಮಾನಯಾನವೆಂದರೆ ವಾಯುಸಮುದ್ರದಲ್ಲಿ ಸಾಗುತ್ತಿರುವ ಹಡಗು. ಅಂತರಕ್ಷ ನೌಕೆ ಹೀಗಲ್ಲ. ಅದು ಭೂಮಿಯ ವಾಯುಮಂಡಲದ ತೀರ ಸೀಮಿತವಲಯವನ್ನು ತೊರೆದ ಬಳಿಕ ನಿರ್ವಾತ ಪ್ರದೇಶದಲ್ಲಿ ಬಹುಕಾಲ ಬಹುದೂರ ಸಂಚರಿಸುತ್ತಿರುವುದು. ಅಲ್ಲದೇ ಭೂಗುರುತ್ವದ ಬಿಗಿ ಅಪ್ಪುಗೆಯಿಂದ ಪಾರಾಗಿ ಹೋಗಲು ನೌಕೆ ಗಂಟೆಗೆ 40,000 ಕಿಲೋಮೀಟರುಗಳಿಗೂ ಮಿಕ್ಕಿದ ವೇಗವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಇಲ್ಲಿ ಬೇಕಾದದ್ದು ನಿರ್ವಾತಪ್ರದೇಶದಲ್ಲಿ ಅಧಿಕವೇಗವನ್ನು ನೌಕೆಗೆ ನೀಡಬಲ್ಲ ಶಕ್ತಿಮೂಲ. ರಾಕೆಟುಗಳ ನಿರ್ಮಾಣ ಈ ಹೊಸ ಆಯಾಮವನ್ನು ಒದಗಿಸಿದೆ. ರಾಕೆಟನ್ನು ಉರಿಸಿದಾಗ ಅದರ ಬೆಂಕಿಯ ನಾಲಗೆ ಚಾಚುವ ದಿಶೆಗೆ ವಿರುದ್ಧ ದಿಶೆಯಲ್ಲಿ ನೌಕೆ ಚಲಿಸುತ್ತದೆ. ಈ ನಿಯಮಾನುಸಾರ ರಾಕೆಟುಗಳನ್ನು ಸೂಕ್ತದಿಶೆಯಲ್ಲಿ ಉರಿಸಿ ಒಂದು ನೌಕೆಗೆ ಅಧಿಕವೇಗವನ್ನು ನೀಡಬಹುದು. ಇಲ್ಲವೇ ನೌಕೆಯ ವೇಗವನ್ನು ಮಂದಗೊಳಿಸಬಹುದು ಅಥವಾ ಅದರ ಚಲನದಿಶೆಯನ್ನು ಬದಲಾಯಿಸಬಹುದು. ರಾಕೆಟುಗಳಲ್ಲಿ ಶಕ್ತಿಮೂಲವಾಗಿ ಘನ ಮತ್ತು ದ್ರವ ನೋದನಕಾರಿಗಳೆರಡರ (ನೋದನಕಾರಿ ಎಂದರೆ ಇಂಧನ ಮತ್ತು ಆಕ್ಸಿಡ್ ಕಾರಕಗಳ ಜೋಡಿ) ಬಳಕೆಯೂ ಉಂಟು. ಅಪೊಲೊ-11ನ್ನು ಒಯ್ದ ಸ್ಯಾಟರ್ನ್-5 ರಾಕೆಟಿನಲ್ಲಿ ದ್ರವ ಹೈಡ್ರೊಜನ್, ವಿಕಾಪ ಸೀಮೆಎಣ್ಣೆ ಮತ್ತು ದ್ರವ ಆಕ್ಸಿಜನ್ನುಗಳ ಮಿಶ್ರಣವನ್ನು ನೋದನಕಾರಿಗಳಾಗಿ ಉಪಯೋಗಿಸಿದ್ದರು. ದ್ರವ ಹೈಡ್ರೋಜನ್ನನ್ನು-2530 ಸೆ. ನಲ್ಲಿಯೂ ದ್ರವ ಆಕ್ಸಿಜನ್ನನ್ನು-1830 ಸೆ.ನಲ್ಲಿಯೂ ಕಾಪಾಡಿಕೊಂಡು ಯುಕ್ತ ಮಿಶ್ರಣವನ್ನು ಪೂರೈಕೆ ಮಾಡಿ ಶಕ್ತಿಯನ್ನು ಒದಗಿಸಲಾಯಿತು. ಇಂಥ ಆಸ್ಪೋಟಿಕ ನೋದನಕಾರಿಗಳನ್ನು ಭಾರಿಪ್ರಮಾಣದಲ್ಲಿ ಸುದೀರ್ಘ ಅಂತರಿಕ್ಷಯಾನಕ್ಕೆ ಕೊಂಡೊಯ್ಯುವುದು ಬಲು ದುಬಾರಿಯ ಸಾಹಸವಾಗುತ್ತದೆ. ಆದ್ದರಿಂದ ಆಕಾಶಕಾಯಗಳ ಗುರುತ್ವಾಕರ್ಷಣ ಶಕ್ತಿಯನ್ನು ಮತ್ತು ಅಲ್ಪ ಪ್ರಮಾಣದಲ್ಲಿ ಸೂರ್ಯನಿಂದ ದೊರೆಯುವ ಶಕ್ತಿಯನ್ನೂ ಪರಮಾಣು ಶಕ್ತಿಯನ್ನೂ ಅಂತರಿಕ್ಷನೌಕೆಯೊಂದರ ಚಲನೆಗಾಗಿ ಬಳಸಿಕೊಳ್ಳುವ ಏರ್ಪಾಡು ಸಹ  ಇಂದು ಉಂಟು.

		ನಾಲ್ಕನೆಯದು ನಿಯಂತ್ರಣ ವಿಜ್ಞಾನ: ಇಂದಿನ ಜೆಟ್ ವಿಮಾನಗಳ ಯಾನ ವೇಗ ಏರುತ್ತಿರುವಂತೆ ಅವುಗಳ ನಿಯಂತ್ರಣವನ್ನು ಬಲುಮಟ್ಟಿಗೆ ಸ್ವಯಂಚಲನೆಗೊಳಿಸಲಾಗುತ್ತಿದೆ. ಅಂತಹ ಉನ್ನತವೇಗದಲ್ಲಿ ಚಾಲಕನ ನಿರ್ಧರಣ ಸಾಮಥ್ರ್ಯ ಸಾಕಷ್ಟು ನಿಷ್ಕøಷ್ಟವೂ ಕ್ಷಿಪ್ರವೂ ಆಗಿರದಿರುವುದೇ ಇದರ ಕಾರಣ. ಭೂಪರಿಸರದಲ್ಲೇ ಪರಿಸ್ಥಿತಿ ಹೀಗಿದ್ದರೆ ಇನ್ನು ಆಕಾಶಯಾನದಲ್ಲಿ ನಿಯಂತ್ರಣ ಸಮಸ್ಯೆ ಅದೆಷ್ಟು ಗಂಭೀರವಾಗಿದ್ದೀತು ಎಂಬುದನ್ನು ಊಹಿಸಿಕೊಳ್ಳಬಹುದು. ನೌಕೆಯೊಂದರಲ್ಲಿನ ಮತ್ತು ಕೆಲವು ವೇಳೆ ಯಾನ ನಿರ್ವಹಣಾ ವ್ಯವಸ್ಥೆ ಅಂತರಿಕ್ಷನೌಕೆಯ ಯಾನವನ್ನು ಕ್ಷಣಕ್ಷಣ ನಿಯಂತ್ರಿಸುತ್ತದೆ. ಅಪೊಲೋ ನೌಕೆಯ ನಿಯಂತ್ರಣ ವ್ಯವಸ್ಥೆಯ ಎಂದಿನ ಸಾಧಾರಣ ಕ್ರಿಯೆಗಳೆಲ್ಲವೂ ಗಣಕೀಕೃತವಾಗಿ ಸ್ವಯಂಚಾಲಿತವಾಗಿ ಕ್ರಮವಿಧಿಯನ್ನೇ ಬದಲಾಯಿಸಬೇಕಾಗಿ ಬಂದಾಗ ವಿವಿಧ ವಿಜ್ಞಾನಪ್ರಕಾರಗಳಲ್ಲಿ ತಜ್ಞರಾದವರ ಒಂದು ತಂಡವೇ ಸೂಕ್ತ ನಿರ್ಧಾರವನ್ನು ತಳೆದು ಅದನ್ನು ಗಗನಯಾತ್ರಿಗಳಿಗೆ ಘೋಷಿಸಲಾಗುತ್ತಿತ್ತು. ಯಂತ್ರ-ಮನುಷ್ಯ ಅಂತರಕ್ರಿಯೆ ಬೇರೆಲ್ಲ ಕ್ಷೇತ್ರಗಳಿಗಿಂತ ಹೆಚ್ಚಿನ ಅನ್ಯೋನ್ಯತೆಯಿಂದ ಇಲ್ಲಿ ನಡೆಯುತ್ತಿತ್ತು.

		ಐದನೆಯದು ಚಂದ್ರಪರಿಸರವಿಜ್ಞಾನ. ಆಕಾಶಯುಗ 1957ರಲ್ಲಿ ಆರಂಭವಾಯಿತಷ್ಟೆ. ಆ ಮೊದಲು ಚಂದ್ರನ ಭೌತ ಪರಿಸ್ಥಿತಿಯನ್ನು ಕುರಿತು ನಮಗೆ ತಿಳಿದಿದ್ದ ವಿಷಯಗಳೇನಿದ್ದರೂ ಅವು ಪರೋಕ್ಷ  ವಿಧಾನಗಳಿಂದ ಮತ್ತು ಗಣನೆಗಳಿಂದ ಲಭಿಸಿದವು ಮಾತ್ರ. ಇಷ್ಟನ್ನೇ ಆಧರಿಸಿ ಮನುಷ್ಯನನ್ನು ಚಂದ್ರನ ಮೇಲೆ ಇಳಿಸುವುದು ಅಪ್ರಾಯೋಗಿಕ. ಹೀಗಾಗಿ ಮನುಷ್ಯನ ಚಂದ್ರಯಾನದ ಮೊದಲು ಮಾನವರಹಿತ. ಆದರೆ ಉಪಕರಣಸಹಿತ, ನೌಕೆಗಳನ್ನು ಚಂದ್ರನ ಮೇಲೆ ಇಳಿಸಿ ಅವುಗಳ ನೆರವಿನಿಂದ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಅಲ್ಲದೇ ಅಪೊಲೊ-8ರಲ್ಲಿ ಮೂವರು ಅಮೆರಿಕಾದ ಗಗನಯಾತ್ರಿಗಳು 1968ರಲ್ಲಿ ಚಂದ್ರನಿಗೆ ಪ್ರದಕ್ಷಿಣೆ ಹಾಕಿ ಚಂದ್ರನ ಸಮೀಪ ಚಿತ್ರಗಳನ್ನು ಪಡೆದು ಧರೆಗೆ ಮರಳಿದರು. ಸಮೀಪದಿಂದ ತೆಗೆಯಲಾದ ಇಂತಹ ಚಿತ್ರಗಳಿಂದ ಚಂದ್ರನ ಸಾಗರಗಳು ವಾಸ್ತವಿಕವಾಗಿ ಜಲರಹಿತ ಮಹಾಕಮರಿಗಳು, ಕೂಪಗಳು ಉಲ್ಕಾಪಾತದಿಂದಲೇ ಉಂಟಾದವು. ಚಂದ್ರನ ಮಟ್ಟಸ ಪ್ರದೇಶಗಳಲ್ಲಿ ಮನುಷ್ಯ ಹೂತುಹೋಗಬಹುದಾದಂಥ ದೂಳಿನ ರಾಶಿ ಏನೂ ಇಲ್ಲ. ಮತ್ತು ಚಂದ್ರ ಪೂರ್ಣವಾಗಿ ವಾಯುರಹಿತ ಎಂದು ಮುಂತಾದುವು ಖಚಿತವಾಗಿ ತಿಳಿಯಿತು. ಅಲ್ಲದೇ ಚಂದ್ರತಲದಲ್ಲಿ ಸೂರ್ಯೋಷ್ಣದಿಂದ ಒದಗುವ ಉಷ್ಣತೆಯ ತೀವ್ರ ಏರಿಳಿತಗಳನ್ನು ಕುರಿತು ವಿವರಗಳು ಲಭಿಸಿದವು. ಹೀಗೆ ದೊರೆತ ಜ್ಞಾನದ ಪರಿಣಾಮವಾಗಿ ಮನುಷ್ಯನನ್ನು ಎಲ್ಲಿ ಹೇಗೆ ಎಂದು ಇಳಿಸಬೇಕು. ಎಷ್ಟು ಕಾಲ ಆತ ಅಲ್ಲಿ ಇರಬೇಕು. ಏನೇನು ಕಾರ್ಯಗಳನ್ನು ನಡೆಸಬೇಕು ಇವೇ ಮುಂತಾದ ಕ್ರಮವಿಧಿಗಳನ್ನು ರೂಪಿಸಲು ವಿಜ್ಞಾನಿಗಳು ಸಮರ್ಥರಾದರು.

	ಆರನೆಯದು ಬ್ರಹ್ಮಾಂಡವನ್ನು ಕುರಿತಂತೆ ಉಂಟಾಗಿರುವ ಪರಿಜ್ಞಾನ. ಬ್ರಹ್ಮಾಂಡದ ಒಂದು ಕಿರುತುಣುಕು ಸೌರವ್ಯೂಹ. ಅದರ ಒಂದು ಅಲ್ಪಾಂಶ ಭೂಮಿ-ಚಂದ್ರ ವಲಯ. ಮನುಷ್ಯನಿಗೆ ಬ್ರಹ್ಮಾಂಡವನ್ನು ಕುರಿತು ಜ್ಞಾನ ಮೊದಲು ಲಭಿಸುವುದು ಅವನ ಸ್ವಂತ ಜಾಗದ ಅನ್ವೇಷಣೆಯಿಂದ; ಬಳಿಕ ಆಕಾಶ ವೀಕ್ಷಣೆಯಿಂದ, ಯುಗಯುಗಗಳಿಂದ ಆಕಾಶದ ದೃಶ್ಯ ಕಾಯಗಳು ಮನುಷ್ಯನಿಗೆ ನಾನಾವಿಧದ ಸವಾಲುಗಳನ್ನೂ ಆಕರ್ಷಣೆಗಳನ್ನೂ ಎದುರೊಡ್ಡುತ್ತ ಬಂದಿವೆ. ಇಂಥ ಸವಾಲುಗಳ ಪೈಕಿ ಒಂದು ಭೂಮಿಗೆ ಅತಿ ಸಮೀಪ ಆಕಾಶಕಾಯವಾದ ಚಂದ್ರನಲ್ಲಿ ಯಾವ ವಿಧವಾದ ಜೀವಿಗಳಿದ್ದುದಕ್ಕೂ ದಾಖಲೆಗಳಿಲ್ಲ, ಚಂದ್ರನಿಂದ ಆಯ್ದು ತಂದ ಬಹುತೇಕ ಶಿಲೆಗಳು ಘನೀಭವಿಸಿದ್ದು 325 ರಿಂದ 360 ಕೋಟಿ ವರ್ಷಗಳಷ್ಟು ಪ್ರಾಚೀನದಲ್ಲಿ, ಚಂದ್ರನ ವಯಸ್ಸು ಸುಮಾರು 4600 ದಶಲಕ್ಷ ವರ್ಷಗಳು, ಭೂಮಿಗಿಂತ ಚಂದ್ರ ಪ್ರಾಯಶಃ 40 ಕೋಟಿ ವರ್ಷಗಳಷ್ಟು ಕಿರಿಯದು, ಇಂತಹ ವಿಷಯಗಳು ತಿಳಿದಿವೆ. 

		ಮನುಷ್ಯನ ತಂತ್ರವಿಜ್ಞಾನದ ಪ್ರಗತಿಯ ಹಾಗೂ ಯಶಸ್ಸಿನ ಪ್ರಧಾನ ಪ್ರತೀಕ ಅಪೊಲೊ ಯೋಜನೆ. ಮನುಷ್ಯ ಭೂಮಿಗೆ ಸದಾ ಬಂಧಿತನಾಗಿ ಇರಬೇಕಾಗಿಲ್ಲ. ಭಿನ್ನ ಪರಿಸರಕ್ಕೆ ತೆರಳಿ ಅಲ್ಲಿ ಬದಕುಬಲ್ಲ ಎಂದು ಇದರಿಂದ ರುಜುವಾತಾಗಿದೆ. ಅಪೊಲೊ ಯೋಜನೆಯ ಉಪೋತ್ಪನ್ನಗಳಾಗಿ ಮಾನವ ಜನಾಂಗಕ್ಕೆ ಒದಗಿರುವ ಲಾಭ ಸೌಕರ್ಯಗಳ ವಿಶ್ಲೇಷಣೆ ಸುದೀರ್ಘವಾಗುವುದರಿಂದ ಅದನ್ನು ಪ್ರತ್ಯೇಕವಾಗಿಯೇ ಮಾಡಬೇಕಾಗುತ್ತದೆ. ಆದ್ದರಿಂದ ಅಪೊಲೊ ಯೋಜನೆಯ ಅನಂತರ ಆದದ್ದೇನು ಎಂಬ ಪ್ರಶ್ನೆಗೆ ವೈಜ್ಞಾನಿಕ ಉತ್ತರವನ್ನು ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಯೋಜನೆಯ ನಿರ್ಮಾಪಕ ರಾಷ್ಟ್ರವಾದ ಅಮೆರಿಕದ ಸಂಯುಕ್ತ ಸಂಸ್ಥಾನಗಳ ವಿಜ್ಞಾನಿಗಳ ಚಿಂತನೆ ಎರಡು ಸ್ಪಷ್ಟ ದಿಶೆಗಳಲ್ಲಿ ಹರಿಯಿತು.

		ಮೊದಲನೆಯದು ಅಂತರಿಕ್ಷ ನಿಲ್ದಾಣಗಳ ಸ್ಥಾಪನೆ-ಸ್ಪೇಸ್ ಸ್ಟೇಷನ್ಸ್ ಎಂದು ಇವನ್ನು ಇಂಗ್ಲಿಷಿನಲ್ಲಿ ಕರೆಯುತ್ತಾರೆ. ಭೂಮಿಯ ಸುತ್ತ ನಿರಂತರವಾಗಿ ಸುತ್ತಲು ಇಂಥ ನೌಕೆಯನ್ನು 1973ರಲ್ಲಿ ಉಡಾಯಿಸಲಾಯಿತು. ಸೂರ್ಯ, ಚಂದ್ರ ಹಾಗೂ ಭೂಮಿಯನ್ನು ಕುರಿತು ಹೆಚ್ಚಿನ ಜ್ಞಾನವನ್ನು ಗಳಿಸುವುದು ಈ ಅಂತರಿಕ್ಷ ನಿಲ್ದಾಣ ಯೋಜನೆಯ ಒಂದು ಉದ್ದೇಶವಾಗಿತ್ತು.
		ವಿಜ್ಞಾನಿಗಳ ಚಿಂತನೆ ಹರಿದಿರುವ ಎರಡನೆಯ ದಿಶೆ ಎಂದರೆ ಚಂದ್ರನ ವಸಾಹತೀಕರಣ. ಚಂದ್ರಪರಿಸರ ಮಾನವನ ಮುಕ್ತವಾಸಕ್ಕೆ ಸರ್ವಥಾ ಅಯೋಗ್ಯ ಎಂಬುದು ಸಿದ್ಧವಾಗಿದ್ದರೂ ಈ ಆಸೆ ಏಕೆ ಎಂಬ ಪ್ರಶ್ನೆಗೆ ಉತ್ತರ ಬಲು ಸರಳ-ಮನುಷ್ಯನ ಅದಮ್ಯ ಸಾಹಸ ಪ್ರವೃತ್ತಿ. ಚಂದ್ರನ ನಿರ್ವಾತಪ್ರದೇಶದಲ್ಲಿ, ದೂಳಿನಿಂದ ಕಲುಷಿತವಾಗಿರದ ಮತ್ತು ಮನುಷ್ಯಕೃತ ಬೆಳಕಿನಿಂದ ಮಲಿನವಾಗಿರದ ಆವರಣದಲ್ಲಿ, ಕಡಿಮೆ ಗುರುತ್ವದ ಪ್ರಭಾವದಲ್ಲಿ, ಖಗೋಳ ವೀಕ್ಷಣಾಲಯಗಳ ಸ್ಥಾಪನೆ ಮತ್ತು ಅವುಗಳಿಂದ ವೀಕ್ಷಣೆ ಹೆಚ್ಚು ಸುಲಭ ಹಾಗೂ ಫಲಕಾರಿ. ಅಲ್ಲಿ ಸಂಗ್ರಹಿಸಲ್ಪಡುವ ದತ್ತಾಂಶಗಳು ಹೆಚ್ಚು ನಿಷ್ಕøಷ್ಟ. ಚಂದ್ರನಲ್ಲಿ ಸ್ಥಾಪಿಸಬಹುದಾದ ದೂರದರ್ಶಕಗಳು ಪ್ರಪಂಚದ ಅನೇಕ ದೊಡ್ಡ ದೂರದರ್ಶಕಗಳಿಗಿಂತ ಅದೆಷ್ಟೋ ಪಟ್ಟು ಹೆಚ್ಚು ವಿವರಗಳನ್ನು ಇನ್ನಷ್ಟು ನಿಷ್ಕøಷ್ಟವಾಗಿ ಒದಗಿಸಬಲ್ಲದೆಂದು ವಿಜ್ಞಾನಿಗಳು ಭಾವಿಸಿದ್ದರು. ರೇಡಿಯೋ ದೂರದರ್ಶಕದ ವಿಚಾರದಲ್ಲೂ ಇದು ಅಷ್ಟೇ ಸತ್ಯ. ಖಗೋಳ ವಿಜ್ಞಾನಿಗಳಿಗೆ ಹೇಗೋ ಭೂವಿಜ್ಞಾನಿಗಳಿಗೂ ಹಾಗೆ ಚಂದ್ರ ಬಲು ದೊಡ್ಡ ಪ್ರಿಯ. ಭೂಮಿಯ ಮೈಯನ್ನು ಸತತವಾಗಿ ಘಾಸಿಗೊಳಿಸಬಹುದಾದ ಗಾಳಿ, ಮಳೆ, ನೀರಿನ ಪ್ರವಾಹ, ಜೀವಿಕ್ರಿಯೆ ಅಲ್ಲಿಲ್ಲ. ಜ್ವಾಲಾಮುಖಿಗಳ ಚಟುವಟಿಕೆ ಈಗ ಅಲ್ಲಿ ಪ್ರಕಟವಾಗುತ್ತಿಲ್ಲ. ನೇರವಾಗಿ ಚಂದ್ರನ ಮೈಮೇಲೆ ಪಾತವಾಗುವ ಸೌರವಿಕಿರಣ, ಅದರಿಂದ ಉದ್ಭವಿಸುವ ಉಷ್ಣತೆಯ ತೀವ್ರ ಏರಿಳಿತಗಳನ್ನು ಬಿಟ್ಟರೆ ಚಂದ್ರನ ಭೌತಸ್ಥಿತಿಯನ್ನು ಬದಲಾಯಿಸುವ ಬೇರಾವ ಕಾರಕವೂ ಅಲ್ಲಿಲ್ಲ. ಅಪೊಲೋ ಕಾರ್ಯಕ್ರಮದ ಮೊದಲು ಇಂಥ ಪ್ರದೇಶದಲ್ಲಿ ಭೂವಿಜ್ಞಾನಿಗಳು ಚಂದ್ರನ ಹುಟ್ಟಿನಿಂದ ತೊಡಗಿ ಇಂದಿನವರೆಗಿನ ಸಮಸ್ತ ವಿಕಾಸಗಳ ಅಚ್ಚಳಿಯದ ವಿಪುಲ ದಾಖಲೆಗಳನ್ನು ಕಾಣುವ ತವಕದಿಂದಿದ್ದರು. ಚಂದ್ರನಲ್ಲಿ ಸ್ಥಾಪಿಸಬಹುದಾದ ಭೂ ಹವಾವೀಕ್ಷಣಾಲಯ ಭೂ ನಿವಾಸಿಗಳಿಗೆ ಅಲ್ಲಿನ ಹವೆಯನ್ನು ಕುರಿತು ನಿಷ್ಕøಷ್ಟ ಮತ್ತು ವ್ಯಾಪಕವಿವರಗಳನ್ನು ಒದಗಿಸಬಲ್ಲುದೆಂದು ಹವಾವಿಜ್ಞಾನಿಗಳು ಭಾವಿಸಿದ್ದರು. ಚಂದ್ರಗರ್ಭದಲ್ಲಿ ಹುದುಗಿರಬಹುದಾದ ಖನಿಜ ಸಂಪತ್ತಿನ ಅಂದಾಜು ಸಂಪೂರ್ಣವಾಗಿ ಯಾರಿಗೂ ಇಲ್ಲ. ಸೌರವ್ಯೂಹದ ಇತರ ಗ್ರಹಗಳಿಗೆ ಯಾನ ಮಾಡಲು ಮನುಷ್ಯನಿಗೆ ಸಹಜವಾಗಿ ಒದಗುವ ಪ್ರಥಮ ನೈಸರ್ಗಿಕ ಅಂತರಿಕ್ಷನಿಲ್ದಾಣ ಚಂದ್ರ. ಅಲ್ಲಿನ ಭೌತಬಲಗಳು ಭೂಮಿಗಿಂತ ತೀರ ಭಿನ್ನವಾದ್ದರಿಂದ ಹಲವಾರು ವಿಶೇಷ ಯಂತ್ರಸ್ಥಾವರಗಳ ರಚನೆ ಮತ್ತು ಸ್ಥಾಪನೆ ಸಾಕಷ್ಟು ಲಾಭದಾಯಕವಾಗಬಹುದು. ಅವುಗಳ ಉತ್ಪನ್ನಗಳನ್ನು ಚಂದ್ರನಿಂದ ಭೂಮಿಗೆ ಸಾಗಿಸಲು ತಾಗುವ ಖರ್ಚನ್ನು ಭರಿಸಿಯೂ ಅವು ಲಾಭ ನೀಡಬಹುದು ಎಂದು 1970ರ ದಶಕದ ಪ್ರಾರಂಭದಲ್ಲಿ ನಂಬಲಾಗಿತ್ತು. ಆದ್ದರಿಂದ ಅಜ್ಞಾತ ಲೋಕದ ಅಸಂಖ್ಯಾತ ವಿಭವಗಳನ್ನು ಮಾನವ ಕಲ್ಯಾಣಕ್ಕಾಗಿ ಅಳವಡಿಸಲು ಚಂದ್ರನ ವಸಾಹತೀಕರಣ ಅವಶ್ಯ. ಇದು ಹೇಗೆ ನಡೆಯಬಹುದು ಎನ್ನುವ ದಿಶೆಯಲ್ಲೂ ಸಾಕಷ್ಟು ವೈಜ್ಞಾನಿಕ ಚಿಂತನೆ ಹರಿದಿದೆ. ಚಂದ್ರಲೋಕದ ಮಾನವ ಜೀವನಕ್ಕೆ ಅವಶ್ಯವಾದ ಕೃತಕ ಭೂಪರಿಸರವನ್ನು ಸೃಷ್ಟಿಸಿ ಇದು ನಿರಂತರವಾಗಿಯೂ ಸ್ವಯಂ ಉತ್ಪಾದನೆ ಆಗುತ್ತಿರುವಂಥ ಕ್ರಿಯಾ ವಿನ್ಯಾಸವನ್ನು ಏರ್ಪಡಿಸಬೇಕು. ಚಂದ್ರವಸಾಹತಿಗೂ ಭೂಮಿಗೂ ನಡುವೆ ಮನುಷ್ಯರನ್ನು ಸರಾಗವಾಗಿ ಒಯ್ಯಬಲ್ಲ ವಾಹನಗಳು ಜೆಟ್ ವಿಮಾನಗಳಂತೆ ಅನುದಿನದ ವಿದ್ಯಮಾನಗಳಾಗಿರಬೇಕು. ಇಂತಹ ಕಲ್ಪನಾವಿಲಾಸದಲ್ಲಿ ವಿಜ್ಞಾನಿಗಳು ಈಗ್ಗೆ 35 ವರ್ಷಗಳ ಹಿಂದೆ ಮುಳುಗಿದ್ದರು. ಚಂದ್ರನಲ್ಲಿಗೆ ಮಾನವರು ಹಿಂತಿರುಗುವುದಕ್ಕೆ ಬೆಂಬಲವನ್ನು ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಜೂನಿಯರ್ ಅವರು 2004ರಲ್ಲಿ ವ್ಯಕ್ತಪಡಿಸಿದರು. ನಿಖರ ಪ್ರಯೋಗ ಮತ್ತು ನಿಷ್ಕøಷ್ಟ ವೀಕ್ಷಣೆ ಇವನ್ನು ಬೆಸೆಯುವ ಸಿದ್ಧಾತದ ಶಿಲ್ಪಿ ಕಲ್ಪನೆ; ವಿಜ್ಞಾನದ ವಿಕಾಸದಲ್ಲಿ ಈ ಕಲ್ಪನೆಯ ಪಾತ್ರ ಅಲ್ಪವೇನಲ್ಲ. 			(ಜಿ.ಟಿ.ಎನ್.)	ಪರಿಷ್ಕರಣೆ: ಬಿ.ಆರ್.ಜಿ.

		ಚಂದ್ರ (ಭಾರತೀಯ ಪುರಾಣ, ಜ್ಯೋತಿಷಗಳಲ್ಲಿ): ನವಗ್ರಹಗಳಲ್ಲಿ ಒಬ್ಬ. ಗ್ರಹಮಂಡಲಗಳಲ್ಲಿ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಮಂಡಲದ ಅಧಿಪತಿ. ಈ ಆಧಿಪತ್ಯ ಮನ್ವಂತರ ಬದಲಾದಂತೆಲ್ಲ ಬದಲಾಯಿಸುತ್ತದೆ. ಸ್ವಾಯಂಭುವ ಮನ್ವಂತರದಲ್ಲಿ ಅತ್ರಿಋಷಿಯ ಮಗ ಚಂದ್ರನಾಗಿದ್ದನೆಂದು ಶ್ರೀಮದ್ಭಾಗವತದಲ್ಲಿದೆ. ಬ್ರಹ್ಮನಿಂದ ಸೃಷ್ಟಿಕಾರ್ಯದಲ್ಲಿ ನಿಯುಕ್ತನಾದ ಅತ್ರಿ ತಪಸ್ಸು ಮಾಡುತ್ತಿದ್ದಾಗ ಆತನ ಕಣ್ಣುಗಳಿಂದ ನೀರು ಸುರಿಯಲು ಅದರಿಂದ ಹತ್ತುದಿಕ್ಕುಗಳನ್ನು ಬೆಳಗುವ ದಿವ್ಯ ಕಾಂತಿ ಉದ್ಭವಿಸಿ ಲೋಕವನ್ನೆಲ್ಲ ಆವರಿಸುತ್ತದೆ. ಆ ತೇಜಸ್ಸಿಗೆ ಮರುಳಾದ ದಶದಿಕ್ಕುಗಳು ಹೆಣ್ಣಿನ ರೂಪದಿಂದ ಆ ಬೆಳಗುತ್ತಿರುವ ದಿವ್ಯಕಾಂತಿಯನ್ನು ಬಹಳ ಕಾಲ ಗರ್ಭದಲ್ಲಿ ಧರಿಸಿದ್ದು ಕೊನಗೆ ಅದನ್ನು ತಾಳಲಾರದೆ ಹೊರಗೆಡಹುತ್ತವೆ. ಆಗ ಬ್ರಹ್ಮ ಆ ಗರ್ಭಪಿಂಡಗಳನ್ನೆಲ್ಲ ಒಟ್ಟುಗೂಡಿಸಿ ಸರ್ವಾಯುಧಗಳಿಂದ ಕೂಡಿದ ಒಬ್ಬ ತರುಣನನ್ನು ನಿರ್ಮಿಸಿ ಆತನನ್ನು ಸಾವಿರ ಕುದುರೆಗಳನ್ನು ಹೂಡಿದ ವೇದ ಶಕ್ತಿ ಸ್ವರೂಪವಾದ ಒಂದು ರಥದಲ್ಲಿ ಕುಳ್ಳಿರಿಸಿಕೊಂಡು ತನ್ನ ನಿವಾಸಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ದೇವತೆಗಳೂ, ಋಷಿಗಳೂ, ಓಷಧಿಗಳೂ ಈ ಪುರುಷನನ್ನು ಸೋಮದೇವತಾಕ ಮಂತ್ರಗಳಿಂದ ಹೊಗಳುತ್ತಾರೆ. ಪಾರ್ವತೀಸಹಿತನಾದ ಶಿವನೂ ಈ ಯುವಕನನ್ನು ತನ್ನ ಎಂಟನೆಯ ಒಂದು ಅಂಶದಿಂದ ನೋಡಿ ಅನುಗ್ರಹಿಸುತ್ತಾನೆ. ಈ ಕಾರಣದಿಂದ ಈತನಿಗೆ ಸೋಮನೆಂಬ ಹೆಸರು ಬಂದಿದೆ. ದೇವತೆಗಳು ಸ್ತುತಿಸಿದಂತೆಲ್ಲ ಈತನ ತೇಜಸ್ಸು ಹೆಚ್ಚಿ ಅದರಿಂದ ಓಷಧಿಗಳೆಲ್ಲ ರಸಯುಕ್ತವಾಗುತ್ತವೆ. ಇದರಿಂದ ಓಷಧೀಶ, ದ್ವಿಜರಾಜ ಎಂಬ ಹೆಸರುಗಳೂ ಬಂದಿವೆ. ಬ್ರಹ್ಮ ಈ ತರುಣನನ್ನು ಚಂದ್ರಗ್ರಹಮಂಡಲಕ್ಕೆ ಅಧಿಪತಿಯನ್ನಾಗಿ ಮಾಡುತ್ತಾನೆ. ಸೃಷ್ಟ್ಯಾದಿಯಿಂದ ಪ್ರಳಯಕಾಲದವರೆಗೂ ಶಾಶ್ವತವಾಗಿರುವ ಈ ಗ್ರಹಮಂಡಲ ರೂಪ ದೇವಗೃಹಗಳು ಪುಣ್ಯವಂತರ ಪುಣ್ಯಫಲ ಭೋಗಕ್ಕಾಗಿ ಸೃಷ್ಟಿಯಾಗಿವೆ. ಈಗ ನಡೆಯುತ್ತಿರುವ ವೈವಸ್ವತಮನ್ವಂತರದಲ್ಲಿ ಧರ್ಮಪ್ರಜಾಪತಿಯಿಂದ ವಸುಮ್ನಿ ಎಂಬುವಳಲ್ಲಿ ಹುಟ್ಟಿದ ತ್ವಿಷಿ ಅಥವಾ ವಸು ಎಂಬಾತ ಚಂದ್ರನ ಸ್ಥಾನದಲ್ಲಿದ್ದಾನೆ. ಚಂದ್ರನಿಗೆ ಇಂದು ಓಷಧೀಶ, ಅಬ್ಜ, ಕುಮುದಬಂಧು, ಕಲಾನಿಧಿ, ಗ್ಲೌಃ, ರೋಹಿಣೀಕಾಂತ, ಕ್ಷಪಾಕರ, ನಿಶಾಕರ, ತಾರೇಶ, ನಕ್ಷತ್ರೇಶ, ಜೈವಾತೃಕ, ಹಿಮಕರ, ಅಮೃತಕಿರಣ, ವಿಧು ಎಂಬಹೆಸರುಗಳೂ ಪ್ರಚಲಿತವಾಗಿವೆ. ತನ್ನನ್ನು ನೋಡುವವರಿಗೆ ಆಹ್ಲಾದವನ್ನುಂಟುಮಾಡುವುದರಿಂದಲೂ ತಾನು ಪ್ರಕಾಶಿಸುತ್ತಿರುವುದರಿಂದಲೂ ಈ ಗ್ರಹಕ್ಕೆ ಚಂದ್ರ ಎಂಬ ಹೆಸರು ಅನ್ವರ್ಥವಾಗಿ ಬಂದಿದೆ. ಉಳಿದ ಹೆಸರುಗಳು ಆತನ ಹುಟ್ಟು ಮತ್ತು ಗುಣಗಳನ್ನು ಅನುಸರಿಸಿ ಬಂದಿವೆ. ಬ್ರಹ್ಮ ಸೃಷ್ಟಿಸಲು ಇಷ್ಟಪಟ್ಟೊಡನೆಯೆ ಮನಸ್ಸಿನಿಂದ ಚಂದ್ರನನ್ನು ಸೃಷ್ಟಿಸಿದನೆಂದು ಸೂರ್ಯಸಿದ್ಧಾಂತದಲ್ಲಿ ಹೇಳಿದೆ.

		ಚಂದ್ರ ದಕ್ಷಪುತ್ರಿಯರಲ್ಲಿ ನಕ್ಷತ್ರ ಸ್ವರೂಪರಾದ ಆಶ್ವಿನಿ ಮೊದಲಾದ 27 ಕನ್ಯೆಯರನ್ನು ಮದುವೆಯಾಗುತ್ತಾನೆ. ಆದರೆ ಅವರಲ್ಲಿ ರೋಹಿಣಿ ಎಂಬುವಳಲ್ಲಿ ಮಾತ್ರ ವಿಶೇಷವಾಗಿ ಲೋಲನಾಗಿರುತ್ತಾನೆ. ಉಳಿದವರು ಈ ವಿಷಯವನ್ನು ತಮ್ಮ ತಂದೆಯಾದ ದಕ್ಷಬ್ರಹ್ಮನಲ್ಲಿ ಹೇಳಿಕೊಳ್ಳಲು ಆತ ಚಂದ್ರನಿಗೆ ಕ್ಷಯರೋಗ ಪೀಡಿತನಾಗುವಂತೆ ಶಾಪವನ್ನು ಕೊಡುತ್ತಾನೆ. ಇದನ್ನು ಕೇಳಿದ ಚಂದ್ರ ಭಯಪಟ್ಟು ಶಿವನಲ್ಲಿ ಮೊರೆಯಿಡುತ್ತಾನೆ. ಶಿವ ಪ್ರೀತನಾಗಿ ಆಗವನಿಗೆ ಅಭಯಪ್ರಧಾನ ಮಾಡಲು ಚಂದ್ರ ಸುಖವಾಗಿರುತ್ತಾನೆ. ಈ ಸ್ಥಿತಿಯನ್ನರಿತ ದಕ್ಷ ಶಿವನಿಗೆ ಶಾಪಕೊಂಡಬೇಕೆಂದು ಬಗೆಯುತ್ತಾನೆ. ಅಷ್ಟರಲ್ಲಿ ಬ್ರಹ್ಮವಿಷ್ಣುಗಳು ಅಲ್ಲಿಗೆ ಬಂದು ಚಂದ್ರನನ್ನು ಎರಡು ಭಾಗಮಾಡಿ ಒಂದು ಭಾಗಕ್ಕೆ ವೃದ್ಧಿಕ್ಷಯಗಳಿಲ್ಲದಂತೆ ಮಾಡಿ ಆ ಭಾಗವನ್ನು ನಕ್ಷತ್ರಗಳಿಗೆ ಕೊಡುತ್ತಾರೆ. ದಕ್ಷಶಾಪದಿಂದ ಖಿನ್ನನಾದ ಚಂದ್ರ ದಕ್ಷನ ಸಂಪತ್ತು ನಾಶವಾಗುವಂತೆ ಶಾಪಕೊಟ್ಟು ಎಲ್ಲಿಯೋ ಅಡಗಿಕೊಳ್ಳುತ್ತಾನೆ. ಚಂದ್ರದರ್ಶನವಿಲ್ಲದೆ ಪೈರುಗಿಡ ಮರಬಳ್ಳಿಗಳೆಲ್ಲ ಸಾರಹೀನವಾಗುತ್ತವೆ. ದೇವತೆಗಳೆಲ್ಲ ಆಗ ಬ್ರಹ್ಮನಲ್ಲಿ ಮೊರೆಯಿಡುತ್ತಾರೆ. ಬ್ರಹ್ಮನ ಸೂಚನೆಯಂತೆ ಅವರೆಲ್ಲ ಒಟ್ಟುಗೂಡಿ ಓಷಧಿಗಳನ್ನೆಲ್ಲ ತಂದು ಕ್ಷೀರಸಮುದ್ರದಲ್ಲಿ ಹಾಕಿ ಕಡೆಯುತ್ತಾರೆ. ಅಲ್ಲಿಂದ ಚಂದ್ರ ಉದ್ಭವಿಸಿ ಬರುತ್ತಾನೆ. ಶಾಪಗ್ರಸ್ತನಾದ ಚಂದ್ರ ಪ್ರಭಾಸತೀರ್ಥದಲ್ಲಿ ಸ್ನಾನಮಾಡಿದ ಕೂಡಲೆ ಕ್ಷಯರೋಗ ನಿವಾರಣೆಯಾಗುತ್ತದೆ.

		ಚಂದ್ರ ಬೃಹಸ್ಪತ್ಯಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗುರುಪತ್ನಿಯಾದ ತಾರೆಗೂ ಈತನಿಗೂ ಮೋಹ ಅಂಕುರಿಸುತ್ತದೆ. ಬೃಹಸ್ಪತಿ ಇಲ್ಲದ ವೇಳೆಯಲ್ಲಿ ಚಂದ್ರ ತಾರೆಯನ್ನು ಅಪಹರಿಸುತ್ತಾನೆ. ಇದನ್ನು ತಿಳಿದ ಬೃಹಸ್ಪತಿ ಬ್ರಹ್ಮನಲ್ಲಿ ಮೊರೆಯಿಡುತ್ತಾನೆ. ಬ್ರಹ್ಮನ ಆದೇಶದಂತೆ ಚಂದ್ರ ತಾರೆಯನ್ನು ಬೃಹಸ್ಪತಿಗೆ ಒಪ್ಪಿಸುತ್ತಾನೆ. ಆ ವೇಳೆಗೆ ತಾರೆ ಚಂದ್ರನಿಂದ ಗರ್ಭ ಧರಿಸಿದ್ದ ಕಾರಣ ಮಗುವಿನ ವಿಚಾರದಲ್ಲಿ ವಿವಾದ ಹುಟ್ಟುತ್ತದೆ. ಬ್ರಹ್ಮ ತಾರೆಯಿಂದ ವಸ್ತುಸ್ಥಿತಿಯನ್ನು ತಿಳಿದು ಮಗು ಚಂದ್ರನಿಗೇ ಸೇರತಕ್ಕದೆಂದು ನಿಷ್ಕರ್ಷಿಸುತ್ತಾನೆ. ಇದರಿಂದ ತಾರೆಯಲ್ಲಿ ಜನಿಸಿದ ಬುಧ ಚಂದ್ರನ ಮಗನಾಗುತ್ತಾನೆ ಎಂದು-ಪುರಾಣಗಳಲ್ಲಿದೆ.

		ಒಮ್ಮೆ ಪ್ರಾಚೇತಸಮುನಿ ಕ್ರುದ್ಧನಾಗಿ ಗಿಡಮರ ಬಳ್ಳಿಗಳನ್ನು ಸುಡಲು ತೊಡಗುತ್ತಾನೆ. ಆಗ ಓಷಧಿಗಳೆಲ್ಲ ತಮ್ಮ ಒಡೆಯನಾದ ಚಂದ್ರನಲ್ಲಿ ಮೊರೆಯಿಡುತ್ತವೆ. ಚಂದ್ರ ವೃಕ್ಷಪುತ್ರಿಯಾದ ಮಾರಿಷೆ ಎಂಬ ಕನ್ನೆಯನ್ನು ಪ್ರಾಚೇತಸನಿಗೆ ಕೊಡಿಸಿ ಅವನ ಕೋಪವನ್ನು ಶಾಂತಗೊಳಿಸಿ ವೃಕ್ಷಗಳ ದುಃಖವನ್ನು ಪರಿಹರಿಸುತ್ತಾನೆಂದು ವಿಷ್ಣಪುರಾಣದಲ್ಲಿದೆ.

		ದೇವತೆಗಳೂ ದೈತ್ಯರೂ ಕೂಡಿ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಕಡೆದು ಅಮೃತವನ್ನು ಪಡೆದ ಬಳಿಕ ಅದರ ಪ್ರಾಶನಕ್ಕಾಗಿ ಎಲ್ಲರೂ ಕುಳಿತಿದ್ದ ವೇಳೆಯಲ್ಲಿ ರಾಹು ಎಂಬ ಅಸುರ ದೇವತೆಗಳ ಗುಂಪಿನಲ್ಲಿ ಸೇರಿ ತಾನೂ ಅಮೃತಪ್ರಾಶನ ಮಾಡುತ್ತಾನೆ. ಸೂರ್ಯಚಂದ್ರರು ಇದನ್ನು ವಿಷ್ಣುವಿಗೆ ತಿಳಿಸುತ್ತಾರೆ. ಕೂಡಲೇ ವಿಷ್ಣು ಆ ರಕ್ಕಸನ ಶಿರಸ್ಸನ್ನು ಕತ್ತರಿಸುತ್ತಾನೆ. ಆ ವೇಳೆಗೆ ರಕ್ಕಸ ಅಮೃತಪ್ರಾಶನ ಮಾಡಿದ್ದುದರಿಂದ ರಾಹುವಿನ ರುಂಡಮುಂಡಗಳೆರಡೂ ರಾಹು-ಕೇತುಗಳೆಂಬ ಹೆಸರಿನಿಂದ ಸಜೀವವಾಗುತ್ತವೆ. ಸೂರ್ಯಚಂದ್ರರು ತನ್ನ ಮೇಲೆ ದೂರು ಹೇಳಿದರೆಂಬ ದ್ವೇóಷದಿಂದ ರಾಹು ಆಗಾಗ್ಗೆ, ವರ್ಷಕಾಲಗಳಲ್ಲಿ ಅವರನ್ನು ಪೀಡಿಸುತ್ತಾನೆ-ಎಂಬ ಪೌರಾಣಿಕ ಕಥೆ ಇದೆ.

		ಗಣಪತಿ ತನ್ನ ಪತ್ನಿಯರಾದ ಸಿದ್ದಿಬುದ್ಧಿಗಳೊಡನೆ ಮೂಷಕವಾಹವನ್ನೇರಿ ಲೋಕಸಂಚಾರ ಮಾಡುತ್ತ ಚಂದ್ರಲೋಕಕ್ಕೆ ಬಂದು ಅಲ್ಲಿ ಸ್ವೇಚ್ಛೆಯಾಗಿ ತಿರುಗಾಡುತ್ತಾನೆ. ಆಗ ಸೌಂದರ್ಯಸಂಪನ್ನನಾಗಿದ್ದ ಚಂದ್ರ ಗಣಪತಿಯ ರೂಪವನ್ನು ನೋಡಿ ಅಪಹಾಸ್ಯ ಮಾಡಿ ನಗುತ್ತಾನೆ. ಅದನ್ನು ಕಂಡು ಗಣಪತಿಗೆ ಕೋಪ ಬಂದು ಕಣ್ಣುಗಳನ್ನು ಕೆಂಪಾಗಿ ಮಾಡಿ ದುರದುರನೆ ಚಂದ್ರನನ್ನು ನೋಡಿ-ಎಲೌ ಮದಾಂಧನೆ ನಿನ್ನ ಗರ್ವವನ್ನು ನಾನು ಬಲ್ಲೆ. ನನ್ನನ್ನು ಹಾಸ್ಯ ಮಾಡಿದುದಕ್ಕೆ ತಕ್ಕ ಫಲವನ್ನು ನೀನು ಅನುಭವಿಸುತ್ತೀಯೆ. ಇಂದಿನಿಂದ ನಿನ್ನ ಸೌಂದರ್ಯ ಕುಂದಿಹೋಗಲಿ. ನೀನು ಮೃಗಲಾಂಛನನಾಗಿ ಬಾಳು. ಭಾದ್ರಪದ ಮಾಸ ಶುಕ್ಷಪಕ್ಷದ ಚತುರ್ಥಿದಿನದಂದು ಯಾರು ನಿನ್ನನ್ನು ನೋಡುವರೋ ಅವರಿಗೆ ಮಿಥ್ಯಾಪವಾದ ಉಂಟಾಗಲಿ. ಇದು ನನ್ನ ಶಾಪ-ಎಂದು ಹೇಳುತ್ತಾನೆ. ಚಂದ್ರ ತನಗೆ ಬಂದ ಶಾಪಕ್ಕೆ ಹೆದರಿ ಕಂಗೆಟ್ಟು ಕಮಲಮಧ್ಯದಲ್ಲಿ ಅಡಗಿಕೊಳ್ಳುತ್ತಾನೆ. ಮುಂದೆ ಅವನ ಪ್ರಕಾಶವೇ ಇಲ್ಲದಂತಾಗುತ್ತದೆ. ಅಮೃತಪಾನ ಜೀವಿಗಳಾದ ದೇವತೆಗಳಿಗೆ ಅಮೃತಕಿರಣನಾದ ಚಂದ್ರನಿಲ್ಲದ ಕಾರಣ ಆಹಾರವೇ ಇಲ್ಲದಂತಾಗುತದೆ. ಇದರಿಂದ ನೊಂದ ದೇವತೆಗಳು ಬ್ರಹ್ಮನಲ್ಲಿಗೆ ಬಂದು ಆತನನ್ನು ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಆಗ ಬ್ರಹ್ಮ ಈ ಗಣಪತಿಯ ಶಾಪವನ್ನು ಪರಿಹರಿಸುವಂತೆ ಕೇಳಿಕೊಳ್ಳಬೇಕೆಂದು ತಿಳಿಸಿ ಸಂಕಷ್ಟಹರ ಗಣಪತಿವ್ರತವನ್ನು ಉಪದೇಶ ಮಾಡುತ್ತಾನೆ. ಚಂದ್ರ ಈ ವ್ರತದಿಂದ ಗಣಪತಿಯನ್ನು ತುಷ್ಟಿಪಡಿಸುತ್ತಾನೆ. ಬಳಿಕ ಪ್ರಾರ್ಥನೆಯಿಂದ ವಿಶಾಪವನ್ನು ಕೊಡುತ್ತಾನೆ. ಅದರಂತೆ ಭಾದ್ರಪದ ಶುದ್ಧ ಚತುರ್ಥಿಯಂದು ಚಂದ್ರನನ್ನು ಮೊದಲು ದರ್ಶನ ಮಾಡಿದವರಿಗೆ ಈ ದೋಷ ಉಂಟಾಗುವುದಿಲ್ಲ ಎಂದು ಸ್ಯಮಂತಕೋಪಾಖ್ಯಾನದ ಕಥೆ ಹೇಳುತ್ತದೆ. 

		ಚಂದ್ರ ಸ್ವಯಂಪ್ರಕಾಶವುಳ್ಳ ಗ್ರಹವಲ್ಲ, ಸಹಸ್ರಕಿರಣನಾದ ಸೂರ್ಯನ ಕಿರಣಗಳಲ್ಲಿ ಸುಷುಮ್ನಾ ಎಂಬ ಕಿರಣ ಪ್ರತಿಬಿಂಬಿತವಾಗುತ್ತದಾಗಿ ಆತ ಪ್ರಕಾಶಿಸುತ್ತಾನೆ. ಚಂದ್ರನ ದೇಹ ಶುಕ್ಲವರ್ಣದಿಂದ ಕೂಡಿ ಜಲಮಯವಾಗಿದೆ.

		ಸೂರ್ಯನಿಗೆ ಕೆಳಗಿರುವ ಚಂದ್ರನ ಸೂರ್ಯಾಭಿಮುಖವಾದ ಅರ್ಧಭಾಗ ಸೂರ್ಯನ ಕಾಂತಿಯಿಂದ ಪ್ರಕಾಶಿಸುತ್ತದೆ. ಬಿಸಿಲಿನಲ್ಲಿಟ್ಟ ಮಡಕೆಯಂತೆ ಉಳಿದ ಅರ್ಧಭಾಗ ಕಪ್ಪಗಿರುತ್ತದೆ; ಜಲಮಯವಾದ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬಿದ್ದು ಕನ್ನಡಿಯಲ್ಲಿನಂತೆ ಪ್ರತಿಬಿಂಬಿತವಾಗಿ ಅಲ್ಲಿರುವ ಕತ್ತಲೆ ಹೋಗುತ್ತದೆ ಎಂದು ವರಾಹಮಿಹಿರನ ಬೃಹತ್ ಸಂಹಿತೆಯಲ್ಲಿದೆ.

		ಅಷ್ಟಮೂರ್ತಿ ಸ್ವರೂಪಗಳಲ್ಲಿ ಚಂದ್ರ ಮಹಾದೇವಸ್ವರೂಪಿ ಆಗಿದ್ದಾನೆ. ಶ್ರೀಕೃಷ್ಣಜಯಂತಿ ದಿವಸ ರೋಹಿಣಿಸಹಿತನಾದ ಚಂದ್ರನಿಗೆ ಅಘ್ರ್ಯಪ್ರಧಾನ ಮಾಡುವುದು ಇಂದಿಗೂ ರೂಢಿಯಲ್ಲಿದೆ.

		ಚಂದ್ರ ಸುತ್ತುವ ಕಕ್ಷೆಯ ಪ್ರಮಾಣ 3,24,000 ಯೋಜನಗಳು. ಒಂದು ಕಲ್ಪದಲ್ಲಿ ಚಂದ್ರ 5,77,33,00,000 ಬಾರಿ ಆವರ್ತಿಸುತ್ತಾನೆ. ಚಂದ್ರನನ್ನು ಮಂದೋಚ್ಚ ಮತ್ತು ಪಾತವೆಂಬ ಎರಡು ಶಕ್ತಿಗಳು ತಮ್ಮ ತಮ್ಮ ಕಡೆಗೆ ಸೆಳೆಯುತ್ತವೆ. ಈ ಸೆಳೆತದಿಂದ ಚಂದ್ರನಿಗೆ ಗತಿ ಉಂಟಾಗುತ್ತವೆ. ಒಂದು ಕಲ್ಪದಲ್ಲಿ ಚಂದ್ರನ ಮಂದೋಚ್ಚ 48,81,05,858 ಭಗಣಗಳು. ಚಂದ್ರನ ಪಾತ 23,23,11,168 ಭಗಣಗಳು. ಚಂದ್ರನ ದೈನಂದಿನ ಗತಿ 13 ಅಂಶ 34 ಕಲೆ 52 ವಿಕಲೆ 4 ಪ್ರವಿಕಲೆ ಎಂದು ಸೂರ್ಯಸಿದ್ಧಾಂತದಲ್ಲಿ ಉಕ್ತವಾಗಿದೆ.

		ಭಾಸ್ಕರಾಚಾರ್ಯ ತಿಳಿಸಿರುವಂತೆ ಚಂದ್ರನ ಮೇಲ್ಭಾಗದಲ್ಲಿ ಪಿತೃದೇವತೆಗಳು ವಾಸಿಸುತ್ತಾರೆ.
	ಕನ್ನಡ ಜಾತಕ ತಿಲಕದ ಕರ್ತೃವಾದ ಶ್ರೀಧರಾಚಾರ್ಯ (ಕ್ರಿ.ಶ. 1049)
	ಮೃದುವಾಕ್ಯನಸೃಕ್ಸಾರಂ
	ಸುದೃಷ್ಟಿ ಮೇಧಾವಿ ನಿಡಿಯನನಿಲಕಫಾತ್ಮಂ
	ಸದಯಂ ಚೊಚ್ಚನೆ ಮೈ ಬ
	ಟ್ಟಿದನತಿಚಪಳಂ ಸುಖಪ್ರಿಯಾಸಸಿಯೆನಿಕುಂ
(ಮೃದುಭಾಷಿ, ರಕ್ತಪುಷ್ಟ, ನೋಡಲು ಸುಂದರ, ಮೇಧಾವಿ, ಸ್ನೇಹಪರ, ದಯಾವಂತ, ಎತ್ರರವಾದ ಕಫವಾತಗಳಿಂದ ಕೂಡಿದ ಗುಂಡುಶರೀರ, ಬಿಳುಪುಬಣ್ಣ, ಚಪಲಸ್ವಭಾವದವ) ಎಂದು ಚಂದ್ರ ಸ್ವರೂಪವನ್ನು ವರ್ಣಿಸಿದ್ದಾನೆ.

	ವಿಷ್ಣುವಿನ ಕಣ್ಣೂ ಶಂಕರನ ಶಿರೋಭೂಷಣವೂ ಅತ್ರಿಪುತ್ರನೂ ಶ್ವೇತವಸ್ತ್ರಧಾರಿಯೂ ಗದಾಪಾಣಿಯೂ ಸರ್ವಾಭರಣಭೂಷಿತನೂ ಶ್ವೇತಛತ್ರದಿಂದ ಕೂಡಿದವನೂ ಹತ್ತು ಬಿಳಿಕುದುರೆಗಳುಳ್ಳ ರಥದಲ್ಲಿ ಚತುರಸ್ರಾಕಾರದ ಪೀಠದ ಮೇಲೆ ಪಶ್ಚಿಮಾಭಿಮುಖನಾಗಿ, ಅಭಯ ಮತ್ತು ವರದ ಮುದ್ರೆಗಳಿಂದ ಕೂಡಿ ವಿರಾಜಿಸುತ್ತಿರುವ ಚಂದ್ರನನ್ನು ಧ್ಯಾನಿಸಿದರೆ ಕ್ಷಯ ಅಪಸ್ಮಾರ ಕುಷ್ಠ ತಾಪಜ್ವರ ಮೊದಲಾದ ಉಪದ್ರವಗಳು ನಿವಾರಿತವಾಗಿ ಸರ್ವಸಂಪತ್ಸಮೃದ್ಧಿಯುಂಟಾಗುತ್ತದೆಯೆಂದು ಬ್ರಹ್ಮಾಂಡಪುರಾಣದಲ್ಲಿ ಹೇಳಿದೆ. ಚಂದ್ರಗ್ರಹವನ್ನುದ್ದೇಶಿಸಿ ಮಾಡುವ ಹೋಮದಲ್ಲಿ ಪಲಾಶಸಮಿತ್ತನ್ನು ಉಪಯೋಗಿಸಬೇಕು. ನವಗ್ರಹಪೂಜೆ ಮಾಡುವಾಗ ಚಂದ್ರನನ್ನು ಅಗ್ನೇಯಭಾಗದಲ್ಲಿಟ್ಟು ಪೂಜಿಸಬೇಕು.

	ಕಾಮಶಾಸ್ತ್ರದಲ್ಲಿ
	ಪೂಷಾಯಶಾಸುಮನಸಾ ರತಿಪ್ರಾಪ್ತಿಸ್ತಥಾ ಧೃತಿಃ
	ಋದ್ಧಿ ಸ್ಸೌಮ್ಯಾಮರೀಚಿಶ್ಚ ತಥಾಚೈವಾಂಶುಮಾಲಿನೀ
	ಅಂಗಿರಾ ಶಶಿನೀಚೇತಿ ಛಾಯಾ ಸಂಪೂರ್ಣ ಮಂಡಲಾ 
	ತುಷ್ಟಿಶ್ಚ್ಯೆ ವಾಮೃತಾಚೇತಿ ಕಲಾಸ್ಸೋಮಸ್ಯ ಷೋಡಶ ಎಂದೂ

ಮಂತ್ರಶಾಸ್ತ್ರದಲ್ಲಿ
	ಅಮೃತಾ ಮಾನದಾ ಪೂಷಾ ಪುಷ್ಟಿಸ್ತುಷ್ಟೀ ರತಿರ್ಧೃತಿಃ
	ಶಶಿನೀ ಚಂದ್ರಿಕಾ ಕಾಂತಿಜ್ರ್ಯೋತ್ಸ್ನಾ ಶ್ರೀಃ ಪ್ರೀತಿರಂಗದಾ
	ಪೂರ್ಣಾಪೂರ್ಣಾಮೃತಾಕಾಮದಾಯಿನ್ಯಃ ಶಶಿನಃ ಕಲಾಃ
ಎಂದೂ ಚಂದ್ರನ ಹದಿನಾರು ಕಲೆಗಳು ಉಕ್ತವಾಗಿವೆ.

		ತಿಥಿಭೇದದಿಂದ ಸ್ತ್ರೀಯರ ಅಂಗವಿಶೇಷಗಳಲ್ಲಿ ಇರುವ ಕಾಮನನ್ನು ಪ್ರತ್ಯೇಕವಾಗಿ ಓಂಕಾರಸಹಿತ ಈ ಕಲಾನಾಮರೂಪ ಮಂತ್ರಗಳಿಂದ ಚಲಿಸುವಂತೆ ಮಾಡಬಹುದು. ಚಂದ್ರಗ್ರಹಕ್ಕೆ ಅಧಿದೇವತೆ ಅಪ್ಪು (ನೀರು), ಪ್ರತ್ಯಧಿದೇವತೆ ಉಮಾ(ಗೌರಿ). 

		ಶುಕ್ಲಪಕ್ಷದ ಪ್ರಾರಂಭದಲ್ಲಿ ಏಕಕಲಾಮಾತ್ರದಿಂದ ಕೂಡಿದ ಚಂದ್ರ ಒಂದೊಂದು ತಿಥಿಗೆ ಒಂದೊಂದು ಕಲೆಯಂತೆ ಕೂಡಿಕೊಂಡು ಪೂರ್ಣಿಮಾ ತಿಥಿಯಲ್ಲಿ ಷೋಡಶ ಕಲಾ ಪರಿಪೂರ್ಣನಾಗುತ್ತಾನೆ. ಸೂರ್ಯನ ತೇಜಸ್ಸಿನಿಂದ ಈತ ವೃದ್ಧಿಹೊಂದುತ್ತಾನೆ. ಕೃಷ್ಣಪಕ್ಷದಲ್ಲಿ ಪ್ರಥಮ ಮೊದಲಾದ ತಿಥಿಕ್ರಮದಲ್ಲಿ ಅಗ್ನಿ, ವಾಯು, ವಿಶ್ವದೇವರು, ಪ್ರಜಾಪತಿ, ವರುಣ, ವಾಸವ ದಿವ್ಯಋಷಿಗಳು, ಅಷ್ಟವಸುಗಳು, ಇಂದ್ರ, ಮರುದ್ದೇವತೆಗಳು, ರುದ್ರ, ವಿಷ್ಣು, ಕುಬೇರ, ಪಶುಪತಿ, ಪಿತೃಗಳು-ಇವರು ಅಮೃತರೂಪದ ಚಂದ್ರನ ಕಲೆಗಳನ್ನು ಪಾನಮಾಡುವುದರಿಂದ ಚಂದ್ರ ಕ್ಷಯಿಸಿ ಅಮಾವಾಸ್ಯೆಯಲ್ಲಿ ಏಕಕಲಾವಶಿಷ್ಟನಾಗುತ್ತಾನೆ.

		ಶುಕ್ಲಪಕ್ಷ ಪ್ರಥಮೆಯ ದಿನದಂದು ಚಂದ್ರಬಿಂಬದ ಕೆಳಪಾಶ್ರ್ವದಿಂದ ಶೌಕ್ಲ್ಯ ವೃದ್ಧಿಯಾಗುತ್ತದೆ. ಇದು ಶೃಂಗದಂತೆ ಕಾಣುತ್ತದೆ. ಕೆಲವು ವೇಳೆ ಉತ್ತರಕ್ಕೆ ಶೃಂಗ ಎದ್ದು ಕಾಣುತ್ತದೆ. ಭಾರತದಲ್ಲಿ ಸಾಧಾರಣವಾಗಿ ಇದು ಮಿಥುನ ಮಾಸದಿಂದ ಮಕರ ಮಾಸದವರೆಗೆ ಆಗುತ್ತದೆ. ವೃಷಭ ಮತ್ತು ಕುಂಭಮಾಸಗಳಲ್ಲಿ ಚಂದ್ರನ ಎರಡು ಶೃಂಗಗಳೂ ಸಮವಾಗಿರುತ್ತವೆ. ಉಳಿದ ತಿಂಗಳುಗಳಲ್ಲಿ ಶೃಂಗ ದಕ್ಷಿಣಕ್ಕೆ ಎದ್ದು ಕಾಣುತ್ತದೆ.
ಕವಿಸಮಯದಲ್ಲೂ ಚಂದ್ರ ಪ್ರಮುಖ ಪಾತ್ರ ವಹಿಸಿದ್ದಾನೆ. ಸೌಂದರ್ಯ ವರ್ಣನೆಯಲ್ಲಿ ಮುಖವನ್ನು ಚಂದ್ರನಿಗೆ ಹೋಲಿಸುತ್ತಾರೆ.	ವಿರಹಿಗಳಿಗೆ ಚಂದ್ರೋದಯವಾದಾಗ ತಾಪ ಅಧಿಕವಾಗುವುದನ್ನೂ ಕಾಮಿಗಳಿಗೆ ಕಾಮೋದ್ರೇಕವಾಗುವುದನ್ನೂ ಕವಿಗಳು ಬಗೆಬಗೆಯಾಗಿ ವರ್ಣಿಸಿದ್ದಾರೆ. 							(ಎಸ್.ಎನ್.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ